ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿ: ವಿನಯ್‌ ಪಡೆಗೆ ನಿರಾಸೆ

Last Updated 9 ಜನವರಿ 2018, 19:30 IST
ಅಕ್ಷರ ಗಾತ್ರ

ವಿಜಯನಗರ, ಆಂಧ್ರಪ್ರದೇಶ: ಕೆ.ವಿ.ಶಶಿಕಾಂತ್‌ (32ಕ್ಕೆ3) ದಾಳಿಗೆ ಬೆದರಿದ ಕರ್ನಾಟಕ ತಂಡದವರು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಆಂಧ್ರ ಎದುರಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋತರು.

ಪಿ.ವಿ.ಜಿ. ರಾಜು ಎಸಿಎ ಕ್ರೀಡಾ ಸಂಕೀರ್ಣದ ಮೈದಾನದಲ್ಲಿ ಮೊದಲು ಬ್ಯಾಟ್‌ ಮಾಡಿದ ಆರ್‌.ವಿನಯ್‌ ಕುಮಾರ್‌ ಬಳಗ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 156ರನ್‌ ಗಳಿಸಿತು.

ಸವಾಲಿನ ಗುರಿಯನ್ನು ಹನುಮವಿಹಾರಿ ಸಾರಥ್ಯದ ಆಂಧ್ರ 18.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ತಂಡ ಎರಡನೇ ಓವರ್‌ನಲ್ಲಿ ಮಯಂಕ್‌ ಅಗರವಾಲ್‌ ವಿಕೆಟ್‌ ಕಳೆದುಕೊಂಡಿತು. ಗೋವಾ ಎದುರಿನ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಅವರು 2 ರನ್‌ ಗಳಿಸಿದ್ದ ವೇಳೆ ಶಿವಕುಮಾರ್‌ಗೆ ವಿಕೆಟ್‌ ನೀಡಿದರು.

ಆರಂಭಿಕರಾಗಿ ಬಡ್ತಿ ಪಡೆದಿದ್ದ ಕರುಣ್‌ ನಾಯರ್‌ (19; 11ಎ,2ಸಿ) ಅಬ್ಬರಿಸುವ ಸೂಚನೆ ನೀಡಿದ್ದರು. ನಾಲ್ಕನೇ ಓವರ್‌ ಬೌಲ್‌ ಮಾಡಿದ ಶಿವಕುಮಾರ್‌ ಐದನೇ ಎಸೆತದಲ್ಲಿ ಕರುಣ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು.

ಸ್ಟುವರ್ಟ್‌ ಬಿನ್ನಿ (ಔಟಾಗದೆ 47; 32ಎ, 2ಬೌಂ, 2ಸಿ) ಮತ್ತು ನಾಯಕ ವಿನಯ್‌ (25; 20ಎ, 2ಸಿ) ಬಿರುಸಿನ ಆಟ ಆಡಿ ತಂಡದ ರನ್‌ ಗಳಿಕೆಗೆ ವೇಗ ತುಂಬಿದರು. ಪ್ರವೀಣ್‌ ದುಬೆ (10) ಕೂಡ ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ನಡೆಸಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 156 (ಕರುಣ್‌ ನಾಯರ್‌ 19, ಆರ್‌.ಸಮರ್ಥ್‌ 22, ಮನೀಷ್‌ ಪಾಂಡೆ 14, ಸ್ಟುವರ್ಟ್‌ ಬಿನ್ನಿ ಔಟಾಗದೆ 48, ಆರ್‌.ವಿನಯ್‌ ಕುಮಾರ್‌ 25, ಪ್ರವೀಣ್‌ ದುಬೆ 10; ಶಿವಕುಮಾರ್‌ 29ಕ್ಕೆ2, ಅಯ್ಯಪ್ಪ ಬಂದಾರು 34ಕ್ಕೆ2, ಹನುಮ ವಿಹಾರಿ 11ಕ್ಕೆ1, ಕೆ.ವಿ.ಶಶಿಕಾಂತ್‌ 32ಕ್ಕೆ3). ಆಂಧ್ರ: 18.2 ಓವರ್‌ಗಳಲ್ಲಿ 3 ವಿಕೆಟ್‌ಗೆ 157 (ಅಶ್ವಿನ್‌ ಹೆಬ್ಬಾರ್‌ 35, ರಿಕಿ ಭುಯಿ ಔಟಾಗದೆ 46, ಡಿ.ಬಿ.ರವಿತೇಜ 33, ; ಎಸ್‌.ಶ್ರೀನಾಥ್‌ 27ಕ್ಕೆ1, ಸ್ಟುವರ್ಟ್‌ ಬಿನ್ನಿ 14ಕ್ಕೆ1). ಫಲಿತಾಂಶ: ಆಂಧ್ರ ತಂಡಕ್ಕೆ 7 ವಿಕೆಟ್‌ ಗೆಲುವು ಹಾಗೂ 4 ಪಾಯಿಂಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT