ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ: ಸಿಂಗಾರಗೊಂಡ ಉಡುಪಿ

Last Updated 17 ಜನವರಿ 2018, 6:36 IST
ಅಕ್ಷರ ಗಾತ್ರ

ಉಡುಪಿ: ಪಲಿಮಾರು ಮಠದ ವಿದ್ಯಾ ಧೀಶ ತೀರ್ಥ ಸ್ವಾಮೀಜಿ ಅವರು ಗುರುವಾರ ನಸುಕಿನಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿದ್ದು, ಇದ ಕ್ಕಾಗಿ ಉಡುಪಿ ನವವಧುವಿನಂತೆ ಸಿಂಗಾ ರಗೊಂಡಿದೆ. ಶ್ರೀಗಳಿಗೆ ಶುಭಾಶಯ ಕೋರುವ ಫ್ಲೆಕ್ಸ್‌ಗಳು ನಗರದ ಎಲ್ಲೆಡೆ ರಾರಾಜಿಸುತ್ತಿವೆ.

ನಗರದ ಪ್ರಮುಖ ವೃತ್ತ, ಗಲ್ಲಿಗಳಲ್ಲಿ ಬೃಹತ್ ಕಮಾನುಗಳನ್ನು ನಿರ್ಮಾಣ ಮಾಡಲಾಗಿದೆ. ಆಕರ್ಷಕ ಕಮಾನುಗಳು ಎಲ್ಲರ ಗಮನ ಸೆಳೆಯುತ್ತಿವೆ. ನಗರದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪ ಗಳಿಂದ ಸಿಂಗರಿಸಲಾಗಿದೆ.

ಪರ್ಯಾಯೋತ್ಸವ ಮೆರವಣಿಗೆ ಆರಂಭವಾಗುವ ನಗರದ ಜೋಡುಕಟ್ಟೆ ಯಿಂದ ಕೆ.ಎಂ. ಮಾರ್ಗದುದ್ದಕ್ಕೂ ಈಗಾ ಗಲೇ ದೀಪಾಲಂಕಾರ ಮಾಡಲಾಗಿದ್ದು, ರಥಬೀದಿಯ ಸುತ್ತಮುತ್ತಲಲ್ಲೂ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದೆ. ಪಲಿಮಾರು ಮಠವೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

ಮಳೆಗಾಲದಲ್ಲಿ ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿದ್ದವು. ಗುಂಡಿ ತುಂಬಿಸಲು ಹಾಗೂ ಡಾಂಬರೀಕರಣ ಮಾಡಲು ಉಡುಪಿ ನಗರಸಭೆ ₹1 ಕೋಟಿ ಮೊತ್ತದ ಟೆಂಡರ್ ನೀಡಿತ್ತು. ಈಗಾಗಲೇ ಬಹುತೇಕ ದುರಸ್ತಿ ಕಾರ್ಯ ಮುಗಿದಿದೆ. ಪ್ರಮುಖ ರಸ್ತೆಗಳ ಅಕ್ಕ–ಪಕ್ಕ ಗಿಡ– ಗಂಟಿ ಗಳನ್ನು ಕಡಿದು ಸ್ವಚ್ಛಗೊಳಿಸಲಾಗಿದೆ. ರಸ್ತೆ ವಿಭಜಕಗಳಿಗೆ ಪೇಂಟಿಂಗ್ ಮಾಡಲಾಗಿದೆ.

ಪರ್ಯಾಯದ ಸಂದರ್ಭದಲ್ಲಿ ನಗರವನ್ನು ಸ್ವಚ್ಛಗೊಳಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪರ್ಯಾಯ ಮೆರವಣಿಗೆ ಸಾಗಿ ಹೋದ ತಕ್ಷಣವೇ ರಸ್ತೆ ಸ್ವಚ್ಛ ಮಾಡಲು ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಶೌಚಾಲಯ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ಸಾವಿರಾರು ಮಂದಿ ಪರ್ಯಾಯ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮಗಳಲ್ಲಿ ಭಾಗವಹಿ ಸುವುದರಿಂದ ವಿಶೇಷ ಭದ್ರತೆ ಕಲ್ಪಿ ಸಲು ಪೊಲೀಸ್ ಇಲಾಖೆ ಯೋಜನೆ ರೂಪಿ ಸಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ರಥಬೀದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ದ್ದಾರೆ. ಕೆಲವು ಕಡೆ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದಾರೆ

ಪೀಠಾರೋಹಣ

ಇದೇ 18ರಂದು ಬೆಳಗಿನ ಜಾವ ವಿದ್ಯಾಧೀಶ ಸ್ವಾಮೀಜಿ ಅವರು ಪರ್ಯಾಯ ಪೀಠಾರೋಹಣ ಮಾಡುವರು. 17ರಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಕಿರಿಯ ವಿಶ್ವ ಪ್ರಸನ್ನ ಸ್ವಾಮೀಜಿ ಅವರಿಗೆ ಸನ್ಮಾನ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT