ವಾಚಕರವಾಣಿ

ಮಾರ್ಗದರ್ಶಕರಾಗಿ...

‘ಮಕ್ಕಳಿಲ್ಲದೆ, ವೃದ್ಧಾಪ್ಯದಲ್ಲಿ ಜೀವನಕ್ಕೆ ಅರ್ಥವಿಲ್ಲದಂತಾಗಿದೆ, ದಯಾಮರಣಕ್ಕೆ ಅನುಮತಿ ಕೊಡಿ’ ಎಂದು ಮುಂಬೈನ ವೃದ್ಧ ದಂಪತಿ ರಾಷ್ಟ್ರಪತಿಗೆ ಮನವಿ ಮಾಡಿಕೊಂಡಿರುವುದು (ಪ್ರ.ವಾ., ಜ. 12) ನಮ್ಮ ಸಮಾಜದಲ್ಲಿ ...

‘ಮಕ್ಕಳಿಲ್ಲದೆ, ವೃದ್ಧಾಪ್ಯದಲ್ಲಿ ಜೀವನಕ್ಕೆ ಅರ್ಥವಿಲ್ಲದಂತಾಗಿದೆ, ದಯಾಮರಣಕ್ಕೆ ಅನುಮತಿ ಕೊಡಿ’ ಎಂದು ಮುಂಬೈನ ವೃದ್ಧ ದಂಪತಿ ರಾಷ್ಟ್ರಪತಿಗೆ ಮನವಿ ಮಾಡಿಕೊಂಡಿರುವುದು (ಪ್ರ.ವಾ., ಜ. 12) ನಮ್ಮ ಸಮಾಜದಲ್ಲಿ ವೃದ್ಧರ ಸ್ಥಿತಿ ಹೇಗಿದೆ ಎಂಬುದರ ಸತ್ಯದರ್ಶನ ಮಾಡಿಸುತ್ತದೆ.

ಈ ವಯೋವೃದ್ಧ ದಂಪತಿಯ ಆರ್ಥಿಕ ಸ್ಥಿತಿ ಉತ್ತಮವಾಗಿರುವುದರಿಂದ ಅವರು ನಕಾರಾತ್ಮಕ ಚಿಂತನೆಗಳನ್ನು ಹೊಂದುವ ಅಗತ್ಯ ಇರಲಿಲ್ಲ. ತಮ್ಮ ಸೇವೆಗಾಗಿ ಆಯಾಗಳನ್ನು ನೇಮಕ ಮಾಡಿಕೊಂಡು ಅಥವಾ ವೃದ್ಧಾಶ್ರಮ ಸೇರಿಕೊಂಡು, ಅಲ್ಲಿನ ವಯೋ ವೃದ್ಧರೊಂದಿಗೆ ಬೆರೆತು ಉಳಿದ ಜೀವನವನ್ನು ಕಳೆಯಬಹುದು. ದಿನದ ಒಂದಿಷ್ಟು ಸಮಯವನ್ನು ಹೊರಗೆ ಕಳೆಯುವುದು, ಆನಾಥ ಮಕ್ಕಳನ್ನು ಭೇಟಿ
ಮಾಡಿ, ಅವರಿಗೆ ಸಹಾಯ ಮಾಡುವುದು, ಅಧ್ಯಾತ್ಮ ಚಿಂತನೆ, ಪ್ರವಾಸ ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ಬದುಕನ್ನು ಸುಂದರಗೊಳಿಸ ಬಹುದು.

ಹಿರಿಯರು ಸಮಾಜಕ್ಕೆ, ಯುವಕರಿಗೆ ಮಾರ್ಗದರ್ಶಕರಾಗಿರಬೇಕು. ‘ಮಕ್ಕಳಿಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ’ ಎಂಬ ಅವರ ಹೇಳಿಕೆಯಿಂದ ಸಮಾಜದ ಸ್ವಾಸ್ಥ್ಯ ಮತ್ತಷ್ಟು ಕೆಡುತ್ತದೆ. ಮಕ್ಕಳಿಲ್ಲದ ಇತರ ವಯೋವೃದ್ಧರ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ. ಈ ವೃದ್ಧ ದಂಪತಿ ನಕಾರಾತ್ಮಕ ಸ್ಥಿತಿಯಿಂದ ಹೊರಬಂದು, ಬದುಕನ್ನು ಪುನಃ ಕಟ್ಟಿಕೊಳ್ಳಲಿ.

-ಪ.ಚಂದ್ರಕುಮಾರ, ಗೌನಹಳ್ಳಿ

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರ ವಾಣಿ
ಕಾಣಿಕೆ– ಕುಣಿಕೆ!

ಚುನಾವಣೆ ಹತ್ತಿರ ಬಂದಾಗ ಎಲ್ಲ ಪಕ್ಷಗಳವರೂ ಮತದಾರರಿಗೆ ನೀಡುತ್ತಾರೆ ಸೀರೆ, ಪಂಚೆ, ವಾಚು ಎಂಬ‌ ಬಗೆಬಗೆಯ ಕಾಣಿಕೆ.

16 Feb, 2018

ವಾಚಕರ ವಾಣಿ
ಕ್ರಮ ಅಗತ್ಯ

ಸದ್ಯದಲ್ಲೇ ದ್ವಿತೀಯ ಪಿ.ಯು. ಪರೀಕ್ಷೆಗಳು ಪ್ರಾರಂಭಗೊಳ್ಳಲಿವೆ. ಪರೀಕ್ಷೆಗೂ ಪೂರ್ವದಲ್ಲೇ ವಿದ್ಯಾರ್ಥಿಗಳು ಮತ್ತು ಪಾಲಕರ ಜೊತೆ ಸಭೆ ನಡೆಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಎಲ್ಲ ಪಿ.ಯು....

16 Feb, 2018

ವಾಚಕರ ವಾಣಿ
ರಾಜಕೀಯಪ್ರೇರಿತ!

‘ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಚಳವಳಿ ಮಾರಾಟ’ (ಪ್ರ.ವಾ., ಫೆ.14) ಪ್ರತಿಕ್ರಿಯೆಯಲ್ಲಿ ವ್ಯಕ್ತವಾದ ವಿಚಾರಗಳು ಅರ್ಥಪೂರ್ಣವಾಗಿವೆ. ಜಾಮದಾರ ಅವರ ವಾದಸರಣಿ ನೋಡಿದರೆ ಅವರಲ್ಲಿ ಧರ್ಮನಿಷ್ಠೆ ಇದೆಯೇ...

16 Feb, 2018

ವಾಚಕರ ವಾಣಿ
ನಂಬಲು ಸಾಧ್ಯವೇ?

‘ಬಹಮನಿ ಉತ್ಸವದ ಬಗ್ಗೆ ನನಗೇನೂ ಗೊತ್ತಿಲ್ಲ... ಉತ್ಸವಕ್ಕೆ ₹ 30 ಲಕ್ಷ ನೀಡಲಾಗುತ್ತದೆ ಎಂಬುದೂ ಸುಳ್ಳು’ (ಪ್ರ.ವಾ., ಫೆ. 15) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

16 Feb, 2018

ವಾಚಕರ ವಾಣಿ
ಎಎಪಿ ಸಾಧನೆ

ಪರ್ಯಾಯ ರಾಜಕಾರಣದ ಒಂದು ಹೊಸ ಪ್ರಯೋಗದ ಫಲವೆಂಬಂತೆ ಉದಯಿಸಿದ ‘ಆಮ್ ಆದ್ಮಿ ಪಾರ್ಟಿ’ ದಿಲ್ಲಿಯಲ್ಲಿ ತನ್ನ ಅಧಿಕಾರದ ಮೂರು ವರ್ಷಗಳನ್ನು ಪೂರೈಸಿದೆ.

16 Feb, 2018