ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತ ಸುರಿಯುವವರೆಗೂ ನನ್ನ ಮಗ ಮೈ ಪರಚಿಕೊಳ್ಳುತ್ತಾನೆ. ನಮ್ಮ ಮಗುವನ್ನು ರಕ್ಷಿಸಲು ದಯವಿಟ್ಟು ಸಹಾಯ ಮಾಡಿ. ಇನ್ನು ಹಣವಿಲ್ಲದೇ ನನ್ನ ಮಗನನ್ನು ಈ ಯಕೃತ್ತಿನ ಕಾಯಿಲೆಯಿಂದ ಸಂರಕ್ಷಿಸಲು ಸಾಧ್ಯವೇ ಇಲ್ಲದಂತಾಗಿದೆ

Last Updated 22 ಜನವರಿ 2018, 14:41 IST
ಅಕ್ಷರ ಗಾತ್ರ

ರಕ್ತ ಸುರಿಯುವವರೆಗೂ ನನ್ನ ಮಗ ಮೈ ಪರಚಿಕೊಳ್ಳುತ್ತಾನೆ. ನಮ್ಮ ಮಗುವನ್ನು ರಕ್ಷಿಸಲು ದಯವಿಟ್ಟು ಸಹಾಯ ಮಾಡಿ. ಇನ್ನು ಹಣವಿಲ್ಲದೇ ನನ್ನ ಮಗನನ್ನು ಈ ಯಕೃತ್ತಿನ ಕಾಯಿಲೆಯಿಂದ ಸಂರಕ್ಷಿಸಲು ಸಾಧ್ಯವೇ ಇಲ್ಲದಂತಾಗಿದೆ.

ಮತಿಭ್ರಮನೆಗೆ ಒಳಗಾದವರಂತೆ ಮೈ ಪರಚಿಕೊಳ್ಳುತ್ತಾನೆ. ಪರಚಿಕೊಳ್ಳುವ ಪರಿಗೆ ಚರ್ಮ ಕಿತ್ತು ರಕ್ತ ಸುರಿಯುವಷ್ಟು ಗಟ್ಟಿಯಾಗಿ ಪರಚಿಕೊಳ್ಳುತ್ತಾನೆ. ಆತ ನನ್ನ ಮಗ ನಿಹಾಲ್. ಹೀಗೆ ಆತನು, ತುಂಬಾ ದಿನಗಳಿಂದ ವಿಚಿತ್ರವಾಗಿ ದೈಹಿಕ ಹಿಂಸೆ ಅನುಭವಿಸುವುದನ್ನು ಕಂಡು ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮೂಕವೇದನೆ ಅನುಭಸುತ್ತಿದ್ದೇವೆ. ಏಕೆಂದರೆ, 2 ವರ್ಷದ ನನ್ನ ಕಂದ ನಿಹಾಲ್ ಹುಟ್ಟುವಾಗಲೇ ಆತನ ಒಂದು ಯಕೃತ್ತು ನಿಷ್ಕ್ರಿಯವಾಗಿತ್ತು. ಇದೇ ಕಾರಣದಿಂದಾಗಿ ಆತ ನಿರಂತರವಾಗಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುವಂತಾಗಿದೆ ಮತ್ತು ಈ ಅಸಹಾಯಕ ತಂದೆಯ ಹತಾಶೆಯ ಕಥೆಯನ್ನು ಇಂದು ನೀವು ಓದುವಂತಾಗಿದೆ.

ನಿಹಾಲ್‍ನ ಯಕೃತ್ತಿನ ಸಮಸ್ಯೆ ತಿಳಿದಾಗಿನಿಂದಲೂ ನಾವು ಅವನನ್ನು ಆ ರೋಗದ ಕಬಂಧಬಾಹುಗಳಿಂದ ಬಚಾವು ಮಾಡಲು ನಮ್ಮ ಶಕ್ತಿಮೀರಿ ಪ್ರಯತ್ನಿಸಿದ್ದಾಯಿತು. ಆದರೆ, ಆತನ ನಿಷ್ಕ್ರಿಯ ಯಕೃತ್ತನ್ನು ತೆರವುಗೊಳಿಸಿ ಆರೋಗ್ಯವಂತ ಯಕೃತ್ತನ್ನು ಕಸಿ ಮಾಡುವುದು ಒಂದೇ ಕೊನೆಯ ಉಪಾಯ ಎಂದು, ಎರಡು ಶಸ್ತ್ರಚಿಕಿತ್ಸೆಗಳ ನಂತರವಷ್ಟೇ ತಿಳಿದುಬಂದಿತು. ಒಂದು ಯಕೃತ್ತು ಕಸಿ ಮಾಡುವ ಚಿಕಿತ್ಸೆಗೆ ಸುಮಾರು ರೂ.15 ಲಕ್ಷ ಭರಿಸಬೇಕಾಗುತ್ತದೆ ಎಂಬ ವಾಸ್ತವ ಗೊತ್ತಾದಾಗ, ನಮ್ಮ ಕಣ್ಣುಗಳಿಗೆ ಮಂಕು ಕವಿದಂತಾಯಿತು. ಇವರ ನಿಧಿ ಸಂಗ್ರಹಕಾರರಿಗೆ ದಾನ ನೀಡುವ ಮೂಲಕ ನೀವು ಕೂಡ ಇವರು ತಮ್ಮ ಮಗುವನ್ನು ಉಳಿಸಿಕೊಳ್ಳಲು ಸಹಾಯ ಮಾಡಬಹುದು.

