ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಪಾಯಕ್ಕೆ ವಾಸ್ತು

Last Updated 16 ಜೂನ್ 2018, 12:03 IST
ಅಕ್ಷರ ಗಾತ್ರ

ಅಗತ್ಯ ಸೌಕರ್ಯಗಳು ಇರುವ ಮನೆಯೊಂದನ್ನು ಕಟ್ಟಿಸಿಕೊಳ್ಳುವುದು ಹಲವರ ಜೀವಮಾನದ ಕನಸು. ಅದನ್ನು ನನಸು ಮಾಡಲು ಜೀವನ ಪೂರ್ತಿ ಅವರು ಕಷ್ಟ ಪಡುತ್ತಾರೆ. ಹೊಸ ಮನೆಯಲ್ಲಿ ಯಾವುದೇ ವಿಘ್ನಗಳು ಬರಬಾರದು; ಇಡೀ ಕುಟುಂಬ ಏಳಿಗೆ ಕಾಣಬೇಕು ಎಂದು ಅವರು ಬಯಸುವುದು ಸಹಜ. ಇಂತಹ ಸಂದರ್ಭದಲ್ಲಿ ವಾಸ್ತುಶಾಸ್ತ್ರ ಅವರ ಕೈ ಹಿಡಿಯಬಹುದು.

ಮನೆ ನಿರ್ಮಿಸುವುದಕ್ಕೂ ಮುನ್ನ ಪಾಲಿಸಬಹುದಾದ ವಾಸ್ತುಶಾಸ್ತ್ರದ ಕೆಲವು ಸಲಹೆಗಳು ಇಲ್ಲಿವೆ

* ಮನೆ ನಿರ್ಮಿಸಲು ಸೂಕ್ತ ನಿವೇಶನ ಅಥವಾ ಜಮೀನು ಖರೀದಿಸಿದ ಬಳಿಕ ಮಾಡಬೇಕಾದ ಅತ್ಯಂತ ಮುಖ್ಯ ಕೆಲಸ ಎಂದರೆ, ಜಮೀನು/ನಿವೇಶನದ ಈಶಾನ್ಯ ಮೂಲೆಯಲ್ಲಿ ಬಾವಿ ತೋಡುವುದು. ಅದರಲ್ಲಿ ಸಿಗುವ ನೀರನ್ನೇ ಮನೆ ನಿರ್ಮಾಣ ಕೆಲಸಕ್ಕೆ ಬಳಸಿ. ಯಾವುದೇ ಅಡೆತಡೆ ಇಲ್ಲದೆ ನಿರ್ಮಾಣ ಕಾಮಗಾರಿ ಬೇಗ ಮುಗಿಯುವುದರ ಜೊತೆಗೆ, ಮನೆಯಲ್ಲಿ ಏಳಿಗೆಯೂ ಆಗುತ್ತದೆ

* ನಿವೇಶನ/ಜಮೀನಿನ ಪಶ್ಚಿಮ ಭಾಗವು ಉತ್ತರ ಭಾಗಕ್ಕಿಂತ ಎತ್ತರದಲ್ಲಿದ್ದರೆ ಶ್ರೇಯಸ್ಕರ. ಆ ಜಮೀನು/ನಿವೇಶನದಲ್ಲಿ ಏನೂ ಬದಲಾವಣೆ ತರದೇ ಮನೆ ಕಟ್ಟಬಹುದು. ದಕ್ಷಿಣ ಭಾಗ, ಉತ್ತರ ಭಾಗಕ್ಕಿಂತ ಎತ್ತರದಲ್ಲಿದ್ದರೂ ಒಳ್ಳೆಯದು

* ಮನೆಯ ಸುತ್ತ ಆವರಣ ಗೋಡೆ ಇರುವುದು ಮುಖ್ಯ.

* ಮನೆಯ ನಾಲ್ಕೂ ಬದಿಗಳಲ್ಲಿ ಮುಕ್ತ ಸ್ಥಳಾವಕಾಶ ಇರುವಂತೆ ನೀಲನಕ್ಷೆ ಸಿದ್ಧಪಡಿಸಿ. ಇದರಿಂದಾಗಿ ಮನೆಯ ಒಳಗೆ ಸಾಕಷ್ಟು ಬೆಳಕು ಮತ್ತು ಗಾಳಿ ಇರುತ್ತದೆ. ಆರೋಗ್ಯ ಮತ್ತು ನೆಮ್ಮದಿಯ ದೃಷ್ಟಿಯಿಂದ ಇದು ಅತ್ಯಂತ ಮುಖ್ಯ. ಪೂರ್ವ, ಈಶಾನ್ಯ ಮತ್ತು ಉತ್ತರ ದಿಕ್ಕುಗಳಲ್ಲಿ ಹೆಚ್ಚು ಖಾಲಿ ಜಾಗ ಇದ್ದಷ್ಟು ಒಳ್ಳೆಯದು. ದಕ್ಷಿಣ, ಪಶ್ಚಿಮ ಮತ್ತು ನೈರುತ್ಯ ದಿಕ್ಕುಗಳಲ್ಲಿ ಕಡಿಮೆ ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಿ. ಗಮನಿಸಬೇಕಾದ ಸಂಗತಿ ಎಂದರೆ, ಆಗ್ನೇಯ ಮತ್ತು ವಾಯವ್ಯ ದಿಕ್ಕುಗಳಲ್ಲಿ ಸಮ ಅಳತೆಯಲ್ಲಿ ಖಾಲಿ ಜಾಗ ಇರಬೇಕು

