ವಾಷಿಂಗ್ಟನ್

ಎಚ್1ಬಿ: ನೀತಿ ಯಥಾಸ್ಥಿತಿ ಭಾರತದ ಟೆಕಿಗಳು ನಿರಾಳ

ಎಚ್1ಬಿ ವೀಸಾ ಹೊಂದಿರುವವರು ದೇಶ ತೊರೆಯುವಂತೆ ಮಾಡುವ ಯಾವುದೇ ಪ್ರಸ್ತಾವವನ್ನು ಪರಿಗಣಿಸುವ ಉದ್ದೇಶ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತಕ್ಕಿಲ್ಲ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಭಾರತದ ಟೆಕಿಗಳಿಗೆ ಈ ನಿರ್ಧಾರ ಕೊಂಚ ಸಮಾಧಾನ ತಂದಿದೆ.

ಎಚ್1ಬಿ: ನೀತಿ ಯಥಾಸ್ಥಿತಿ ಭಾರತದ ಟೆಕಿಗಳು ನಿರಾಳ

ವಾಷಿಂಗ್ಟನ್: ಎಚ್1ಬಿ ವೀಸಾ ಹೊಂದಿರುವವರು ದೇಶ ತೊರೆಯುವಂತೆ ಮಾಡುವ ಯಾವುದೇ ಪ್ರಸ್ತಾವವನ್ನು ಪರಿಗಣಿಸುವ ಉದ್ದೇಶ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತಕ್ಕಿಲ್ಲ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಭಾರತದ ಟೆಕಿಗಳಿಗೆ ಈ ನಿರ್ಧಾರ ಕೊಂಚ ಸಮಾಧಾನ ತಂದಿದೆ.

‘ಒಂದೊಮ್ಮೆ ಬಿಗಿ ನೀತಿ ಅನುಸರಿಸಿದರೂ ಉದ್ಯೋಗಿಗಳು ಒಂದು ವರ್ಷಕ್ಕೆ ವೀಸಾ ವಿಸ್ತರಿಸುವ ಬೇಡಿಕೆ ಸಲ್ಲಿಸಬಹುದು. ಅಮೆರಿಕ ಪೌರತ್ವ ಮತ್ತು ವಲಸೆ ಸೇವಾ ವಿಭಾಗವು (ಯುಎಸ್‌ಸಿಐಎಸ್) ವೀಸಾ ಅವಧಿ ವಿಸ್ತರಣೆ ಮಾಡಬಹುದು’ ಎಂದು ಯುಎಸ್‌ಸಿಐಎಸ್ ಮಾಧ್ಯಮ ಪ್ರತಿನಿಧಿ ಜೊನಾಥನ್ ವಾಷಿಂಗ್ಟನ್ ಅವರು ಹೇಳಿದ್ದಾರೆ.

ಎಚ್1ಬಿ ವೀಸಾ ಅವಧಿ ವಿಸ್ತರಣೆ ನಿಯಮಗಳನ್ನು ಬಿಗಿಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಯುಎಸ್‌ಸಿಐಎಸ್‌ನಿಂದ ಈ ಹೇಳಿಕೆ ಹೊರಬಿದ್ದಿದೆ. ವೀಸಾ ನಿಯಮ ಬಿಗಿಗೊಳಿಸಿದರೆ ಅಂದಾಜು 7.5 ಲಕ್ಷ ಭಾರತೀಯರು ಅಮೆರಿಕ ತೊರೆಯುವ ಸಂದರ್ಭ ಎದುರಾಗುತ್ತಿತ್ತು.

ಈ ಪ್ರಸ್ತಾವಕ್ಕೆ ಹಲವು ಉದ್ಯಮ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದರು. ‘ಅಧ್ಯಕ್ಷರ ಆಶಯದಂತೆ ಯುಎಸ್‌ಸಿಐಎಸ್ ಹಲವು ನಿಯಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಆದರೆ ಯಾರದೋ ಒತ್ತಡಕ್ಕೆ ಒಳಗಾಗಿ ನಿಲುವು ಬದಲಿಸಲಾಗುತ್ತಿದೆ ಎಂಬುದು ಶುದ್ಧ ತಪ್ಪು’ ಎಂದು ಅವರು ಸ್ಪಷ್ಟಪಡಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ಭಿನ್ನ ಸಮಯ ವಲಯ: ನಿರ್ಧಾರ ಕೈಗೊಳ್ಳದ ಸರ್ಕಾರ

ದೇಶದಲ್ಲಿ ಭಿನ್ನ ಸಮಯ ವಲಯಗಳನ್ನು ನಿಗದಿ ಮಾಡುವ ಕುರಿತು ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ಸರ್ಕಾರ ಲೋಕಸಭೆಗೆ ಬುಧವಾರ ತಿಳಿಸಿದೆ.

22 Mar, 2018

ಕೋಲ್ಕತ್ತ
ನೋಟು ರದ್ದತಿಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ: ಮೂರ್ತಿ

ಕೇಂದ್ರ ಸರ್ಕಾರ 2016ರಲ್ಲಿ ಕೈಗೊಂಡ ನೋಟು ರದ್ದತಿ ನಿರ್ಧಾರಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ...

22 Mar, 2018
ಸಿಆರ್‌ಪಿಎಫ್‌ ಯೋಧನ ಬಂಧನ

ಪೆರಿಯಾರ್‌ ಪ್ರತಿಮೆ ಭಗ್ನ ಪ್ರಕರಣ
ಸಿಆರ್‌ಪಿಎಫ್‌ ಯೋಧನ ಬಂಧನ

22 Mar, 2018
ಅಡ್ಡ ಮತದ ಸಾಧ್ಯತೆ ದಟ್ಟ

ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ
ಅಡ್ಡ ಮತದ ಸಾಧ್ಯತೆ ದಟ್ಟ

22 Mar, 2018
ಬಿಸ್ಮಿಲ್ಲಾ ಖಾನ್‌ಗೆ ಗೂಗಲ್ ಗೌರವ

ಉಸ್ತಾದ್ ಬಿಸ್ಮಿಲ್ಲಾ ಖಾನ್‌ಗೆ ಗೂಗಲ್ ಡೂಡಲ್ ಗೌರವ
ಬಿಸ್ಮಿಲ್ಲಾ ಖಾನ್‌ಗೆ ಗೂಗಲ್ ಗೌರವ

22 Mar, 2018