3 ದಿನಗಳ ಹಿಂದೆ ಬಾವಿಗೆ ಬಿದ್ದ ವ್ಯಕ್ತಿ ಜೀವಂತ ಪತ್ತೆ

ಆಕಸ್ಮಿಕವಾಗಿ ನೀರಿಲ್ಲದ ಬಾವಿಗೆ ಬಿದ್ದು, ಮೂರು ದಿನಗಳ ನಂತರ ಪತ್ತೆಯಾದ ವ್ಯಕ್ತಿ ಬದುಕುಳಿದಿರುವ ಪ್ರಕರಣ ತೋವಿನಕೆರೆಯಲ್ಲಿ ನಡೆದಿದೆ.

3 ದಿನಗಳ ಹಿಂದೆ ಬಾವಿಗೆ ಬಿದ್ದ ವ್ಯಕ್ತಿ ಜೀವಂತ ಪತ್ತೆ

ತೋವಿನಕೆರೆ (ತುಮಕೂರು): ಆಕಸ್ಮಿಕವಾಗಿ ನೀರಿಲ್ಲದ ಬಾವಿಗೆ ಬಿದ್ದು, ಮೂರು ದಿನಗಳ ನಂತರ ಪತ್ತೆಯಾದ ವ್ಯಕ್ತಿ ಬದುಕುಳಿದಿರುವ ಪ್ರಕರಣ ತೋವಿನಕೆರೆಯಲ್ಲಿ ನಡೆದಿದೆ.

ಗ್ರಾಮದ ಹನುಮಂತರಾಜು ಎಂಬುವರು ಇಲ್ಲಿನ ಸೂರೇನಹಳ್ಳಿಯಲ್ಲಿ ಮೂವತ್ತು ಅಡಿ ಉದ್ದದ ಪಾಳುಬಾವಿಗೆ ಗುರುವಾರ ಆಕಸ್ಮಿಕವಾಗಿ ಬಿದ್ದಿದ್ದರು. ಶನಿವಾರ ಬಾವಿಯಿಂದ ಬಾಯಿ ಬಡಿದು ಕೊಳ್ಳುವ ಶಬ್ದ ಕೇಳಿದ ವ್ಯಕ್ತಿ ಬಗ್ಗಿ ನೋಡಿದಾಗ ಹನುಮಂತರಾಜು ಇರುವುದು ತಿಳಿದು ಬಂದಿದೆ.

ನಂತರ ಸೂರೇನಹಳ್ಳಿ ಗ್ರಾಮದವರಿಗೆ ತಿಳಿಸಿದಾಗ ಅನೇಕರು ತೆರಳಿ ಬಾವಿಯಲ್ಲಿದ್ದ ಹನುಮಂತರಾಜು ಅವರನ್ನು ಮೇಲಕ್ಕೆ ಎತ್ತಿ ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿದರು.

ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

ಕುಟುಂಬ ಸದಸ್ಯರೊಡನೆ ಮಾತುಕತೆ
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

22 Jan, 2018
ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಎಂಜಿನಿಯರ್‌ಗಳ ನಿರ್ಧಾರ

ಬಡ್ತಿ ಮೀಸಲಾತಿ
ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಎಂಜಿನಿಯರ್‌ಗಳ ನಿರ್ಧಾರ

22 Jan, 2018
300 ಕೃತಿಗಳ ಡಿಜಿಟಲೀಕರಣ

ಮೈಸೂರು ವಿವಿ, ಭಾರತೀಯ ಭಾಷಾ ಸಂಸ್ಥಾನ ಸಹಯೋಗದಲ್ಲಿ ಕಾರ್ಯ
300 ಕೃತಿಗಳ ಡಿಜಿಟಲೀಕರಣ

22 Jan, 2018

ಬೆಂಗಳೂರು
ಚಾರ್ಜ್‌ಶೀಟ್‌ ಸಿದ್ಧಪಡಿಸಲು ವಿಳಂಬ: ಬಿಜೆಪಿ ವರಿಷ್ಠರ ಅಸಮಾಧಾನ

ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಪ್ರತಿಯೊಂದೂ ಕ್ಷೇತ್ರದ ಬಗ್ಗೆ ಚಾರ್ಜ್‌ಶೀಟ್‌ ತಯಾರಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ...

22 Jan, 2018
‘ಹಿಟ್ ಅಂಡ್ ರನ್ ನಾನಲ್ಲ’

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ
‘ಹಿಟ್ ಅಂಡ್ ರನ್ ನಾನಲ್ಲ’

22 Jan, 2018