* ಮನೆಯ ಆವರಣದಲ್ಲಿ ಗಿಡಗಳನ್ನು ನೆಡಿ. (ಕೆಲವು ವಾಸ್ತು ತಜ್ಞರು ಗಿಡ ನೆಡಬಾರದು ಎಂದು ಸಲಹೆ ನೀಡುತ್ತಾರೆ. ಮರದ ನೆರಳು ಮನೆಯ ಯಾವುದೇ ಭಾಗಕ್ಕೆ ಬೀಳುವುದು ಒಳ್ಳೆಯದಲ್ಲ ಎಂಬುದು ಅವರ ಅಂಬೋಣ. ಆದರೆ ಇದು ಸರಿಯಾದ ಯೋಚನೆ ಅಲ್ಲ) ಆದರೆ, ಮನೆಯ ಗೋಡೆಯ ಪಕ್ಕದಲ್ಲಿ ಸಸಿಗಳನ್ನು ನೆಡುವುದು ಒಳ್ಳೆಯದಲ್ಲ. ದೊಡ್ಡದಾಗಿ ಬೆಳೆಯುವ ಗಿಡಗಳ ಬೇರುಗಳಿಂದ ಮನೆಗೆ ಹಾನಿಯಾಗುವ ಸಂಭವ ಇರುತ್ತದೆ.

* ಈಶಾನ್ಯ, ಪೂರ್ವ ಮತ್ತು ಉತ್ತರ ದಿಕ್ಕಿನಿಂದ ಮನೆಯೊಳಕ್ಕೆ ಹೆಚ್ಚಿನ ಗಾಳಿ, ಬೆಳಕು ಬಂದರೆ ಒಳ್ಳೆಯದು. ಹಾಗಾಗಿ ಬಾಗಿಲು ಅಥವಾ ದೊಡ್ಡ ಕಿಟಕಿಗಳನ್ನು ಈ ದಿಕ್ಕುಗಳಲ್ಲೇ ಅಳವಡಿಸಿ

* ಬಾಗಿಲುಗಳನ್ನು ಒಳಭಾಗಕ್ಕೆ ತೆರೆಯುವಂತೆಯೇ ಅಳವಡಿಸಿ. ಇದು ಮನೆಯಲ್ಲಿ ವಾಸಿಸುವವರಿಗೆ ಅದೃಷ್ಟ ತಂದುಕೊಡುತ್ತದೆ

* ಕಟ್ಟಡವು ದಕ್ಷಿಣ, ಪಶ್ಚಿಮ, ನೈರುತ್ಯ ದಿಕ್ಕುಗಳಲ್ಲಿ ಉತ್ತರ, ಪೂರ್ವ ಮತ್ತು ಈಶಾನ್ಯ ದಿಕ್ಕುಗಳಿಗಿಂತ ಎತ್ತರವಾಗಿರುವಂತೆ ನೋಡಿಕೊಳ್ಳಿ

* ಮನೆಗೆ ಐದು ಮೂಲೆಗಳಿರಬೇಕು. ಐದನೇ ಮೂಲೆ ಈಶಾನ್ಯ ದಿಕ್ಕಿಗಿದ್ದರೆ ಶುಭಸೂಚಕ

* ಅಡಿಪಾಯಕ್ಕಾಗಿ ಮಣ್ಣು ಅಗೆಯುವ ಕಾರ್ಯವನ್ನೂ ಈಶಾನ್ಯ ದಿಕ್ಕಿನಿಂದಲೇ ಆರಂಭಿಸಿ. ನಂತರ ಪೂರ್ವದಿಂದ ಉತ್ತರದತ್ತ ಅಗೆದು ನಂತರ ಆಗ್ನೇಯ ಮತ್ತು ವಾಯವ್ಯ ದಿಕ್ಕಿನಲ್ಲಿ ಅಗೆದು ಕೊನೆಗೆ ದಕ್ಷಿಣ, ಪಶ್ಚಿಮ ತಲುಪಿ ಅಂತಿಮವಾಗಿ ನೈರುತ್ಯ ದಿಕ್ಕಿನಲ್ಲಿ ಅಗೆತವನ್ನು ಪೂರ್ಣಗೊಳಿಸಿ

ಆಧಾರ: www.subhavaastu.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT