ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿಎಸ್‌ ಕಾಮಗಾರಿ ವಿಳಂಬ ವಿರೋಧಿಸಿ ಜೆಡಿಎಸ್‌ ಧರಣಿ

Last Updated 17 ಜನವರಿ 2018, 9:08 IST
ಅಕ್ಷರ ಗಾತ್ರ

ಧಾರವಾಡ: ಬಿಆರ್‌ಟಿಎಸ್‌ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಜೆಡಿಎಸ್‌ ಸೇವಾದಳ ಘಟಕ ಹಾಗೂ ಶಹರ ಎಸ್‌ಸಿ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಲಾಯಿತು.

ಜೆಡಿಎಸ್‌ ಸೇವಾದಳ ಘಟಕ ಅಧ್ಯಕ್ಷರಾದ ಮೋಹನ ಅರ್ಕಸಾಲಿ ಮಾತನಾಡಿ, ‘ದೇಶದ ವಿವಿಧೆಡೆ ಯಶಸ್ವಿ ಆಗದಿರುವ ಬಿಆರ್‌ಟಿಎಸ್‌ ಯೋಜನೆಯನ್ನು ಅವಳಿನಗರದಲ್ಲಿ ಜಾರಿಗೆ ತಂದಿದ್ದು ವಿಪರ್ಯಾಸ. ಯೋಜನೆ ಎರಡೇ ವರ್ಷಗಳಲ್ಲಿ ಮುಗಿಯಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದಾಗಿ ಆರು ವರ್ಷಗಳಾಗಿವೆ. ಆದರೂ, ಯೋಜನೆ ಪೂರ್ಣಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹುಬ್ಬಳ್ಳಿ–ಧಾರವಾಡ ಮಧ್ಯೆ ಅನವಶ್ಯಕವಾಗಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಒಂದು ನಿಲ್ದಾಣಕ್ಕೆ ಅಂದಾಜು ₹1.15 ಕೋಟಿ ಖರ್ಚು ಮಾಡಲಾಗುತ್ತಿದೆ. ಆದರೆ, ಇವುಗಳಿಂದ ಅನುಕೂಲಕ್ಕಿಂಥ ಅನಾನುಕೂಲವೇ ಹೆಚ್ಚು. ಕೂಡಲೇ ಯೋಜನೆ ಪೂರ್ಣಗೊಳದಿದ್ದರೆ ಸಾರ್ವಜನಿಕರು ಉಗ್ರ ಹೋರಾಟ ಮಾಡುವ ದಿನ ದೂರವಿಲ್ಲ’ ಎಂದು ಎಚ್ಚರಿಸಿದರು.

‘ರೈತ ಘಟಕ ರಾಜ್ಯ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ, ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ, ಶ್ರೀಕಾಂತ ಜಮನಾಳ, ರಾಮನಾಥ ಶೆಣೈ, ಶಿವರಾಜ ಮಾಕಡವಾಲೆ, ರಾಜು ಸಜ್ಜನಶೆಟ್ಟಿ, ಹಸನ್ ಮೆಣಸಗಿ, ಗೌಸಸಾಬ್ ನದಾಫ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT