ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿವ ನೀರಿಗೆ ಆಗ್ರಹಿಸಿ ರಸ್ತೆ ತಡೆ

Last Updated 10 ಜನವರಿ 2018, 9:19 IST
ಅಕ್ಷರ ಗಾತ್ರ

ರೋಣ: ಪಟ್ಟಣದ 17, 18, 19 ವಾರ್ಡ್‌ಗಳಿಗೆ ಕಳೆದ 15 ದಿನಗಳಿಂದ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಯಾಗದ ಹಿನ್ನೆಲೆಯಲ್ಲಿ ವಾರ್ಡ್‌ ನಿವಾಸಿಗಳು ಪುರಸಭೆಯ ವಿರುದ್ಧ ಗದಗ-ಬಾಗಲಕೋಟಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ಮಂಗಳ ವಾರ ಪಟ್ಟಣದ ಮುಲ್ಲನ ಬಾವಿ, ಸೂಡಿ ವೃತ್ತದ ಮಧ್ಯೆ ನಡೆಯಿತು.

ಪ್ರತಿಭಟನಕಾರರು ರಸ್ತೆ ತಡೆದು ಪ್ರತಿಭಟನೆ ಮಾಡುತಿದ್ದಂತೆ 30 ನಿಮಿಷಕ್ಕೂ ಹೆಚ್ಚು ಸಮಯ ಸಂಚಾರ ಅಸ್ತವ್ಯಸ್ತವಾಯಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೋಣ ಸಿಪಿಐ ಕೆ.ಸಿ.ಪ್ರಕಾಶ ಧಾವಿಸಿ, ಪುರಸಭೆಯ ಮುಖ್ಯಾಧಿಕಾರಿಗೆ ದೂರವಾಣಿಯ ಮೂಲಕ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿ, ಪ್ರತಿಭನಕಾರರ ಮನೊಲಿಸಿ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಿದರು.

ಮುತ್ತಪ್ಪ ಕುಂಬಾರ ಮಾತನಾಡಿ, ಹಲವಾರು ಯೋಜನೆಗಳ ಮೂಲಕ ಸರ್ಕಾರ ಸಾಕಷ್ಟು ಹಣವನ್ನು ಕುಡಿ ಯುವ ನೀರಿಗಾಗಿ ಖರ್ಚು ಮಾಡುತ್ತಿದೆ. ಆದರೆ ಅದನ್ನು ವ್ಯವಸ್ಥಿತ ರೀತಿಯಲ್ಲಿ ಬಳಕೆ ಮಾಡುವಲ್ಲಿ ಪುರಸಭೆಯುವ ಸಂಪೂರ್ಣ ವಿಫಲವಾಗಿದೆ.

ಕಳೆದ 15 ದಿನಗಳಿಂದ ಕುಡಿಯುವ ನೀರಿಗಾಗಿ ವಾರ್ಡ್‌ ನಿವಾಸಿಗಳು ಹಾಹಾಕಾರ ಪಡುತ್ತಿರುವುದನ್ನು ಕಣ್ಣಾರೆ ಕಂಡರು ಪರಿಹಾರಕ್ಕೆ ಮುಂದಾಗಿಲ್ಲ. ಬುಧವಾರದೊಳಗೆ ನೀರು ಪೂರೈಕೆಯಾಗದಿದ್ದಲ್ಲಿ ಮತ್ತೆ ನಾವು ಪ್ರತಿಭಟನೆಗೆ ಮುಂದಾಗುತ್ತೆವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಭೀಮಪ್ಪ ಗಡಗಿ, ನಾಗೇಶ ಗಡಗಿ, ಬಸು ಕುಂಬಾರ, ಮುತ್ತಪ್ಪ ಕುಂಬಾರ, ಮುತ್ತಪ್ಪ ಜಗ್ಗಲ್, ಭೀಮಪ್ಪ ಗಡಗಿ, ರಮೇಶ ಕೊಪ್ಪದ, ಸಿದ್ದಪ್ಪ ಗಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT