ಅವರು ಬುಧವಾರ ಶೌಚಾಲಯಗಳ ಬಗ್ಗೆ ಮಾಹಿತಿ ನೀಡಿ, ‘ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ 28 ಗ್ರಾಮ ಪಂಚಾಯಿತಿಗಳಿಗೆ ಪ್ರತಿ ಗ್ರಾಮ ಪಂಚಾಯಿತಿಗೆ 200 ಶೌಚಾಲಯ ನಿಗದಿ ಮಾಡಲಾಗಿತ್ತು. ಒಟ್ಟು 5,600 ಶೌಚಾಲಯಗಳ ಪೈಕಿ ಗರ್ಭಿಣಿಯರ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ ಶೌಚಾಲಯಗಳ ಸಂಖ್ಯೆ 1,015 ಮತ್ತು ಸಿರಿ ಯೋಜನೆ ಅಡಿಯಲ್ಲಿ 4,061 ಶೌಚಾಲಯ ನಿರ್ಮಿಸಲಾಗಿದೆ. ಆದರೆ, 5 ಸಾವಿರ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ. ಅವು ಕಳಪೆ ಮಟ್ಟದ್ದಾಗಿವೆ. ದಲ್ಲಾಳಿಗಳು ಶೌಚಾಲಯ ಕಟ್ಟಿಸಿ ಹಣ ಎತ್ತಿ ಹಾಕಿದ್ದಾರೆ. ಇದರ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದರು.