, ಹಿರಿಯ ನ್ಯಾಯಾಧೀಶರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಬರೆದ ಪತ್ರದಲ್ಲೇನಿದೆ? | ಪ್ರಜಾವಾಣಿ
ಬಂಡಾಯವೆದ್ದ ನ್ಯಾಯಾಧೀಶರು

ಹಿರಿಯ ನ್ಯಾಯಾಧೀಶರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಬರೆದ ಪತ್ರದಲ್ಲೇನಿದೆ?

ಆಚಾರಗಳನ್ನು ಗಾಳಿಯಲ್ಲಿ ತೂರುವುದು ನ್ಯಾಯಾಲದ ವಿಶ್ವಾಸರ್ಹತೆಗೆ ಧಕ್ಕೆಯನ್ನುಂಟು ಮಾಡುತ್ತದೆ. ಮನಸೋ ಇಚ್ಛೆ ನ್ಯಾಯಪೀಠಗಳನ್ನು ಬದಲಿಸುವ ಅಧಿಕಾರ ಯಾರಿಗೂ ಇಲ್ಲ.  ಸುಪ್ರೀಂ ಕೋರ್ಟ್ ಆದೇಶಗಳು ನೀತಿ ನಿಯಮಗಳಿಗೆ ತಡೆಯೊಡ್ಡುತ್ತಿವೆ.

ಕೃಪೆ: ಟ್ವಿಟರ್ (ಎಎನ್‍ಐ)

ನವದೆಹಲಿ: ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯಾಧೀಶರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚೆಲಮೇಶ್ವರ್, ರಂಜನ್ ಗೊಗೋಯಿ, ಎಂ.ಬಿ. ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಸುದ್ದಿಗೋಷ್ಠಿ ನಡೆಸಿದ್ದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರ ವಿರುದ್ಧ ದನಿಯೆತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದ ಈ ನ್ಯಾಯಾಧೀಶರು, ಈ ಬಗ್ಗೆ ದೀಪಕ್ ಮಿಶ್ರಾ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಪತ್ರದ ಒಕ್ಕಣೆ ಹೀಗಿದೆ...
ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಪೀಠಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ವಿವೇಚನೆ ಹೊಂದಿದ್ದೇವೆ. ಇದರ ಬಗ್ಗೆ ಮುಖ್ಯ ನ್ಯಾಯಾಧೀಶರ ಅಧಿಕಾರ ನಡೆಯುವುದಿಲ್ಲ. ಅವರಿಗೆ ಉಸ್ತುವಾರಿ ಮಾತ್ರ ಇರುತ್ತದೆ. ನಾವೆಲ್ಲರೂ ಸಮಾನರು, ಅದರ ನೇತೃತ್ವ ಮಾತ್ರ ಮುಖ್ಯ ನ್ಯಾಯಾಧೀಶರಿಗೆ ಇರುತ್ತದೆ. ಆಚಾರಗಳನ್ನು ಗಾಳಿಯಲ್ಲಿ ತೂರುವುದು ನ್ಯಾಯಾಲದ ವಿಶ್ವಾಸರ್ಹತೆಗೆ ಧಕ್ಕೆಯನ್ನುಂಟು ಮಾಡುತ್ತದೆ. ಮನಸೋ ಇಚ್ಛೆ ನ್ಯಾಯಪೀಠಗಳನ್ನು ಬದಲಿಸುವ ಅಧಿಕಾರ ಯಾರಿಗೂ ಇಲ್ಲ.  ಸುಪ್ರೀಂಕೋರ್ಟ್ ಆದೇಶಗಳು ನೀತಿ ನಿಯಮಗಳಿಗೆ ತಡೆಯೊಡ್ಡುತ್ತಿವೆ. ಹೈಕೋರ್ಟ್ ಗಳ ಕೆಲಸಗಳನ್ನೂ ಇದು ಅಡ್ಡಿ ಪಡಿಸುತ್ತದೆ.

ಸುದ್ದಿಗೋಷ್ಠಿಯಲ್ಲಿ ನ್ಯಾಯಾಧೀಶರು ಹೇಳಿದ್ದೇನು?
ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಾವೇನೂ ಕಾಳಜಿ ವಹಿಸಿಲ್ಲ ಎಂದು 20 ವರ್ಷಗಳು ಕಳೆದ ನಂತರ ಜನರು ಮಾತನಾಡಿಕೊಳ್ಳುವಂತೆ ಆಗಬಾರದು. ಹಾಗಾಗಿ ನಾವು ಜನರ ಮುಂದೆ ಬರುವುದು ಬಿಟ್ಟರೆ ನಮ್ಮಲ್ಲಿ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ . ಈ ರೀತಿ ಸುದ್ದಿಗೋಷ್ಠಿ ನಡೆಸಲು ನಮಗೇನೂ ಖುಷಿ ಅನಿಸುವುದಿಲ್ಲ.ಆದರೆ ನಡೆಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಎಂದಿದ್ದಾರೆ ಚೆಲಮೇಶ್ವರ್.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ಭಿನ್ನ ಸಮಯ ವಲಯ: ನಿರ್ಧಾರ ಕೈಗೊಳ್ಳದ ಸರ್ಕಾರ

ದೇಶದಲ್ಲಿ ಭಿನ್ನ ಸಮಯ ವಲಯಗಳನ್ನು ನಿಗದಿ ಮಾಡುವ ಕುರಿತು ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ಸರ್ಕಾರ ಲೋಕಸಭೆಗೆ ಬುಧವಾರ ತಿಳಿಸಿದೆ.

22 Mar, 2018

ಕೋಲ್ಕತ್ತ
ನೋಟು ರದ್ದತಿಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ: ಮೂರ್ತಿ

ಕೇಂದ್ರ ಸರ್ಕಾರ 2016ರಲ್ಲಿ ಕೈಗೊಂಡ ನೋಟು ರದ್ದತಿ ನಿರ್ಧಾರಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ...

22 Mar, 2018
ಸಿಆರ್‌ಪಿಎಫ್‌ ಯೋಧನ ಬಂಧನ

ಪೆರಿಯಾರ್‌ ಪ್ರತಿಮೆ ಭಗ್ನ ಪ್ರಕರಣ
ಸಿಆರ್‌ಪಿಎಫ್‌ ಯೋಧನ ಬಂಧನ

22 Mar, 2018
ಅಡ್ಡ ಮತದ ಸಾಧ್ಯತೆ ದಟ್ಟ

ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ
ಅಡ್ಡ ಮತದ ಸಾಧ್ಯತೆ ದಟ್ಟ

22 Mar, 2018
ಬಿಸ್ಮಿಲ್ಲಾ ಖಾನ್‌ಗೆ ಗೂಗಲ್ ಗೌರವ

ಉಸ್ತಾದ್ ಬಿಸ್ಮಿಲ್ಲಾ ಖಾನ್‌ಗೆ ಗೂಗಲ್ ಡೂಡಲ್ ಗೌರವ
ಬಿಸ್ಮಿಲ್ಲಾ ಖಾನ್‌ಗೆ ಗೂಗಲ್ ಗೌರವ

22 Mar, 2018