ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾತ್ರಗಳನ್ನು ಆಸ್ವಾದಿಸುವೆ’

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

‘ರಂಗಿತರಂಗ' ಚಿತ್ರದ ಮೂಲಕ ಕನ್ನಡಿಗರ ಹೃದಯದಲ್ಲಿ ಮದರಂಗಿ ಇಟ್ಟ ಸುಂದರಿ ರಾಧಿಕಾ ಚೇತನ್‌. ಯೋಗ, ರಂಗಭೂಮಿ, ಕಥಕ್‌ ನೃತ್ಯಗಳಲ್ಲಿಯೂ ಇವರು ಆಸಕ್ತರು. ಎಲ್ಲರೊಂದಿಗೂ ಸಲೀಸಾಗಿ ಮಾತಿಗಿಳಿಯುವ ಈ ಹಸನ್ಮುಖಿ ತಮ್ಮ ಮನದಾಳದ ಮಾತುಗಳನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ.

* ಮುಂದೇನು ರಾಧಿಕಾ?

ಸದ್ಯ ಥ್ರಿಲ್ಲರ್‌ ಸಿನಿಮಾ ‘ಚೇಸ್’ನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದೇನೆ. ಚಿತ್ರೀಕರಣವೂ ಶುರುವಾಗಿದೆ. ಅನಂತನಾಗ್‌ ಜೊತೆ ನಟಿಸಿರುವ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಮತ್ತು ‘ಅಸತೋಮಾ ಸದ್ಗಮಯ’ ಚಿತ್ರಗಳು ಅಂತಿಮ ಹಂತದಲ್ಲಿವೆ.

* ಕನಸಿನ ಪಾತ್ರ...

ಕನಸಿನ ಪಾತ್ರ ಅಂತೆಲ್ಲ ಇಲ್ಲ. ಆ ಥರ ಯೋಚನೆ ಮಾಡೋಕೂ ನನಗೆ ಭಯವಾಗುತ್ತೆ. ಅದನ್ನು ಹೆಚ್ಚು ಯೋಚಿಸುತ್ತಿದ್ದರೆ ಅಷ್ಟಕ್ಕೇ ಸೀಮಿತವಾಗಿ ಬಿಡ್ತೀವೇನೋ. ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು ಎನ್ನುವ ಆಸೆಯಂತೂ ಇದೆ. ಎಲ್ಲ ಪಾತ್ರಗಳನ್ನೂ ನಾನು ಇಷ್ಟಪಟ್ಟು ಮಾಡ್ತೀನಿ.

* ಸವಾಲಿನ ಪಾತ್ರಗಳು...

ನಾನು ನಾನಾಗಿರದ ಪಾತ್ರಗಳು, ನನ್ನ ಸ್ವಭಾವವೇ ಅಲ್ಲದಿರುವ ಪಾತ್ರಗಳಿಗೆ ಜೀವ ತುಂಬುವುದು ಕಷ್ಟ. ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದಲ್ಲಿ ಇಂಥದೊಂದು ಸವಾಲಿನ ಪಾತ್ರ ಮಾಡಿದ್ದೀನಿ. ಯಾವ ಪಾತ್ರವೂ ಸುಲಭವಾದದ್ದಲ್ಲ. ಕಠಿಣ ಪರಿಶ್ರಮವಿಲ್ಲದೆ ಅಭಿನಯ ಕಷ್ಟ.

* ಬೇರೆ ಭಾಷೆಗಳಲ್ಲಿ ನಟಿಸುವ ಅವಕಾಶ, ಆಸಕ್ತಿ...

ಕೆಲ ಪ್ರಸ್ತಾವಗಳು ಬಂದಿವೆ. ಆದ್ರೆ ಅವು ಒಳ್ಳೇ ಕಥೆ ಅನ್ನಿಸ್ತಿಲ್ಲ. ಕನ್ನಡದಲ್ಲಿ ಒಳ್ಳೊಳ್ಳೆ ಪಾತ್ರಗಳು ಸಿಗ್ತಾ ಇವೆ. ಬೇರೆ ಭಾಷೆಗಳಲ್ಲೂ ಒಳ್ಳೇ ಕಥೆ, ಪಾತ್ರ ಸಿಕ್ಕರೆ ಖಂಡಿತ ನಟನೆ ಮಾಡ್ತೀನಿ.

* ನಿರ್ಮಾಪಕಿ ಆದ್ರೆ...

(ಜೋರಾದ ನಗು) ಅಯ್ಯೋ... ಈವರೆಗೂ ಇಂಥ ಯೋಚನೆ ಮಾಡಿಲ್ಲ. ಹಾಗೊಂದು ವೇಳೆ ನಿರ್ಮಾಪಕಿ ಆದ್ರೆ ಕಥೆಗೆ ಹೆಚ್ಚು ಪ್ರಾಮುಖ್ಯತೆ ಕೋಡ್ತೀನಿ. ಎಲ್ಲ ಪಾತ್ರಗಳಿಗೂ ಸಮಾನ ಆವಕಾಶ ಇರುವ, ವಿಭಿನ್ನ ಚಿತ್ರಕಥೆ ಬಂದರೆ ಖಂಡಿತ ನಿರ್ಮಾಪಕಿ ಆಗ್ತೀನಿ.

* ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುವ ಆಸೆ ಇದೆಯಾ?

ಹಾ... ಮಹಿಳಾ ಪ್ರಧಾನ ಅಂತಾ ಹೇಳೊ ಬದಲು, ಗಂಡೂ ಹೆಣ್ಣಿಗೂ ಸಮಾನ ಆವಕಾಶವಿರೂ, ಇಬ್ಬರನ್ನೂ ಸಮಾನ ಎಂದು ತೋರಿಸುವ ಚಿತ್ರಗಳಲ್ಲಿ ನಟಿಸುವ ಆಸೆ. ಮಹಿಳೆಗೆ ಸಿಗಲೇಬೇಕಾದ ಸ್ಥಾನಮಾನಗಳು ಸಿಗಲೇಕು. ಅವಳನ್ನು ಅಲ್ಲಗಳೆದು ಮಾತಾಡುವ ಪರಿ ಮುಂದುವರೆಯಬಾರದು. ಗಂಡು–ಹೆಣ್ಣು ಇಬ್ಬರೂ ಸರಿಸಮಾನರೆ, ಇಲ್ಲಿ ಬೇಧವೆಣಿಸುವ ಅವಕಾಶ ಸಲ್ಲ.

* ಚಿತ್ರರಂಗದ ಅನುಭವ ಹೇಗಿದೆ?

ಖಂಡಿತ... ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿದ್ದೆ. ಕನ್ನಡದಲ್ಲೂ ಗುಣಮಟ್ಟದ ಸಿನಿಮಾಗಳು ಬರ್ತೀವೆ. ಜನರು ಕೂಡ ವಿಭಿನ್ನ ಕಥೆಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹಾಗಾಗಿ ನಾನೂ ಕೂಡ ಒಳ್ಳೆ ಸಿನಿಮಾಗಳನ್ನು ಮಾಡ್ತೀದ್ದೀನಿ ಅನ್ನಿಸಿದೆ.

*ಎಂತಹ ಸಿನಿಮಾಗಳು ನಿಮಗಿಷ್ಟ?

ಕಮರ್ಶಿಯಲ್‌, ಥ್ರೀಲ್ಲರ್‌, ಕಲಾ ಸಿನಿಮಾಗಳೇ ಇಷ್ಟ ಅಂತಾ ಹೇಳೊಕಾಗಲ್ಲ. ನನಗೆ ಪಾತ್ರಗಳೇ ಮುಖ್ಯ. ಕಥೆ ಮತ್ತು ನಿರ್ದೇಶಕರ ಕಲ್ಪನೆಗಳು ಪಾತ್ರಗಳಾಗಿ ಹೊರಬರುವುದರಿಂದ ಪಾತ್ರಗಳೆ ಅತೀ ಮುಖ್ಯ.

* ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌?

ನಾವು ಹಾಕೊ ಬಟ್ಟೆ ತುಂಬಾ ಆರಾಮದಾಯಕವಾಗಿಬೇಕು. ಮಾನಸಿಕ ಕಿರಿಕಿರಿಯನ್ನುಂಟು ಮಾಡುವಂತಿರಬಾರದು. ನನಗೆ ಝೀನ್ಸ್–ಟಿಶರ್ಟ್‌ ಮತ್ತು ಸಲ್ವಾರ್‌ ತುಂಬಾ ಇಷ್ಟ.

* ನಿಮ್ಮ ಮುಂದಿನ ಕನಸು?

ನಾನು ಇನ್ನೂ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಬೇಕು. ಈ ವರ್ಷ ಹೆಚ್ಚು ಯೋಗದತ್ತ ಗಮನ ಹರಿಸಬೇಕು ಅಂದುಕೊಂಡಿದ್ದೀನಿ.

* ನಿಮ್ಮಿಷ್ಟದ ಸಿನಿಮಾಗಳು?

(ಕ್ಷಣ ಹೊತ್ತು ನಗು) ಹಾ.... ಹಾ... ತುಂಬಾ ಯೋಚನೆ ಮಾಡಬೇಕು... ಎಲ್ಲವೂ ಇಷ್ಟವೇ, ಇದೇ ಅಂತಾ ಹೇಳೊದು ಕಷ್ಟ. ಇತ್ತೀಚೆಗೆ ಕಾಲೇಜು ಕುಮಾರ್‌ ಸಿನಿಮಾ ನೋಡಿದೆ ಇಷ್ಟವಾಯ್ತು. ಹಳೆ ಸಿನಿಮಾಗಳಂದ್ರೆ ಕವಲುದಾರಿ, ಎರಡು ಕನಸು ಸಿನಿಮಾಗಳಿಷ್ಟ. ಹಿಂದಿಯಲ್ಲಿ ಮಾಧುರಿ ದಿಕ್ಷೀತ್‌, ಕನ್ನಡದಲ್ಲಿ ಲಕ್ಷ್ಮೀ , ಡಾ.ರಾಜಕುಮಾರ್‌ ಅಂದ್ರೆ ತುಂಬಾ ಇಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT