ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 17–1–1968

Last Updated 16 ಜನವರಿ 2018, 19:30 IST
ಅಕ್ಷರ ಗಾತ್ರ

ಸಿಸಿಲಿಯಲ್ಲಿ ಭೀಕರ ಭೂಕಂಪ; 600ಕ್ಕೂ ಹೆಚ್ಚು ಸಾವು

ರೋಂ, ಜ. 16– ಸಿಸಿಲಿಯಲ್ಲಿ ಭಾನುವಾರ ಮತ್ತು ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಕೊನೆಯಪಕ್ಷ 600 ಮಂದಿ ಸತ್ತಿದ್ದಾರೆಂದು ಇಟಲಿ ಸರ್ಕಾರದ ವೃತ್ತಗಳು ತಿಳಿಸಿವೆ.

ಮಾಂಟೆವಾಗೊ ಗ್ರಾಮವೊಂದರಲ್ಲೇ 300 ಮಂದಿ ಸತ್ತಿದ್ದಾರೆಂದೂ, ಲೋಕೋಪಯೋಗಿ ಖಾತೆ ವೃತ್ತಗಳು ಹೇಳಿವೆ.

ಭಾಷಾ ಪ್ರಶ್ನೆ: ಶೀಘ್ರವೇ ಕಾಂಗ್ರೆಸ್ಸಿನ ಹಿರಿಯರ ಜೊತೆ ಎಸ್.ಎನ್. ಚರ್ಚೆ

ನವದೆಹಲಿ, ಜ. 16– ಅಧಿಕೃತ ಭಾಷೆ ತಿದ್ದುಪಡಿ ಮಸೂದೆಯ ಬಗ್ಗೆ ದಕ್ಷಿಣ ಭಾರತದ ಜನರಲ್ಲಿ ಮೂಡಿರುವ ಅನು
ಮಾನವನ್ನು ನಿವಾರಿಸುವ ಸಲುವಾಗಿ ತಾವು ಶೀಘ್ರದಲ್ಲೇ ಕಾಂಗ್ರೆಸ್ಸಿನ ಹಿರಿಯ ನಾಯಕರೊಂದಿಗೆ ಭಾಷಾ ವಿವಾದ ಕುರಿತು ಚರ್ಚಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.

ಭಾರತದ ಶ್ರೇಷ್ಠ ನ್ಯಾಯಾಧೀಶರಾಗಿ ಹಿದಾಯತ್ ಉಲ್ಲಾ

ನವದೆಹಲಿ, ಜ. 16– ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಮಹಮ್ಮದ್ ಹಿದಾಯತ್ ಉಲ್ಲಾ ಅವರನ್ನು ಭಾರತದ ನೂತನ ಶ್ರೇಷ್ಠ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ.

ಮಾಜಿ ಬಿಹಾರ ಕಾಂಗ್ರೆಸ್ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ

ಪಟ್ನ, ಜ. 16– ಆರು ಜನ ಮಾಜಿ ಕಾಂಗ್ರೆಸ್ ಸಚಿವರ ವಿರುದ್ಧ ಬಿಹಾರ ಸರಕಾರವು ಆರೋಪಗಳ ಪಟ್ಟಿಯನ್ನು ಆಖೈರ್‌ಗೊಳಿಸಿದೆ.

ಅವರ ವಿರುದ್ಧ 192 ಆರೋಪಗಳನ್ನು ಸಿದ್ಧಪಡಿಸಿರುವುದಾಗಿ ಸರಕಾರ ವಿಚಾರಣೆಗಾಗಿ ನೇಮಿಸಿರುವ ಅಯ್ಯರ್ ಆಯೋಗಕ್ಕೆ ತಿಳಿಸಿ ಅವುಗಳನ್ನು ಯಾವಾಗ ಸಲ್ಲಿಸಬೇಕೆಂಬುದನ್ನು ತಿಳಿಸುವಂತೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT