ಬಳ್ಳಾರಿ

‘ಹಳೇ ಪಿಂಚಣಿ ಯೋಜನೆಯೇ ಇರಲಿ’

‘ಹಳೇ ಪಿಂಚಣಿ ಯೋಜನೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಶೇ 50ರಷ್ಟು ನಿಶ್ಚಿತ ಪಿಂಚಣಿ ದೊರಕುತ್ತದೆ. ಆದರೆ ಹೊಸ ಯೋಜನೆಯಲ್ಲಿ ಅದಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದರೂ ಕಡಿಮೆ ಪಿಂಚಣಿ ನಿಗದಿಯಾಗುತ್ತದೆ’

ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ‘ನೂತನ ಪಿಂಚಣಿ ಯೋಜನೆ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಸರ್ಕಾರಿ ನೌಕರರ ಸಂಘ ಹಾಗೂ ಎನ್‌ಪಿಎಸ್‌ ನೌಕರರ ಸಂಘದ ಮುಖಂಡರು ಗುರುವಾರ ಸಾಂಕೇತಿಕ ಧರಣಿ ನಡೆಸಿದರು.

ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ವೇಳೆ ಮಾತನಾಡಿದ ಸ್ಥಳೀಯ ಸಂಘದ ಅಧ್ಯಕ್ಷ ಎಂ.ಟಿ.ಮಲ್ಲೇಶ್‌, ‘ಹೊಸ ಯೋಜನೆಯು ನೌಕರರ ನಿವೃತ್ತಿ ಜೀವನವನ್ನು ಅತಂತ್ರಗೊಳಿಸಲಿದೆ. ಜೀವನ ಭದ್ರತೆಯನ್ನೇ ಕಸಿದುಕೊಳ್ಳಲಿರುವ ಯೋಜನೆಯನ್ನು ವಾಪಸ್‌ ಪಡೆದು, ಹಿಂದಿನ ಯೋಜನೆಯನ್ನೇ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ಹಳೇ ಪಿಂಚಣಿ ಯೋಜನೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಶೇ 50ರಷ್ಟು ನಿಶ್ಚಿತ ಪಿಂಚಣಿ ದೊರಕುತ್ತದೆ. ಆದರೆ ಹೊಸ ಯೋಜನೆಯಲ್ಲಿ ಅದಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದರೂ ಕಡಿಮೆ ಪಿಂಚಣಿ ನಿಗದಿಯಾಗುತ್ತದೆ’ ಎಂದು ದೂರಿದರು.

ಮುಖಂಡರಾದ ಜಿ.ಕೆ.ರಾಮಕೃಷ್ಣ, ಟಿ.ರಾಜಾರೆಡ್ಡಿ, ಎಂ.ಶಿವಾಜಿರಾವ್, ಪಿ.ನಾಗರಾಜ, ಕೆ.ಪಂಪನಗೌಡ, ವಿ.ಆನಂದನಾಯ್ಕ, ಕೆ.ಹನುಮಂತಪ್ಪ, ಜಿ.ತಿಪ್ಪಾರೆಡ್ಡಿ, ಕೆ.ಮರಿಸ್ವಾಮಿ, ಎನ್.ಪೆದ್ದಣ್ಣ, ವೆಂಕಟೇಶ, ಹನುಮಂತರಾಯ ಪಾಲ್ಗೊಂಡಿದ್ದರು.

ಎನ್‌ಪಿಎಸ್‌‌ ರದ್ದತಿಗೆ ಆಗ್ರಹ

ಕೂಡ್ಲಿಗಿ: ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗೆ‌ ಗುರುವಾರ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ. ನಾಗನಗೌಡ, ಪ್ರಧಾನ ಕಾರ್ಯದರ್ಶಿ ಕೆ.ಯರ‍್ರಿಸ್ವಾಮಿ, ವಿಭಾಗೀಯ ಉಪಾಧ್ಯಕ್ಷೆ ಜಿ. ಜಿನಾಭಿ, ಎನ್‌ಪಿಎಸ್ ನೌಕರರ ಸಂಘದ ಸಂಚಾಲಕ ಅಣ್ಣಪ್ಪಸ್ವಾಮಿ, ಜಂಟಿ ಕಾರ್ಯದರ್ಶಿ ನಂದಿ ಬಸವರಾಜ, ಡಾ. ಷಣ್ಮುಖ ನಾಯ್ಕ್, ಮುಬೀನಾ, ದೊಡ್ಡಪ್ಪ, ಎಚ್. ಬಸವರಾಜ, ಷಣ್ಮುಖಪ್ಪ, ನೀಲಾ ನಾಯ್ಕ್ ಇದ್ದರು.

ನೌಕರರಿಂದ ಧರಣಿ

ಸಂಡೂರು: ಹೊಸ ಪಿಂಚಣಿ ಯೋಜನೆಯನ್ನು(ಎನ್‌ಪಿಎಸ್‌) ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ನಡೆಸಿದರು. ಬಳಿಕ ತಹಶೀಲ್ದಾರ್ ಎಚ್.ಎಂ. ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಲ್. ಜಯಶೀಲ್, ಉಪಾಧ್ಯಕ್ಷ ಉರುಕುಂದೆಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಕಂಪ್ಲಿ, ಮುಖಂಡರಾದ ಎ. ಕೃಷ್ಣಪ್ಪ, ಪದ್ಮನಾಭರಾವ್, ಪರಶುರಾಮ್, ಎಂ.ಟಿ. ರಾಥೋಡ್, ಪರಶುರಾಮ್, ಚರಂತಯ್ಯ, ಕೊಟ್ರೇಶ್, ಬಿ.ಎಸ್. ನಾಗರಾಜ್, ಪದ್ಮಾವತಿ, ಭುವನೇಶ್ವರಿ, ಪರಿಮಳ, ಸುನಿತಾ ಭಾಗವಹಿಸಿದ್ದರು.

ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಸಿರುಗುಪ್ಪ: ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಸಂಘದ ಪದಾಧಿಕಾರಿಗಳು ನಗರದ ತಹಶೀಲ್ದಾರ್ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ರಾಮನಗೌಡ, ಮುಖಂಡರಾದ ಶಿವಪ್ಪ ಬಾರೆಗಿಡದ್, ಚೊಕ್ಕ ಹನುಮಂತಗೌಡ, ದಿವಾಕರ ನಾರಾಯಣ, ಯರ‍್ರೆಪ್ಪ, ಗಜೇಂದ್ರ, ದಿವಾಕರ ರಾವ್, ಶ್ರೀಧರ್, ಹನುಮಂತಪ್ಪ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಹೊಸ ಬಸ್‌ ನಿಲ್ದಾಣದ ಹಳೆಯ ಸಮಸ್ಯೆ

ಕಂಪ್ಲಿ
ಹೊಸ ಬಸ್‌ ನಿಲ್ದಾಣದ ಹಳೆಯ ಸಮಸ್ಯೆ

27 May, 2018

ಕೊಟ್ಟೂರು
ಮತದಾರರ ಪಟ್ಟಿ ಪರಿಷ್ಕರಣೆಗೆ ಸೂಚನೆ

ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ಮುಗಿಯುತ್ತಿದ್ದು, ಮತದಾರ ಪಟ್ಟಿ ಸಿದ್ಧತೆ ಮತ್ತು ವೀಕ್ಷಕರ ನೇಮಕ ಕುರಿತು ರಾಜ್ಯ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿದೆ. ...

27 May, 2018
ಗೋನಾಳು ಓಣಿಗಳಲ್ಲಿ ಬೂಟಿನ ಸದ್ದು

ಕಂಪ್ಲಿ
ಗೋನಾಳು ಓಣಿಗಳಲ್ಲಿ ಬೂಟಿನ ಸದ್ದು

27 May, 2018

ಹಗರಿಬೊಮ್ಮನಹಳ್ಳಿ
ಸಾಲಮನ್ನಾ: ರೈತಸಂಘ ಆಗ್ರಹ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ರೈತರ ಸಾಲಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಜೆ.ಎಂ.ವೀರಸಂಗಯ್ಯ ಆಗ್ರಹಿಸಿದರು. ...

26 May, 2018
ಗಾಳಿ, ಮಳೆ: ಬಾಳೆ, ಎಲೆ ತೋಟಗಳಿಗೆ ಹಾನಿ

ಸಂಡೂರು
ಗಾಳಿ, ಮಳೆ: ಬಾಳೆ, ಎಲೆ ತೋಟಗಳಿಗೆ ಹಾನಿ

26 May, 2018