ಧಾರವಾಡ

ಖಾದರ್ ಎಂಬ ಕಾರಣಕ್ಕೆ ಎರಡೆರಡು ಬಾರಿ ತಪಾಸಣೆ

‘ನನ್ನ ಹೆಸರಿನಲ್ಲಿರುವ ಖಾದರ್‌ ಎಂಬುದನ್ನು ಕೇಳಿದಾಕ್ಷಣ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಅನುಮಾನದಿಂದ ಎರಡೆರಡು ಬಾರಿ ಪರಿಶೀಲನೆ ಮಾಡುತ್ತಾರೆ’ ಎಂದು ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ಹೇಳಿದರು.

ಧಾರವಾಡ: ‘ನನ್ನ ಹೆಸರಿನಲ್ಲಿರುವ ಖಾದರ್‌ ಎಂಬುದನ್ನು ಕೇಳಿದಾಕ್ಷಣ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಅನುಮಾನದಿಂದ ಎರಡೆರಡು ಬಾರಿ ಪರಿಶೀಲನೆ ಮಾಡುತ್ತಾರೆ’ ಎಂದು ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ಹೇಳಿದರು.

ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ವೆಲ್‌ಫೇರ್‌ ಅಸೋಸಿಯೇಷನ್‌ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ ಮುಸ್ಲಿಂ ಸಮುದಾಯದ ಅಧಿಕಾರಿಗಳನ್ನೂ ಅನುಮಾನದಿಂದ ಕಾಣುವ ಪರಿಸ್ಥಿತಿ ಸಮಾಜದಲ್ಲಿದೆ. ಆದ್ದರಿಂದ, ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಸಲಹೆ ಮಾಡಿದರು.

‘ಇತರ ಅಧಿಕಾರಿಗಳಿಗೆ ಹೋಲಿಸಿದರೆ ಮುಸ್ಲಿಂ ಸಮಾಜದ ಅಧಿಕಾರಿಗಳಿಗೆ ಹೆಚ್ಚು ಸವಾಲುಗಳಿವೆ’ ಎಂದರು.

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ಹತ್ಯೆಯಾಗಿರುವ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಟಾರ್ಗೆಟ್ ಗ್ರೂಪ್ ಸದಸ್ಯ ಇಲ್ಯಾಸ್‌ನ ಕೊಲೆ ಯಾವ ಕಾರಣಕ್ಕೆ ಆಗಿದೆ ಎಂಬುದರ ತನಿಖೆಯಾಗಬೇಕು’ ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

ಕುಟುಂಬ ಸದಸ್ಯರೊಡನೆ ಮಾತುಕತೆ
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

22 Jan, 2018
ಕೈಗಾ: 8 ಹೊಸ ಪಕ್ಷಿಗಳ ಪತ್ತೆ

ಬರ್ಡ್‌ ಮ್ಯಾರಥಾನ್ ಎಂಟನೇ ಆವೃತ್ತಿ
ಕೈಗಾ: 8 ಹೊಸ ಪಕ್ಷಿಗಳ ಪತ್ತೆ

22 Jan, 2018
ಲಿಂಗಾಯತ ಧರ್ಮ: ಜನಗಣತಿಗಳು ಸೃಷ್ಟಿಸಿದ ಆವಾಂತರ

ವೀರಶೈವ ಲಿಂಗಾಯತ ಸಂವಾದ
ಲಿಂಗಾಯತ ಧರ್ಮ: ಜನಗಣತಿಗಳು ಸೃಷ್ಟಿಸಿದ ಆವಾಂತರ

22 Jan, 2018
ವಕೀಲರ ಸಂಘದ ಅಧ್ಯಕ್ಷರಾಗಿ ರಂಗನಾಥ್ ಆಯ್ಕೆ

1,196 ಮತಗಳ ಅಂತರದಿಂದ ಗೆಲುವು
ವಕೀಲರ ಸಂಘದ ಅಧ್ಯಕ್ಷರಾಗಿ ರಂಗನಾಥ್ ಆಯ್ಕೆ

22 Jan, 2018
ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಎಂಜಿನಿಯರ್‌ಗಳ ನಿರ್ಧಾರ

ಬಡ್ತಿ ಮೀಸಲಾತಿ
ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಎಂಜಿನಿಯರ್‌ಗಳ ನಿರ್ಧಾರ

22 Jan, 2018