ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ: ಕೆ.ಜಿ.ಗೆ ₹ 20 ಏರಿಕೆ

Last Updated 16 ಜನವರಿ 2018, 9:20 IST
ಅಕ್ಷರ ಗಾತ್ರ

ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ ₹ 80ಕ್ಕೆ ಮಾರಾಟವಾಗುತ್ತಿದ್ದ ದಾಳಿಂಬೆ ಹಣ್ಣು ಈ ವಾರ ₹ 100ಕ್ಕೆ ತಲುಪಿದೆ. ₹ 20 ಏರಿಕೆಯಾಗಿದೆ.

ಮಹಾರಾಷ್ಟ್ರ, ಚಿತ್ರದುರ್ಗದಿಂದ ಹಾಸನ ಮಾರುಕಟ್ಟೆಗೆ ದಾಳಿಂಬೆ ಹಣ್ಣು ಬರುತ್ತದೆ. ಸಂಕ್ರಾಂತಿ ಹಬ್ಬದ ದಿನವಾದ್ದರಿಂದ ದಾಳಿಂಬೆಗೆ ಬೇಡಿಕೆ ಹೆಚ್ಚಿದ್ದು, ಬೆಲೆಯೂ ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ ₹ 70ಕ್ಕೆ ಮಾರಾಟವಾಗುತ್ತಿದ್ದ ಬಾಳೆ ಹಣ್ಣು, ಹಬ್ಬದ ಸಮಯ ಆದ್ದರಿಂದ  ಕೆ.ಜಿಗೆ ₹ 80ಆಗಿದೆ. ₹ 10 ಹೆಚ್ಚಳವಾಗಿದೆ.

ಮೈಸೂರು, ಚಿಕ್ಕಮಗಳೂರು ಹಾಗೂ ಹಾಸನದ ಅರಕಲಗೂಡು, ಸಕಲೇಶಪುರ, ಹೊಳೆನರಸೀಪುರ ಭಾಗದಿಂದ ಹಾಸನ ಮಾರುಕಟ್ಟೆಗೆ ಬಾಳೆಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಹಣ್ಣಿನ ವ್ಯಾಪಾರಿ ಸಮೀರ್‌ ಅಹಮದ್‌ ತಿಳಿಸಿದರು.

ವಾರದ ಹಿಂದೆ ಕೆ.ಜಿಗೆ ₹ 60 ಇದ್ದ ಕಿತ್ತಳೆ ಹಣ್ಣಿನ ಬೆಲೆ ಸೋಮವಾರ ₹ 80ಕ್ಕೆ ಮಾರಾಟವಾಗುತ್ತಿದ್ದು, ₹ 20 ಜಿಗಿದಿದೆ. ಕಿತ್ತಳೆ ಹಣ್ಣು ಕೊಡಗು ಮತ್ತು ಚಿಕ್ಕಮಗಳೂರಿನಿಂದ ಹಾಸನದ ಮಾರುಕಟ್ಟೆಗೆ ಬರುತ್ತದೆ.

ಉಳಿದಂತೆ ₹ 10ಕ್ಕೆ ಎರಡು ಕೆಜಿ ಮಾರಾಟವಾಗುತ್ತಿದ್ದ ಟೊಮೆಟೊ ₹ 20ಕ್ಕೆ ಮೂರು ಕೆಜಿ ಮಾರಾಟವಾಗುತ್ತಿದೆ. ಈರುಳ್ಳಿ ದರ ₹ 10 ಕಡಿಮೆ ಆಗಿದ್ದು, ಕೆ.ಜಿಗೆ 40 ಆಗಿದೆ.  ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ.

ಉಳಿದಂತೆ ಬೀನ್ಸ್‌ ಕೆ.ಜಿಗೆ ₹ 40, ಕೆ.ಜಿ ಆಲೂಗೆಡ್ಡೆಗೆ ₹ 20, ಕ್ಯಾರೆಟ್‌ ಕೆ.ಜಿ.ಗೆ ₹ 60, ಹಾಗಲಕಾಯಿ ಕೆ.ಜಿಗೆ ₹ 40, ದಪ್ಪಮೆಣಸಿನ ಕಾಯಿ ಕೆ.ಜಿಗೆ ₹ 60, ಕೆ.ಜಿ ನುಗ್ಗೆಕಾಯಿ ₹ 100ರಂತೆ ಮಾರಾಟವಾಗುತ್ತಿದೆ. ಕೊತ್ತಂಬರಿ, ಪಾಲಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪನ್ನು ಒಂದು ಕಟ್ಟಿಗೆ ₹ 10ರಂತೆ ಮಾರಲಾಗುತ್ತಿದೆ.

ಮೂಸುಂಬೆ ಕೆ.ಜಿಗೆ ₹ 80, ಸೇಬು ಕೆ.ಜಿ ಗೆ ₹ 100, ದ್ರಾಕ್ಷಿ ಹಣ್ಣು ಕೆ.ಜಿಗೆ ₹ 100, ಸೀತಾಫಲ ಕೆ.ಜಿಗೆ ₹ 100, ಅನಾನಸ್‌ ಕೆ.ಜಿಗೆ ₹ 100, ಪಪ್ಪಾಯಿ ಮತ್ತು ಕಲ್ಲಂಗಡಿ ಹಣ್ಣು ಕೆ.ಜಿಗೆ ₹ 30, ಸಪೋಟಾ ಕೆ.ಜಿ.ಗೆ ₹ 80ರಂತೆ ಮಾರಾಟವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT