ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೀಸ್ಟಾರ್ಟ್‌ ಪರಿಹಾರ

Last Updated 17 ಜನವರಿ 2018, 19:30 IST
ಅಕ್ಷರ ಗಾತ್ರ

ಕಂಪ್ಯೂಟರ್, ಮೊಬೈಲ್‌, ಟ್ಯಾಬ್‌ ಇನ್ನಿತರ ಗ್ಯಾಜೆಟ್‌ಗಳು ಕೆಲಸ ಮಾಡುವಾಗ ಹ್ಯಾಂಗ್‌ ಆಗುವುದು ಸಹಜ. ಹೀಗೆ ಡಿವೈಸ್‌ಗಳು ಹ್ಯಾಂಗ್‌ ಆದಾಗ ಸಮಾಧಾನ ಕಳೆದುಕೊಂಡು ಅವಕ್ಕೆ ಪಟಪಟನೆ ಬಡಿಯುವುದು, ಪವರ್‌ ಬಟನ್‌ ಅನ್ನು ಮತ್ತೆ ಮತ್ತೆ ಒತ್ತುವುದು ಹಲವರ ಅಭ್ಯಾಸ. ಹೀಗೆ ಡಿವೈಸ್‌ಗಳನ್ನು ಬಡಿಯುವ ಬದಲು ಸಮಾಧಾನ ಚಿತ್ತದಿಂದ ರೀಸ್ಟಾರ್ಟ್‌ ಮಾಡಿದರೆ ಡಿವೈಸ್ ಮತ್ತೆ ಕಾರ್ಯಾಚರಣೆಗೆ ಸಜ್ಜಾಗುತ್ತದೆ.

ಕಂಪ್ಯೂಟರ್/ ಲ್ಯಾಪ್‌ಟಾಪ್‌ ಹ್ಯಾಂಗ್‌ ಆಗುತ್ತಿದೆ ಎಂದು ಗೊತ್ತಾದಾಗ ಕೆಲಸ ಮಾಡುತ್ತಿರುವ ಫೈಲ್‌ಗಳನ್ನು ಮೊದಲು ಸೇವ್ ಮಾಡಿಕೊಳ್ಳಿ. ಬಳಿಕ ರೀಸ್ಟಾರ್ಟ್‌ ಮಾಡಿ. ಒಂದು ವೇಳೆ ಯಾವುದೇ ಆಯ್ಕೆಗಳಿಗೆ ನಿಮ್ಮ ಕಂಪ್ಯೂಟರ್ ಸ್ಪಂದಿಸುತ್ತಿಲ್ಲ ಎಂದಾದರೆ ಅದು ಆಫ್‌ ಆಗುವವರೆಗೂ ಪವರ್‌ ಬಟನ್‌ ಅನ್ನು ಒತ್ತಿ ಹಿಡಿಯಿರಿ. ಸ್ವಲ್ಪ ಸಮಯ ಬಿಟ್ಟು ಮತ್ತೆ ಪವರ್ ಬಟನ್‌ ಒತ್ತಿ. ಈಗ ಆನ್ ಆಗುತ್ತದೆ. ಆನ್‌ ಆದ ಬಳಿಕವೂ ಪಿಸಿಯ ಕಾರ್ಯ ನಿರ್ವಹಣೆ ವೇಗವಾಗಿಲ್ಲದಿದ್ದರೆ ಕಂಪ್ಯೂಟರ್‌ ರೀಸ್ಟಾರ್ಟ್‌ ಮಾಡಿ.

ಮೊಬೈಲ್‌, ಟ್ಯಾಬ್‌ ಕೂಡ ಹೀಗೆ ಹ್ಯಾಂಗ್‌ ಆಗುತ್ತಿದ್ದರೆ ಪವರ್ ಬಟನ್ ಒತ್ತಿ ಹಿಡಿಯಿರಿ. ಕೆಲವು ಡಿವೈಸ್‌ಗಳಲ್ಲಿ ರೀಸ್ಟಾರ್ಟ್‌ ಆಯ್ಕೆ ಇರುತ್ತದೆ. ರೀಸ್ಟಾರ್ಟ್‌ ಆಯ್ಕೆ ಇಲ್ಲವಾದರೆ ಪವರ್ ಆಫ್‌ ಮಾಡಿ. ಸ್ವಲ್ಪ ಸಮಯದ ಬಳಿಕ ಮತ್ತೆ ಡಿವೈಸ್ ಆನ್ ಮಾಡಿ. ಹ್ಯಾಂಗ್‌ ಆಗುವ ಸಮಸ್ಯೆಗೆ ರೀಸ್ಟಾರ್ಟ್‌ ಮಾಡುವುದು ತಾತ್ಕಾಲಿಕ ಪರಿಹಾರವಷ್ಟೆ. ಡಿವೈಸ್‌ಗಳು ಮತ್ತೆ ಮತ್ತೆ ಹ್ಯಾಂಗ್‌ ಆಗುತ್ತಿದ್ದರೆ ಸರ್ವಿಸ್‌ ಮಾಡಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT