ಬೆಂಗಳೂರು

ದಕ್ಕಲಿಗರಿಗೆ ಇಂದು ವಾಹನ ವಿತರಣೆ

ಅಲೆಮಾರಿ ಸಮುದಾಯದ ದಕ್ಕಲಿಗರಿಗೆ ವಾಹನ ಮತ್ತು ಸಬ್ಸಿಡಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮ ಬುಧವಾರ (ಜ.17) ಸಂಜೆ ವಿಧಾನಸೌಧದ ಮುಂಭಾಗ ನಡೆಯಲಿದೆ.

ಬೆಂಗಳೂರು: ಅಲೆಮಾರಿ ಸಮುದಾಯದ ದಕ್ಕಲಿಗರಿಗೆ ವಾಹನ ಮತ್ತು ಸಬ್ಸಿಡಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮ ಬುಧವಾರ (ಜ.17) ಸಂಜೆ ವಿಧಾನಸೌಧದ ಮುಂಭಾಗ ನಡೆಯಲಿದೆ.

‘ವಾಹನ ಪರವಾನಗಿ ಹೊಂದಿದ ದಕ್ಕಲಿಗ ಸಮುದಾಯದ 8 ಜನರಿಗೆ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಿಫ್ಟ್‌ ಡಿಸೈರ್, ಬೊಲೆರೊ, ಮಾರುತಿ ಸ್ವಿಫ್ಟ್‌ ವಾಹನ ನೀಡಲಿದ್ದಾರೆ’ ಎಂದು ನೋಡಲ್ ಅಧಿಕಾರಿ ಬಾಲಗುರುಮೂರ್ತಿ ತಿಳಿಸಿದರು.

‘ದಕ್ಕಲಿಗ ಸಮುದಾಯದ 1,100 ಜನ ಫಲಾನುಭವಿಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ಎರಡು ಎಕರೆ ಕೃಷಿ ಜಮೀನು ಹಾಗೂ ಆಯ್ದ ಜಿಲ್ಲೆಗಳಲ್ಲಿ ಮನೆಗಳನ್ನೂ ಕಟ್ಟಿಸಿಕೊಡಲಾಗುವುದು’ ಎಂದು ಅವರು ವಿವರಿಸಿದರು.

‘ರಾಜ್ಯದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 49 ಸಮುದಾಯಗಳ ಅಡಿಯಲ್ಲಿ ಬರುವ ಅಲೆಮಾರಿ, ಅರೆ ಅಲೆ
ಮಾರಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ಕೋಶ ರಚಿಸಲಾಗಿದೆ. ಇವುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹120 ಕೋಟಿ ಹಣ ಇರಿಸಿದೆ’ ಎಂದು ಅವರು ಹೇಳಿದರು.ದಕ್ಕಲಿಗರು, ಸುಡುಗಾಡು ಸಿದ್ದರು, ಶಿಳ್ಳೆಕ್ಯಾತರು, ಬುಡ್ಗ ಜಂಜಮ್‌, ಮಾಂಗ್‌ ಗಾರುಡಿ, ಚನ್ನದಾಸರ್, ದೊಂಬರ, ಗಂಟಿ ಚೋರ್, ಸಿಂಧೋಳ್ಳು, ಹಂದಿ ಜೋಗಿ, ಗೋಸಂಗಿ... ಈ ರೀತಿಯ ಅನೇಕ ಅಲೆಮಾರಿ ಸಮುದಾಯಗಳು ಒಂದು ಕಡೆ ನೆಲೆ ನಿಲ್ಲದೆ ಅನಕ್ಷರಸ್ಥರಾಗಿ ಬದುಕುತ್ತಿದ್ದು ಇವುಗಳ ಸರ್ವತೋಮುಖ ಪ್ರಗತಿಗೆ ಕೋಶ ಶ್ರಮಿಸುತ್ತಿದೆ.  ‘ಈ ಸಮುದಾಯಗಳ ಜನ
ಸಂಖ್ಯೆ ಬಳ್ಳಾರಿ, ಯಾದಗಿರಿ, ಕೊಪ್ಪಳ ಹೆಚ್ಚಿನ ಜನಸಂಖ್ಯೆ ಇದೆ. ಅದರಲ್ಲೂ ಬಯಲು ಸೀಮೆಯ ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಪ್ರದೇಶದ 12 ಜಿಲ್ಲೆಗಳು ಹಾಗೂ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೆಂಟ್‌ಗಳಲ್ಲಿ ವಾಸಿಸುತ್ತಾರೆ’ ಎಂದು ಗುರುಮೂರ್ತಿ ವಿವರಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಗಮನ ಬೇರೆಡೆ ಸೆಳೆದು ಕಳವು

ಬ್ಯಾಂಕ್‌ನಿಂದ ಹಣ ಪಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ₹40 ಸಾವಿರ, ಮೊಬೈಲ್‌ ಫೋನ್‌, ಬ್ಯಾಂಕ್‌ನ ದಾಖಲೆಗಳನ್ನು ಕಳವು ಮಾಡಿದ ಪ್ರಕರಣ ಜಯನಗರದ...

28 May, 2018
ಅವಕಾಶಗಳ ಮಳೆಯಲ್ಲಿ ಮಿಂದ ವಿದ್ಯಾರ್ಥಿಗಳು

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಶೈಕ್ಷಣಿಕ ಮೇಳ
ಅವಕಾಶಗಳ ಮಳೆಯಲ್ಲಿ ಮಿಂದ ವಿದ್ಯಾರ್ಥಿಗಳು

28 May, 2018

ತಲಘಟ್ಟಪುರ ಠಾಣೆಗೆ ದೂರು
ಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್‌ ಕದ್ದೊಯ್ದಿದ್ದರು!

ಪ್ರಯಾಣಿಕರ ಸೋಗಿನಲ್ಲಿ ತಲಘಟ್ಟಪುರದಿಂದ ಶನಿವಾರ ರಾತ್ರಿ ಓಲಾ ಕ್ಯಾಬ್‌ ಕದ್ದೊಯ್ದಿದ್ದ ದುಷ್ಕರ್ಮಿಗಳು, ಆ ಕ್ಯಾಬ್‌ನ್ನು ಭಾನುವಾರ ತುರುವೇಕೆರೆ ಸಮೀಪ ನಿಲ್ಲಿಸಿ ಹೋಗಿದ್ದಾರೆ.

28 May, 2018
ಬೈಕ್‌ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳ ಸೆರೆ

ಹಲ್ಲೆ ಪ್ರಕರಣ
ಬೈಕ್‌ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳ ಸೆರೆ

28 May, 2018
‘ಎಲೆಕ್ಟ್ರಾನಿಕ್‌ ಮತಯಂತ್ರಗಳು ವಿಶ್ವಾಸಾರ್ಹವಲ್ಲ’

ವಿಚಾರ ಸಂಕಿರಣ
‘ಎಲೆಕ್ಟ್ರಾನಿಕ್‌ ಮತಯಂತ್ರಗಳು ವಿಶ್ವಾಸಾರ್ಹವಲ್ಲ’

28 May, 2018