ಚಿಕ್ಕಬಳ್ಳಾಪುರ

ಗಂಟಲಲ್ಲಿ ಸೇಬು ತುಣುಕು ಸಿಕ್ಕಿ ಬಾಲಕ ಸಾವು

ಇತ್ತೀಚೆಗೆ ಮರದಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಜ್ವರದಿಂದ ಬಳಲುತ್ತಿದ್ದ ಆಸೀಫ್‌, ಚಿಕಿತ್ಸೆ ಪಡೆಯುತ್ತ ಮನೆಯಲ್ಲಿಯೇ ಇದ್ದ. ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ಸೇಬು ಹಣ್ಣು ತಿನ್ನುವ ವೇಳೆ ಏಕಾಏಕಿ ಕುಸಿದು ಬಿದ್ದು, ಅಸ್ವಸ್ಥಗೊಂಡು ಮೃತಪಟ್ಟಿದ್ದ

ಚಿಕ್ಕಬಳ್ಳಾಪುರ: ಗಂಟಲಲ್ಲಿ ಸೇಬು ಹಣ್ಣಿನ ತುಣುಕು ಸಿಕ್ಕಿ ಹಾಕಿಕೊಂಡು ನಗರದ ನಕ್ಕಲಕುಂಟೆಯ ಶಾಂತಿನಗರದ ನಿವಾಸಿ ಕಿಜರ್‌ ಎಂಬುವರ ಪುತ್ರ ಆಸೀಫ್‌ (11) ಶನಿವಾರ ಮೃತಪಟ್ಟಿದ್ದಾನೆ.

ಇತ್ತೀಚೆಗೆ ಮರದಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಜ್ವರದಿಂದ ಬಳಲುತ್ತಿದ್ದ ಆಸೀಫ್‌, ಚಿಕಿತ್ಸೆ ಪಡೆಯುತ್ತ ಮನೆಯಲ್ಲಿಯೇ ಇದ್ದ. ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ಸೇಬು ಹಣ್ಣು ತಿನ್ನುವ ವೇಳೆ ಏಕಾಏಕಿ ಕುಸಿದು ಬಿದ್ದು, ಅಸ್ವಸ್ಥಗೊಂಡು ಮೃತಪಟ್ಟಿದ್ದ. ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಿಜರ್ ಅವರು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಆಸೀಫ್‌ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಜಿಲ್ಲಾ ಆಸ್ಪತ್ರೆಯ ವೈದ್ಯರು ಗಂಟಲಿನಲ್ಲಿ ಸೇಬು ಸಿಕ್ಕಿಹಾಕಿಕೊಂಡಿದ್ದರಿಂದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ಮೌಖಿಕವಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

ಕುಟುಂಬ ಸದಸ್ಯರೊಡನೆ ಮಾತುಕತೆ
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

22 Jan, 2018
ಕೈಗಾ: 8 ಹೊಸ ಪಕ್ಷಿಗಳ ಪತ್ತೆ

ಬರ್ಡ್‌ ಮ್ಯಾರಥಾನ್ ಎಂಟನೇ ಆವೃತ್ತಿ
ಕೈಗಾ: 8 ಹೊಸ ಪಕ್ಷಿಗಳ ಪತ್ತೆ

22 Jan, 2018
ಲಿಂಗಾಯತ ಧರ್ಮ: ಜನಗಣತಿಗಳು ಸೃಷ್ಟಿಸಿದ ಆವಾಂತರ

ವೀರಶೈವ ಲಿಂಗಾಯತ ಸಂವಾದ
ಲಿಂಗಾಯತ ಧರ್ಮ: ಜನಗಣತಿಗಳು ಸೃಷ್ಟಿಸಿದ ಆವಾಂತರ

22 Jan, 2018
ವಕೀಲರ ಸಂಘದ ಅಧ್ಯಕ್ಷರಾಗಿ ರಂಗನಾಥ್ ಆಯ್ಕೆ

1,196 ಮತಗಳ ಅಂತರದಿಂದ ಗೆಲುವು
ವಕೀಲರ ಸಂಘದ ಅಧ್ಯಕ್ಷರಾಗಿ ರಂಗನಾಥ್ ಆಯ್ಕೆ

22 Jan, 2018
ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಎಂಜಿನಿಯರ್‌ಗಳ ನಿರ್ಧಾರ

ಬಡ್ತಿ ಮೀಸಲಾತಿ
ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಎಂಜಿನಿಯರ್‌ಗಳ ನಿರ್ಧಾರ

22 Jan, 2018