ಕುರೆಕುಪ್ಪ

ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ

60 ದಿನಗಳ ಕಲ್ಲಂಗಡಿ ಬೆಳೆಯಲ್ಲಿ ಬೆಳೆದ ಒಂದೊಂದು ಕಲ್ಲಂಗಡಿ 3ರಿಂದ 5 ಕೆ.ಜಿ. ತೂಗುತ್ತಿದೆ. ಕಟಾವಿಗೆ ಬರುವ ಹೊತ್ತಿಗೆ ಇವುಗಳ ಗಾತ್ರ ಮತ್ತು ತೂಕ ಇನ್ನೂ ಹೆಚ್ಚಲಿದೆ.

ಸಂಡೂರು ತಾಲ್ಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ ಬೆಳೆದ ರೈತ ಎಚ್. ಶಿವನಗೌಡ

ಕುರೆಕುಪ್ಪ (ಸಂಡೂರು): ‘ತರಕಾರಿ ಬೆಳೆಗಳ ಕಣಜ’ ಎಂದು ಪ್ರಸಿದ್ಧವಾದ ತಾಲ್ಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಈಗ ಆ ಸಾಲಿಗೆ ಕಲ್ಲಂಗಡಿ ಬೆಳೆ ಸೇರ್ಪಡೆಯಾಗಿದೆ. ಎಲ್ಲಿ ನೋಡಿದರೂ ಕಾಣುವ ಹೂಕೋಸು, ಟೊಮೆಟೊ, ಬೀಟ್‌ರೂಟ್‌, ಮೂಲಂಗಿ, ಬದನೆ ಬೆಳೆಯ ಜೊತೆಗೆ ಕಲ್ಲಂಗಡಿಯೂ ಕಣ್ಮನ ಸೆಳೆಯಲಿದೆ. ಗ್ರಾಮದ ರೈತ ಎಚ್. ಶಿವನಗೌಡ ಇದೇ ಮೊದಲ ಬಾರಿಗೆ ಐದು ಎಕರೆ ಜಮೀನಿನಲ್ಲಿ ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲಿ ‘ಇಶಾ’ ತಳಿಯ ಕಲ್ಲಂಗಡಿ ಬೆಳೆದಿದ್ದು, 20–25 ದಿನಗಳಲ್ಲಿ ಬೆಳೆ ಕಟಾವಿಗೆ ಬರಲಿದೆ.

60 ದಿನಗಳ ಕಲ್ಲಂಗಡಿ ಬೆಳೆಯಲ್ಲಿ ಬೆಳೆದ ಒಂದೊಂದು ಕಲ್ಲಂಗಡಿ 3ರಿಂದ 5 ಕೆ.ಜಿ. ತೂಗುತ್ತಿದೆ. ಕಟಾವಿಗೆ ಬರುವ ಹೊತ್ತಿಗೆ ಇವುಗಳ ಗಾತ್ರ ಮತ್ತು ತೂಕ ಇನ್ನೂ ಹೆಚ್ಚಲಿದೆ.

ಆಧುನಿಕ ತಂತ್ರಜ್ಞಾನ: ಶಿವನಗೌಡರ ಅವರದು ಆಧುನಿಕ ಹಾಗೂ ಸಾವಯವ ಮಿಳಿತಗೊಂಡ ಕೃಷಿ ಪದ್ಧತಿ. ಹನಿ ನೀರಾವರಿ ಪದ್ಧತಿಯಲ್ಲಿ ಈ ಬೆಳೆಯ ಬೀಜ ನಾಟಿಗೆ ಮುಂಚೆ ಕೊಟ್ಟಿಗೆ ಗೊಬ್ಬರವನ್ನು ಬಳಸಲಾಗಿದೆ. ನಿಯಮಿತವಾಗಿ ಬೆಲ್ಲ, ಮಜ್ಜಿಗೆ, ದ್ವಿದಳ ಧಾನ್ಯದ ಹಿಟ್ಟು, ಬಾಳೆಹಣ್ಣು ಬೆರೆಸಿ ತಯಾರಿಸಿದ ಜೀವಾಮೃತವನ್ನು ನೀಡುತ್ತಿದ್ದಾರೆ.

ನೀರು ಬೇಗನೆ ಆವಿಯಾಗದೆ ಬೆಳೆಗಳಿಗೆ ಅಗತ್ಯವಾದ ತೇವಾಂಶವನ್ನು ಉಳಿಸುವ ಸಲುವಾಗಿ ಮಲ್ಚಿಂಗ್‌ ಪದ್ಧತಿಯನ್ನೂ ಅನುಸರಿಸಿದ್ದಾರೆ. ಕೀಟ ಬಾಧೆ ತಡೆಯಲು ಮೋಹಕ ಬಲೆ, ಸ್ಟಿಕರ್‌ಗಳನ್ನು ಅಳವಡಿಸಿದ್ದಾರೆ.

‘ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೀಡುವಂತೆ 8–10 ಎಕರೆ ಇರುವ ರೈತರಿಗೂ ಸಹಾಯಧನ ನೀಡಬೇಕು.ಮೋಹಕ ಬಲೆ, ಸ್ಟಿಕರ್‌ಗಳನ್ನು ಸಹಾಯಧನ ದರದಲ್ಲಿ ವಿತರಿಸಿದರೆ ಅನುಕೂಲವಾಗುತ್ತದೆ’ ಎಂಬುದು ಶಿವನಗೌಡ ಅವರ ಅಭಿಪ್ರಾಯ.

 

Comments
ಈ ವಿಭಾಗದಿಂದ ಇನ್ನಷ್ಟು
ಸಂಡೂರು, ಕೂಡ್ಲಿಗಿಯಲ್ಲಿ ಹೆಚ್ಚಿದ ಕುತೂಹಲ

ಬಳ್ಳಾರಿ
ಸಂಡೂರು, ಕೂಡ್ಲಿಗಿಯಲ್ಲಿ ಹೆಚ್ಚಿದ ಕುತೂಹಲ

20 Feb, 2018

ಕೂಡ್ಲಿಗಿ
ಬರಿಗೈಯಲ್ಲಿ ಕೆಂಡ ತೂರಿದ ಭಕ್ತರು

ಅಂದಾಜು 20 ನಿಮಿಷಗಳ ಕಾಲ ನಡೆದ ಕೆಂಡ ತೂರಾಟದ ದೃಶ್ಯ ಕಗ್ಗತ್ತಲಿನಲ್ಲಿ ಕೆಂಡದ ಮಳೆಯಂತೆ ಭಾಸವಾಯಿತು. ಇಷ್ಟಾದರೂ ಯಾರಿಗೂ ಗಾಯಗಳು ಆಗದು ಎಂಬುದು ಅಚ್ಚರಿ...

20 Feb, 2018

ಬಳ್ಳಾರಿ
ಬಳ್ಳಾರಿ: ಜನಾಕರ್ಷಿಸಿದ ದೋಸೆ ಹಬ್ಬ

ದೋಸೆ ಹಬ್ಬದಲ್ಲಿ ಬುಲೆಟ್‌ ಬೈಕ್, ಕಾರು ಇರಿಸಲಾಗಿತ್ತು. ಯುವತಿಯರು, ಚಿಣ್ಣರು ಬೈಕ್‌ ಮತ್ತು ಕಾರಿನ ಬಳಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಅಲ್ಲದೇ, ಡಿಜೆ ನಾದಕ್ಕೆ...

19 Feb, 2018
‘ಅಪ್ಪನ ಜನಸೇವೆಯಿಂದ ಶಾಸಕನಾದೆ...’

ಬಳ್ಳಾರಿ
‘ಅಪ್ಪನ ಜನಸೇವೆಯಿಂದ ಶಾಸಕನಾದೆ...’

18 Feb, 2018

ಹೊಸಪೇಟೆ
ಎರಡು ಸುತ್ತಿನ ರಹಸ್ಯ ಮಾತುಕತೆ

‘ವಿಜಯನಗರ ವಿಧಾನಸಭಾ ಕ್ಷೇತ್ರ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈಚೆಗೆ ಪಕ್ಷ ತೊರೆದ ಆನಂದ್‌ಸಿಂಗ್‌ ಅವರಿಗೆ ಪರ್ಯಾಯವಾಗಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು.

18 Feb, 2018