ಅದೃಷ್ಟವಶಾತ್, ನನ್ನ ಹೆಂಡತಿಯ ಯಕೃತ್ತು ನಿಹಾಲ್‍ಗೆ ಹೊಂದಾಣಿಕೆ ಆಗುತ್ತದೆ ಎಂಬುದೂ ಗೊತ್ತಾಯಿತು. ಇವಳು ಕೂಡ ತನ್ನ ಅಂಗಾಂಗ ದಾನಕ್ಕೆ ಸಿದ್ಧಳಾಗಿದ್ದಾಳೆ. ಅದಾಗ್ಯೂ, ನಿಹಾಲ್‍ಗೆ ಚಿಕಿತ್ಸೆ ಕೊಡಿಸಲು ಆರಂಭ ಮಾಡುವುದೇ ನಮಗೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಕೃತ್ತಿನ ದಾನಿ ನನ್ನವಳೇ ಆಗಿದ್ದರು ಕೂಡ, ಕಸಿ ಚಿಕಿತ್ಸಾ ವೆಚ್ಚ ಭರಿಸುವಷ್ಟು ಶಕ್ತವಾಗಿಲ್ಲ ನಮ್ಮ ಕುಟುಂಬ. ನಾವು ಇನ್ನೇನೇನೊ ಶತಪ್ರಯತ್ನ ಮಾಡಿ ಒಂದಿಷ್ಟು ಹಣ ಹೊಂಚಬಹುದಾದರೂ, ಕೇವಲ ಒಂದು ವಾರದೊಳಗೆ ಇಂಥದೊಂದು ಮೊತ್ತವನ್ನು ಕೂಡಿಹಾಕುವಷ್ಟು ಸ್ಥಿತಿಯಲ್ಲಿಲ್ಲ. ಆದ್ದರಿಂದ, ದಯಮಾಡಿ ನಮಗೆ ಸಹಾಯ ಮಾಡಿರಿ.

ನಾನು ನಿಹಾಲ್‍ನ ತಂದೆ ರಾಮಕೃಷ್ಣ. ನನ್ನ ಕುಟುಂಬದ ಜೊತೆಗೆ ವಾರಂಗಲ್‍ನಲ್ಲಿ ವಾಸಿಸುತ್ತಿದ್ದೇನೆ. ನಾನು ಚಿಕ್ಕವನಿದ್ದಾಗಲೇ ನನ್ನ ತಂದೆ ತೀರಿಹೋದರು. ಹೀಗಾಗಿ ನಾನು ನನ್ನ ಓದು ನಿಲ್ಲಿಸಿ ಕುಟುಂಬದ ಜವಾಬ್ದಾರಿ ಹೊರಬೇಕಾಯಿತು. ತಂದೆ ಕಾಲವಾದ ತಕ್ಷಣ ಒಂದು ಚಿನಿವಾರ ಅಂಗಡಿಯಲ್ಲಿ ಕಡಿಮೆ ಸಂಬಳಕ್ಕೆ ಅಕೌಂಟಂಟ್ ಕೆಲಸಕ್ಕೆ ಸೇರಿಕೊಂಡೆ. ಇದೀಗ ಇಷ್ಟೊಂದು ವರ್ಷಗಳೇ ಕಳೆದಿದ್ದರೂ, ಇನ್ನೂವರೆಗೆ ನಾನು ತಿಂಗಳಿಗೆ 12 ಸಾವಿರ ಮಾತ್ರ ಸಂಪಾದಿಸಬಲ್ಲವನಾಗಿದ್ದೇನೆ.

ನನ್ನ ಮಗನ ಆರೋಗ್ಯ ಸುಧಾರಣೆಗಾಗಿ, ಇಲ್ಲಿಯವರೆಗೆ ಸುಮಾರು 17 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದೇನೆ. ಈಗ ಮಗನ ಚಿಕಿತ್ಸೆ ಮುಂದುವರಿಸಲು ನನ್ನ ಬಳಿ ಬಿಡಿಗಾಸೂ ಉಳಿದಿಲ್ಲ. ಅಲ್ಲದೇ ಇನ್ನೂ ಸಾಕಷ್ಟು ವೈದ್ಯಕೀಯ ಶುಲ್ಕಗಳನ್ನು ಕಟ್ಟುವುದು ಕೂಡ ಬಾಕಿ ಉಳಿದಿವೆ. ಆದರೆ, ಜೇಬಿನಲ್ಲಿ ನಯಾ ಪೈಸೆಯೂ ಇಲ್ಲವಾಗಿದೆ.

ನವೆಂಬರ್ 2015 ರಿಂದಲೂ ಹೀಗೆಯೇ ನಾವು ಮಗನನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇವೆಯೊ ಎಂದು ಆತಂಕದಲ್ಲಿಯೇ ದಿನಗಳನ್ನು ಕಳೆಯುತ್ತಿದ್ದೇವೆ. ಆವಾಗ ಒಂದು ಬಾರಿ ನಿಹಾಲ್ ಭಯಂಕರ ಜ್ವರದ ತಾಪದಿಂದ ಬಳಲತೊಡಗಿದ್ದ. ಅದರ ಜೊತೆಗೆ ನಿರಂತರವಾಗಿ ವಾಂತಿ ಕೂಡ ಮಾಡಿಕೊಳ್ಳತೊಡಗಿದಾಗ, ನಾವು ಭಯದಿಂದ ಕುಸಿದು ಕಂಗಾಲಾಗಿದ್ದೆವು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ನಿಹಾಲ್‍ಗೆ ಜಾಂಡೀಸ್ ಆಗಿರಬಹುದೆಂದು ಚಿಕಿತ್ಸೆ ನೀಡಿ ಔಷಧೋಪಚಾರ ಸೂಚಿಸಿದ್ದರು. ಸುಮಾರು ಒಂದು ತಿಂಗಳ ಬಳಿಕ, ಹತ್ತು ಹಲವು ತಪಾಸಣೆಗಳ ನಂತರವಷ್ಟೇ ನಿಹಾಲ್‍ನ ಯಕೃತ್ತಿನ ರೋಗ ಪತ್ತೆಯಾಯಿತು. ಆ ಕರಾಳ ದಿನದಿಂದ ಇಂದಿನ ಅವಧಿಯೊಳಗೆ ನಮ್ಮ ಬದುಕು ಲಯ ಕಳೆದುಕೊಂಡುಬಿಟ್ಟಿದೆ.

ರಾಮಕೃಷ್ಣರವರು ತಮ್ಮ ಮಗನ ಯಕೃತ್ತು ಕಸಿ ಚಿಕಿತ್ಸಾ ವೆಚ್ಚ ಭರಿಸಲು ಹೆಣಗಾಡುತ್ತಿದ್ದಾರೆ. ನೀವು ನಿಮ್ಮ ಶಕ್ತಿಗನುಸಾರ ದಾನ ಮಾಡಿ ಅವರ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗಬಹುದು. ಈ ರೋಗದಿಂದಾಗಿ ನನ್ನ ಮಗ ಅನುಭವಿಸುತ್ತಿರುವ ಯಾತನೆ ಮತ್ತು ಅವಸ್ಥೆಯನ್ನು ನೋಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಿರಂತರವಾಗಿ ತುರಿಕೆ ಉಂಟಾಗುವುದರಿಂದ ಆತನಿಗೆ ಅರೆಕ್ಷಣವೂ ನೆಮ್ಮದಿ ಇಲ್ಲದಂತಾಗಿದೆ. ಆತ ಮೈ ಪರಚಿಕೊಳ್ಳುವುದನ್ನು ತಡೆಯಲು ನಾವೂ ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ ಸಹಿಸಲಾಗದ ನೋವಿನಿಂದಾಗಿ ಅವನು ಪರಚಿಕೊಳ್ಳುವುದನ್ನು ನಿಲ್ಲಿಸುತ್ತಿಲ್ಲ. ಆ ತುರಿಕೆಯ ಅನುಭವ ಮನುಷ್ಯನನ್ನು ಹೇಗೆ ಹಣಿಯುತ್ತದೆ ಎಂಬುದನ್ನು ಯೋಚಿಸಿಯೇ ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಆ ಮಗುವಿನ ಅವಸ್ಥೆ ಹೇಗೊ ಏನೋ? ಪರಚಿ ಪರಚಿ ರಕ್ತ ಸುರಿಯಲು ಆರಂಭವಾದಾಗ, ಜೋರಾಗಿ ಕಿರುಚುತ್ತಾನೆ, ರೋಧಿಸುತ್ತಾನೆ.

ಮೊದಲನೇ ಶಸ್ತ್ರಚಿಕಿತ್ಸೆಯಲ್ಲಿ ಆತನದೇ ಯಕೃತ್ತಿನ ಸ್ವಲ್ಪ ಭಾಗವನ್ನು ಬಳಸಿಕೊಳ್ಳಲಾಗಿದೆ. ಈ ಚಿಕಿತ್ಸಾ ವೆಚ್ಚ ಭರಿಸುವಷ್ಟರಲ್ಲಿ ನಮ್ಮ ಹಣವೆಲ್ಲ ಖಾಲಿಯಾಗಿತ್ತು. ಆದರೆ, ಮಗನ ದೈಹಿಕ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ಇದೀಗ ನನ್ನ ಮಗನನ್ನು ಈ ಗಂಡಾಂತರಕಾರಿ ಸ್ಥಿತಿಯಿಂದ ಬಚಾವು ಮಾಡಲು ಯಕೃತ್ತು ಕಸಿ ಮಾಡುವುದೊಂದೇ ಅಂತಿಮ ದಾರಿ ಎನ್ನಲಾಗುತ್ತಿದೆ. ವಿವಿಧ ತಪಾಸಣೆಗಳಿಗಾಗಿ ಸುಮಾರು ರೂ.3 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ ಬಳಿಕ, ನನ್ನ ಹೆಂಡತಿಯ ಯಕೃತ್ತು ನಿಹಾಲ್‍ನಿಗೆ ಹೊಂದಾಣಿಕೆ ಆಗುತ್ತದೆ ಎಂದು ತಿಳಿದುಬಂದಿದೆ. ಇದೀಗ ನಮ್ಮ ಬಳಿ ಯಕೃತ್ತು ಲಭ್ಯವಿದೆ, ಆದರೆ ಕಸಿ ಚಿಕಿತ್ಸಾ ವೆಚ್ಚ ಭರಿಸುವ ಶಕ್ತಿಯೇ ಇಲ್ಲವಾಗಿದೆ. ಈಗ ನಮಗೆ ಹಣ ಮಾತ್ರ ಅತ್ಯಗತ್ಯವಾಗಿದೆ-ಹೇಗೊ ಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ.

ನಮ್ಮ ಮಗು ಉಸಿರಾಡುವ ಪ್ರತಿ ಬಾರಿಯೂ ತನ್ನ ಜೀವನ್ಮರಣದ ಹೋರಾಟದಲ್ಲಿ ಸೆಣಸುತ್ತಿರುವುದನ್ನು ಕಂಡಾಗ ಉಂಟಾಗುವ ನೋವು ಘೋರವಾಗಿದೆ. ಯಾವ ಪಾಲಕರಿಗೂ ಇಂತಹದೊಂದು ಕಠೋರ ಸನ್ನಿವೇಶವದ ಅನುಭವ ಉಂಟಾಬಾರದು. ದಯವಿಟ್ಟು ನಮಗೆ ಸಹಾಯ ಮಾಡಿ. ನೆರವು ನೀಡಿ. ಈ ಯಾತನಾಮಯ ಕಾಯಿಲೆಯಿಂದ ನಮ್ಮ ಮಗುವನ್ನು ರಕ್ಷಿಸಲು ನಿಮ್ಮಿಂದ ಸಾಧ್ಯವಾದ ಆಶೀರ್ವಾದ ನೀಡಿರಿ.

ರಾಮಕೃಷ್ಣ ರವರಿಗೆ ನೆರವಾಗಲು, ನೀವು ಕೂಡ ಕೀಟೊ ಸಂಸ್ಥೆಯ ನಿಧಿ ಸಂಗ್ರಹಣೆಯಲ್ಲಿ ದಾನ ನೀಡಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT