ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದ ವೆಚ್ಚ ₹ 500 ಕೋಟಿ ಸಾಧ್ಯತೆ

Last Updated 16 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗಾಗಿ ಕೇಂದ್ರ ಚುನಾವಣಾ ಆಯೋಗದ ಖರ್ಚು– ವೆಚ್ಚ ಈ ಬಾರಿ ದ್ವಿಗುಣವಾಗಲಿದ್ದು, ಸುಮಾರು ₹ 500 ಕೋಟಿ ತಲುಪಬಹುದೆಂದು ಅಂದಾಜು ಮಾಡಲಾಗಿದೆ.

ಈ ಬಾರಿ ಎಲ್ಲ ಕ್ಷೇತ್ರಗಳಲ್ಲಿ ವಿವಿಪ್ಯಾಟ್‌ ಅಳವಡಿಸಿದ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು. ಇದರಿಂದ ವೆಚ್ಚ ಹೆಚ್ಚಾಗಲಿದೆ. ಕಳೆದ ಚುನಾವಣೆಯಲ್ಲಿ ಸುಮಾರು ₹ 250 ಕೋಟಿವರೆಗೆ ಖರ್ಚಾಗಿತ್ತು. ಈ ಬಾರಿ ಖರ್ಚು–ವೆಚ್ಚ ದ್ವಿಗುಣವಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗುವ ಸಿಬ್ಬಂದಿ ಮೇಲಿನ ಖರ್ಚು ಸ್ಪಲ್ಪ ಹೆಚ್ಚಾಗಲಿದೆ. ಈ ಬಾರಿ ಮತದಾರರ ಸಂಖ್ಯೆ 4.9 ಕೋಟಿಗೆ ಏರಿದೆ. 2013 ರಲ್ಲಿ 4.36 ಕೋಟಿ ಇತ್ತು. ಹಿಂದಿನ ಚುನಾವಣೆಗಿಂತ ಈ ಬಾರಿ ಮತಗಟ್ಟೆಗಳ ಸಂಖ್ಯೆ 2,800 ಹೆಚ್ಚಲಿದೆ. ಇದು ವೆಚ್ಚ ಹೆಚ್ಚಳವಾಗಲು ಕಾರಣ ಎಂದು ಮೂಲಗಳು ತಿಳಿಸಿವೆ.

ಪೊಲೀಸ್‌ ಭದ್ರತೆಗೆ ₹ 100 ಕೋಟಿಗೂ ಹೆಚ್ಚು ಬೇಕಾಗುವ ಸಾಧ್ಯತೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪೊಲೀಸ್‌ ಭದ್ರತೆಗೆ ₹ 80 ಕೋಟಿ ವೆಚ್ಚ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಭದ್ರತಾ ಪಡೆಗಳ ಸಿಬ್ಬಂದಿ, ಅಧಿಕಾರಿಗಳಿಗೆ ನೀಡುವ ಗೌರವ ಧನವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

15 ದಿನಗಳವರೆಗಿನ ಚುನಾವಣಾ ಕರ್ತವ್ಯಕ್ಕೆ ಅಧಿಕಾರಿಗಳಿಗೆ ತಲಾ ₹ 2,500, ಅವರ ಅಧೀನದಲ್ಲಿ ಕೆಲಸ ಮಾಡುವವರಿಗೆ ₹ 2000, ಕೆಳ ಹಂತದ ಸಿಬ್ಬಂದಿಗೆ ₹ 1,500 ನಿಗದಿ ಮಾಡಲಾಗಿದೆ. ಚುನಾವಣಾ ಕರ್ತವ್ಯ 15 ದಿನಗಳಿಗಿಂತ ಹೆಚ್ಚಾದರೆ, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೆಚ್ಚುವರಿಯಾಗಿ ₹ 1,250, ₹1,000 ಮತ್ತು ₹ 750 ನೀಡಲಾಗುವುದು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT