ವಾಚಕರವಾಣಿ

ವಯೋಮಿತಿ ಏರಿಕೆ ಬೇಡ

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಸರ್ಕಾರ ಈ ನಿರ್ಧಾರ ಕೈಗೊಂಡರೆ, ಅದು ಲಕ್ಷಾಂತರ ನಿರುದ್ಯೋಗಿಗಳಿಗೆ ಮಾಡುವ ಅನ್ಯಾಯ ಎನಿಸಲಿದೆ.

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಸರ್ಕಾರ ಈ ನಿರ್ಧಾರ ಕೈಗೊಂಡರೆ, ಅದು ಲಕ್ಷಾಂತರ ನಿರುದ್ಯೋಗಿಗಳಿಗೆ ಮಾಡುವ ಅನ್ಯಾಯ ಎನಿಸಲಿದೆ.

ರಾಜ್ಯದಲ್ಲಿ ಸಾವಿರಾರು ಯುವಕರು ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಸೇವೆಯಲ್ಲಿ
ರುವ ನೌಕರರಿಗೇ ಇನ್ನಷ್ಟು ಕಾಲ ಸೇವೆ ಸಲ್ಲಿಸಲು ಅವಕಾಶ ಕೊಟ್ಟರೆ ಯುವಕರಿಗೆ ದ್ರೋಹ ಬಗೆದಂತಾಗುತ್ತದೆ. ನಿವೃತ್ತಿ ವಯಸ್ಸು ಏರಿಸುವ ಬದಲು ಸರ್ಕಾರ ಅದನ್ನು 58ಕ್ಕೆ ಇಳಿಸುವ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಮುಂದಾಗಬೇಕು.

-ಬಿ. ಚಿದಾನಂದಮೂರ್ತಿ, ಬೆಂಗಳೂರು

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ವಾಸ್ತವ್ಯ–ವಾಸ್ತವ...!

ಶುರುವಾಗಲಿದೆ ‘ರೆಸಾರ್ಟ್ಸ್‌ ವಾಸ್ತವ್ಯ!..ಮತದಾರ ಮಹಾಪ್ರಭು ಅನಾಥ..ಮುಂದಿನ ಚುನಾವಣೆವರೆಗೆ!

20 Feb, 2018

ವಾಚಕರವಾಣಿ
ನೇಮಕಾತಿಯ ಕುಂಟೋಬಿಲ್ಲೆ

ಹಗಲಿರುಳು ಶ್ರಮಿಸಿ ಅಧ್ಯಯನ ಮಾಡುತ್ತಿರುವ ಪರೀಕ್ಷಾರ್ಥಿಗಳು, ಬೇರೆ ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಾಗದೆ ಈ ಪರೀಕ್ಷೆಯನ್ನೇ ನಂಬಿರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

20 Feb, 2018

ವಾಚಕರವಾಣಿ
ಪೋಷಕರು ಚಿಂತಿಸಲಿ

ಬಾರುಗಳಿಗೆ ಅನುಮತಿ ನೀಡುವ ಮುನ್ನ ಮೂಲ ಸೌಕರ್ಯಗಳನ್ನು ನಿರೀಕ್ಷಿಸುವ ಸರ್ಕಾರವು ಖಾಸಗಿ ಶಾಲೆಗಳಿಗೆ ಅನುಮತಿ ನೀಡುವಾಗ ಎಡವುವುದೇಕೆ?

20 Feb, 2018

ವಾಚಕರವಾಣಿ
ಇಷ್ಟಲಿಂಗ ನೀಡಿಕೆ...

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರೆನ್ನುವ ಮಾತ್ರಕ್ಕೆ ರಾಹುಲ್‌ ಗಾಂಧಿ ಅವರಿಗೆ ಇಷ್ಟಲಿಂಗ ನೀಡಿ ಗೌರವಿಸಿದ್ದು ಅಷ್ಟು ಉಚಿತವಲ್ಲ.

20 Feb, 2018

ವಾಚಕರವಾಣಿ
ಪಾಠ ಕಲಿಸಲಿ

ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಳ್ಳಬೇಕು. ಕ್ಷೇತ್ರವನ್ನು ಬಿಟ್ಟುಕೊಡುವುದು, ಬಿಟ್ಟುಕೊಡದೇ ಇರುವುದು ತಮ್ಮ ಕೈಯಲ್ಲಿದೆ ಎನ್ನುವ ಪಾಠವನ್ನು ಈ ಧುರೀಣರಿಗೆ ಕಲಿಸಬೇಕು.

20 Feb, 2018