ಶುಕ್ರವಾರ, 19 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಶಾಲಾ ಬಾಲಕಿ ಅತ್ಯಾಚಾರ : ಸಂತ್ರಸ್ತ ಬಾಲಕಿ ನಡತೆ ಸರಿ ಇಲ್ಲ ಎಂದ ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್‌ !

Last Updated 19 ಜನವರಿ 2018, 12:17 IST
ಅಕ್ಷರ ಗಾತ್ರ

ಬೆಂಗಳೂರು: ಡಿಸೆಂಬರ್ ತಿಂಗಳಲ್ಲಿ ವಿಜಯಪುರದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ವೇದಿಕೆ’ (ಡಿಡಿಎಸ್‌ಎಚ್‌ಎಸ್) ಸಂಚಾಲಕ ಭಾಸ್ಕರ್ ಪ್ರಸಾದ್ ಹಾಗೂ ಅಂದು ಉತ್ತರ ವಲಯದ ಐಜಿಪಿಯಾಗಿದ್ದ ಡಾ. ಕೆ. ರಾಮಚಂದ್ರರಾವ್‌ ನಡುವಿನ ದೂರವಾಣಿ ಸಂಭಾಷಣೆ ಬಹಿರಂಗಗೊಂಡಿದ್ದು  ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಭಾಸ್ಕರ್ ಪ್ರಸಾದ್ ಹಾಗೂ ಡಾ. ಕೆ. ರಾಮಚಂದ್ರರಾವ್‌ ಅವರ ನಡುವಿನ ಸಂಭಾಷಣೆ ಬಗ್ಗೆ ‘ಸಮಾಚಾರ ಡಾಟ್‌ ಕಾಮ್‌‘ ವಿಸ್ತೃತ ವರದಿ ಪ್ರಕಟಿಸಿದೆ.

ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಭಾಸ್ಕರ್ ಪ್ರಸಾದ್ ಅಂದಿನ ಉತ್ತರ ವಲಯದ ಐಜಿಪಿಯಾಗಿದ್ದ ಡಾ. ಕೆ. ರಾಮಚಂದ್ರ ರಾವ್‌ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸುತ್ತಾರೆ. ಈ ವೇಳೆ ‘ಆಫ್‌ ದಿ ರೆಕಾರ್ಡ್‌’ ಹೆಸರಿನಲ್ಲಿ ರಾಮಚಂದ್ರರಾವ್‌ ಮಾತನಾಡುತ್ತಾರೆ.  ಒಟ್ಟು 15 ನಿಮಿಷಗಳ ಸಂಭಾಷಣೆ ಇದಾಗಿದೆ. ಈ ಹಿರಿಯ ಪೊಲೀಸ್‌ ಅಧಿಕಾರಿ ಸಾವಿಗೀಡಾದ ಬಾಲಕಿಯ ಬಗ್ಗೆ ಹೇಳಿರುವ ಮಾತುಗಳು ತುಂಬಾ ಅಸಭ್ಯವಾಗಿವೆ.

ಆಡಿಯೊದಲ್ಲಿ ಏನಿದೆ ?

‘ಸಂತ್ರಸ್ತ ಬಾಲಕಿ ಸಾವನ್ನಪ್ಪುವ ಮುನ್ನವೇ ಗರ್ಭಪಾತಕ್ಕೆ ಒಳಗಾಗಿದ್ದರು, ಕೆಲ ಹುಡುಗರ ಜತೆ ಸಂಬಂಧ ಇತ್ತು. ಅಂದೂ ಸಹ ಆಕೆ ಸ್ನೇಹಿತನೊಬ್ಬನ ಜತೆ ಲೈಂಗಿಕ ಸಂಪರ್ಕ ಪಡೆದಿದ್ದಳು. ಅದಾದ ಮೇಲೆ, ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದಳು’ ಎಂದು ಹೇಳುತ್ತಾರೆ.

“ಸಂತ್ರಸ್ತ ಬಾಲಕಿ ಸಾಕಷ್ಟು ಸ್ನೇಹಿತರನ್ನು ಹೊಂದಿದ್ದಳು. ಅವಳಿಗೆ ಕಳೆದ ಒಂದು ವರ್ಷದಿಂದ ನಿರಂತರ ಲೈಂಗಿಕ ಸಂಪರ್ಕವಿತ್ತು. ಇತ್ತೀಚೆಗಷ್ಟೆ ಗರ್ಭ ಧರಿಸಿದ್ದಳು. ಅದನ್ನು ನಿವಾರಿಸಿಕೊಳ್ಳುವ ಮಾತ್ರೆ ತೆಗೆದುಕೊಂಡಿದ್ದಳು. ಹೀಗಾಗಿ ಇನ್ನೂ ಬ್ಲೀಡಿಂಗ್ ಇತ್ತು. ಆದರೂ ಡಿ. 19ರಂದು ತನ್ನ ಸ್ನೇಹಿತನಿಗೆ ಕರೆ ಮಾಡಿ ‘XXX’ ಮಾಡೋಣ ಬಾ ಎನ್ನುತ್ತಾಳೆ. ಅವರ ಭಾಷೆಯಲ್ಲಿ ತ್ರಿಬಲ್ ಎಕ್ಸ್‌ ಎಂದರೆ ಅದೇ ಗೊತ್ತಲ್ಲ…”  ಎನ್ನುತ್ತಾರೆ.

“ಅಂದು ಶಾಲೆಯಿಂದ ತನ್ನ ಸ್ನೇಹಿತೆ ಜತೆಗೆ ಸಂತ್ರಸ್ತ ಬಾಲಕಿ ಒಂದು ‘ಆಂಟಿ ಸ್ಪಾಟ್‌’ಗೆ ಬರುತ್ತಾಳೆ. ಅಲ್ಲಿ ಅವಳೊಬ್ಬಳೇ ಹಿಂದಿನ ಬಾಗಿಲಿನಿಂದ ಒಳ ಹೋಗಿ ಸ್ನೇಹಿತನ ಜತೆ ಸೆಕ್ಸ್‌ ಮಾಡುತ್ತಾಳೆ. ಆ ನಂತರ ಕುಸಿದು ಬೀಳುತ್ತಾಳೆ. ಈ ಸಮಯದಲ್ಲಿ ಹೊರಗೆ ಕಾಯುತ್ತಿದ್ದ ಆಕೆಯ ಸ್ನೇಹಿತೆ ಹಾಗೂ ಮನೆಯ ಆಂಟಿ ಒಳ ಹೋಗಿ ಅಕೆಗೆ ಬಟ್ಟೆ ಹಾಕುತ್ತಾರೆ,”  ಎಂದು ರಾಮಚಂದ್ರರಾವ್‌ ಹೇಳುತ್ತಾರೆ.

ಕೊನೆಗೆ ಸಂತ್ರಸ್ತ ಬಾಲಕಿ ನಡತೆ ಸರಿ ಇರಲಿಲ್ಲ ಎಂಬುದನ್ನು ‘ಆಫ್‌ ದಿ ರೆಕಾರ್ಡ್‌’ ಹೆಸರಿನಲ್ಲಿ ತಿಳಿಸಲು ರಾಮಚಂದ್ರ ರಾವ್‌ ಪ್ರಯತ್ನ ಮಾಡುತ್ತಾರೆ. ಡಿಸೆಂಬರ್ 20ರಂದು ದಾನಮ್ಮ ಅತ್ಯಾಚಾರಕ್ಕೆ ಒಳಗಾಗಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು.

ಕರೆ ಸ್ವೀಕರಿಸದ ರಾಮಚಂದ್ರ ರಾವ್‌

ಈ ಬಗ್ಗೆ ರಾಮಚಂದ್ರ ರಾವ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು "ಪ್ರಜಾವಾಣಿ" ಪ್ರಯತ್ನಿಸಿತು. ಆದರೆ ಅವರು ಕರೆಯನ್ನು ಸ್ವೀಕಾರ ಮಾಡಲಿಲ್ಲ. ಪ್ರಸ್ತುತ ರಾಮಚಂದ್ರ ರಾವ್ ಕುಂದು ಕೊರತೆ ಮತ್ತು ಮಾನವ ಹಕ್ಕುಗಳ ಘಟಕದ ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT