ಉಡುಪಿ

ಪಾರ್ಕಿಂಗ್‌ ಸ್ಥಳದಲ್ಲಿದ್ದ ಅಂಗಡಿ ತೆರವು

ಜನರಿಗೆ ಅನುಕೂಲವಾಗಲಿ, ಪ್ರವಾಸಿಗರಿಗೆ ಯಾವುದೇ ತೊಂದರೆ ಇರಬಾರದು ಎಂಬ ಕಾರಣಕ್ಕೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ನೆಲಸಮಗೊಂಡಿರುವ ಕೃಷ್ಣ ಮಠದ ರಾಜಾಂಗಣ ವಾಹನ ನಿಲುಗಡೆ ಸ್ಥಳದಲ್ಲಿದ್ದ ಅಂಗಡಿಗಳು.

ಉಡುಪಿ: ಕೃಷ್ಣ ಮಠದ ರಾಜಾಂಗಣ ವಾಹನ ನಿಲುಗಡೆ ಸ್ಥಳದಲ್ಲಿದ್ದ ಎರಡು ಅಂಗಡಿಗಳನ್ನು ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿ ಅವರು ಶುಕ್ರವಾರ ತೆರವುಗೊಳಿಸಿದರು.

ಕೃಷ್ಣ ಮಠಕ್ಕೆ ಸೇರಿದ ಜಾಗದಲ್ಲಿದ್ದ ಅಂಗಡಿಗಳಲ್ಲಿ ತಿಂಡಿ– ತಿನಿಸು, ತಂಪು ಪಾನೀಯ, ಸ್ಮರಣಿಕೆ, ಹಾರ ಮುಂತಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಗ್ರಾಹಕರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ.

ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಅವರಿಗೆ ದೂರು ಬಂದಿತ್ತು. ಅಲ್ಲದೆ ಪ್ರವಾಸಿಗರ ವಾಹನ ನಿಲುಗಡೆಗೂ ತೊಂದರೆ ಮಾಡುತ್ತಿದ್ದರು ಎಂಬ ಆರೋಪ ಬಂದ ಹಿನ್ನಲೆಯಲ್ಲಿ ತೆರವು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ ಅವರು, ‘ಜನರಿಗೆ ಅನುಕೂಲವಾಗಲಿ, ಪ್ರವಾಸಿಗರಿಗೆ ಯಾವುದೇ ತೊಂದರೆ ಇರಬಾರದು ಎಂಬ ಕಾರಣಕ್ಕೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹಣದ ಆಸೆಗಾಗಿ ಮಠದ ಕೆಲವರು ಅಂಗಡಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ತೆರವು ಮಾಡಲಾಯಿತು’ ಎಂದರು.

ಅಂಗಡಿ ತೆರವು ಮಾಡಿದ ಬಗ್ಗೆ ಯಾವುದೇ ದೂರು ಬಂದಿಲ್ಲ. ವಿಷಯ ತಿಳಿದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಂಗಡಿ ಮಾಲೀಕರು ಅಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ನೂತನ ಕಟ್ಟಡ ಉದ್ಘಾಟನೆ, ಶಿಲಾನ್ಯಾಸ

ಬ್ರಹ್ಮಾವರ
ನೂತನ ಕಟ್ಟಡ ಉದ್ಘಾಟನೆ, ಶಿಲಾನ್ಯಾಸ

27 May, 2018
ತಾಲ್ಲೂಕಾಗಿ ಘೋಷಣೆಯಾದರೂ ಇಲಾಖೆಗಳೇ ಇಲ್ಲ

ಕಾಪು
ತಾಲ್ಲೂಕಾಗಿ ಘೋಷಣೆಯಾದರೂ ಇಲಾಖೆಗಳೇ ಇಲ್ಲ

27 May, 2018
ಹಿರಿಯಡಕ: ಅಲೆವೂರು-ನೈಲಪಾದೆ ರಸ್ತೆಗೆ ಕೊನೆಗೂ ಅಭಿವೃದ್ಧಿ ಭಾಗ್ಯ

ಹಿರಿಯಡಕ
ಹಿರಿಯಡಕ: ಅಲೆವೂರು-ನೈಲಪಾದೆ ರಸ್ತೆಗೆ ಕೊನೆಗೂ ಅಭಿವೃದ್ಧಿ ಭಾಗ್ಯ

27 May, 2018

ಉಡುಪಿ
‘ವರ್ಣರಂಜಿತ ಸುಳ್ಳು ಹೇಳಿದ ಪ್ರಧಾನಿ ಮೋದಿ’

‘ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ವರ್ಣರಂಜಿತ ಸುಳ್ಳುಗಳನ್ನು ಹೇಳಿದ್ದಾರೆ. ಚುನಾವಣೆಗೂ ಮುನ್ನ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ’ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌...

27 May, 2018
ಸಸ್ಯ ಸಂಕುಲದ ಜತೆಗೆ  ನೈಜ ನಾಗಬನದ ಮರುಸೃಷ್ಟಿ

ಉಡುಪಿ
ಸಸ್ಯ ಸಂಕುಲದ ಜತೆಗೆ ನೈಜ ನಾಗಬನದ ಮರುಸೃಷ್ಟಿ

26 May, 2018