ಮನೆಯಲ್ಲಿ ಅಡಗಿ ಕೂತಿತ್ತು

ತುಮಕೂರು: ಸೆರೆಯಾದ ಚಿರತೆ ಬನ್ನೇರುಘಟಕ್ಕೆ

ಸೆರೆ ಹಿಡಿದಿರುವ ಚಿರತೆ ಅಂದಾಜು 9 ವರ್ಷದ್ದಾಗಿದೆ. ಎರಡು ತಾಸು ನಗರದ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲನೆಗೆ ಇಡಲಾಗುವುದು. ಬಳಿಕ ಬನ್ನೇರುಘಟಕ್ಕೆ ಕಳಿಸಲಾಗುವುದು ಎಂದು ಜಿಲ್ಲಾ ಅರಣ್ಯಾಧಿಕಾರಿ ರಾಮಲಿಂಗೇಗೌಡ ಹೇಳಿದರು.

ತುಮಕೂರು: ಸೆರೆಯಾದ ಚಿರತೆ ಬನ್ನೇರುಘಟಕ್ಕೆ

ತುಮಕೂರು: ನಗರದ ಜಯನಗರ ಬಡಾವಣೆಯಲ್ಲಿ ರಂಗನಾಥ್ ಎಂಬುವರ ಮನೆಯಲ್ಲಿ ಅವಿತಿದ್ದ ಚಿರತೆ ಹಿಡಿಯಲು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಸೆರೆ ಹಿಡಿದಿರುವ ಚಿರತೆ ಅಂದಾಜು 9 ವರ್ಷದ್ದಾಗಿದೆ. ಎರಡು ತಾಸು ನಗರದ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲನೆಗೆ ಇಡಲಾಗುವುದು. ಬಳಿಕ ಬನ್ನೇರುಘಟಕ್ಕೆ ಕಳಿಸಲಾಗುವುದು ಎಂದು ಜಿಲ್ಲಾ ಅರಣ್ಯಾಧಿಕಾರಿ ರಾಮಲಿಂಗೇಗೌಡ ಹೇಳಿದರು.

ಅಡುಗೆ ಮನೆಯಲ್ಲಿ ಅವಿತು ಕುಳಿತಿದ್ದ ಚಿರತೆಗೆ ಅರವಳಿಕೆ ತಜ್ಞರಾದ ಡಾ.ಸುಜಯ್ ಹಾಗೂ ಡಾ.ಮುರಳೀಧರ್ ಅರವಳಿಕೆ ಪ್ರಯೋಗಿಸಿದರು.

ಮೊದಲ ಪ್ರಯೋಗ ಭಾಗಶಃ ಯಶಸ್ವಿಯಾದರೂ ಚಿರತೆ ಅಬ್ಬರಿಸುತ್ತಿತ್ತು. ಎರಡನೇ ಬಾರಿ ಪ್ರಯೋಗಿಸಿದಾಗ ಚಿರತೆಗೆ ಮಂಪರು(ಮೂರ್ಛೆ) ಆವರಿಸಿ ನೆಲಕ್ಕೊರಗಿತು. ಇಪತ್ತು ನಿಮಿಷಗಳ ಬಳಿಕ ಬಲೆ ಹಾಕಿ ಹಿಡಿದರು. ನಂತರ ಬೋನಿನಲ್ಲಿ ಜಿಲ್ಲಾ ಅರಣ್ಯಾಧಿಕಾರಿ ಕಚೇರಿಗೆ ಸಾಗಿಸಲಾಯಿತು.

ಎರಡು ತಾಸು ಪರಿಶೀಲನೆ ನಡೆಸಿ ಬಳಿಕ ಬನ್ನೇರುಘಟ್ಟಕ್ಕೆ ಕಳುಹಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು

ತುಮಕೂರು
ಮಾವು ಬೆಳೆಗಾರರ ನೆರವಿಗೆ ಒತ್ತಾಯ

ಬೆಳೆಗಾರರು ಬೆಳೆದ ಮಾವಿನ ಹಣ್ಣನ್ನು ಆಹಾರ ಸಂಸ್ಕರಣ ಘಟಕದ ಮೂಲಕ ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ಮೂಲಕ ನೆರವಿಗೆ ಬರಬೇಕು ಎಂದು ಒತ್ತಾಯಿಸಿ...

27 May, 2018
ಮೊಗ್ಗಿನ ಜಡೆಗಳ ಚಿತ್ತಾರ; ಸಡಗರ

ತುಮಕೂರು
ಮೊಗ್ಗಿನ ಜಡೆಗಳ ಚಿತ್ತಾರ; ಸಡಗರ

27 May, 2018
ಮಳೆಗೆ ಸುಡುಗಾಡು ಸಿದ್ಧರ ಬದುಕು ಬಲಿ

ಚಿಕ್ಕನಾಯಕನಹಳ್ಳಿ
ಮಳೆಗೆ ಸುಡುಗಾಡು ಸಿದ್ಧರ ಬದುಕು ಬಲಿ

27 May, 2018

ತುಮಕೂರು
ಸಂಜೆ ವೇಳೆ ಜಿಲ್ಲಾ ಕೇಂದ್ರದಿಂದ ಬಸ್ಸಿಲ್ಲ!

ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ಕೊರಟಗೆರೆ, ಮಧುಗಿರಿ ಮತ್ತು ಪಾವಗಡಕ್ಕೆ ಹೋಗಲು ಸಂಜೆ 6.30ರ ನಂತರ ಬಸ್ಸುಗಳಿಲ್ಲ! ಅಷ್ಟೇ ಅಲ್ಲ. ಆ ಸಮಯದಲ್ಲಿ ಆ ತಾಲ್ಲೂಕು...

26 May, 2018

ತುಮಕೂರು
ಪಾಲಿಕೆ ಸ್ಥಾಯಿ ಸಮಿತಿಗಳಿಗೆ ಆಯ್ಕೆ

ಮಹಾನಗರ ಪಾಲಿಕೆಯ ಮೂರು ಸ್ಥಾಯಿ ಸಮಿತಿಗಳಿಗೆ ಶುಕ್ರವಾರ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಾಲಿಕೆ ಸಭಾಂಗಣದಲ್ಲಿ ಮೇಯರ್ ಸುಧೀಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ...

26 May, 2018