ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಪೋವಾ ಮಣಿಸಿದ ಕೆರ್ಬರ್‌

Last Updated 20 ಜನವರಿ 2018, 19:40 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ರಾಯಿಟರ್ಸ್‌/ಎಎಫ್‌ಪಿ): ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ನಲ್ಲಿ ರಷ್ಯಾದ ಮರಿಯಾ ಶರಪೋವಾ ಸವಾಲು ಅಂತ್ಯಕಂಡಿದೆ.

ರಾಡ್‌ ಲೇವರ್‌ ಅರೆನಾದಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹೋರಾಟದಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ 6–1, 6–3ರ ನೇರ ಸೆಟ್‌ಗಳಿಂದ ಶರಪೋವಾ ಸವಾಲು ಮೀರಿದರು.

ಹಲೆಪ್‌ಗೆ ಪ್ರಯಾಸದ ಗೆಲುವು: ರುಮೇನಿಯಾದ ಸಿಮೊನಾ ಹಲೆಪ್‌ ಮೂರನೇ ಸುತ್ತಿನಲ್ಲಿ ಪ್ರಯಾಸದ ಗೆಲುವು ಗಳಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಸಿಮೊನಾ 4–6, 6–4, 15–13ರಲ್ಲಿ ಅಮೆರಿಕದ ಲಾರೆನ್‌ ಡೇವಿಸ್‌ ಅವರನ್ನು ಮಣಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಕ್ಯಾರೋಲಿನಾ ಪ್ಲಿಸ್ಕೋವಾ 7–6, 7–5ರಲ್ಲಿ ಲೂಸಿ ಸಫರೋವಾ ಎದುರೂ, ಮ್ಯಾಡಿಸನ್‌ ಕೀಸ್‌ 6–3, 6–4ರಲ್ಲಿ ಅನಾ ಬೊಗ್ದಾನ್‌ ಮೇಲೂ, ಕ್ಯಾರೋಲಿನಾ ಗಾರ್ಸಿಯಾ 6–3, 5–7, 6–2ರಲ್ಲಿ ಅಲಿಯಾಕ್ಸಾಂಡ್ರ ಸಸನೊವಿಚ್‌ ಎದುರೂ, ನವೊಮಿ ಒಸಾಕ 6–4, 6–2ರಲ್ಲಿ ಆ್ಯಷ್ಲೆ ಬಾರ್ಟಿ ಮೇಲೂ, ಬಾರ್ಬೊರಾ ಸ್ಟ್ರೈಕೋವಾ 6–2, 6–2ರಲ್ಲಿ ಬರ್ನಾರ್ಡ್‌ ಪೆರಾ ವಿರುದ್ಧವೂ ಗೆದ್ದರು.

ನಾಲ್ಕನೇ ಸುತ್ತಿಗೆ ನೊವಾಕ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

ಮೂರನೇ ಸುತ್ತಿನ ಹೋರಾಟದಲ್ಲಿ ಆರು ಬಾರಿಯ ಚಾಂಪಿಯನ್‌ ಜೊಕೊವಿಚ್‌  6–2, 6–3, 6–3ರಿಂದ 21ನೇ ರ‍್ಯಾಂಕಿಂಗ್‌ನಲ್ಲಿರುವ ಅಲ್ಬರ್ಟ್‌ ರಾಮೊಸ್‌ ವಿನೊಲಸ್‌ ಅವರನ್ನು ಮಣಿಸಿದರು.

ಮುಂದಿನ ಸುತ್ತಿನಲ್ಲಿ 14ನೇ ಶ್ರೇಯಾಂಕಿತ ನೊವಾಕ್‌, ದಕ್ಷಿಣ ಕೊರಿಯಾದ ಚುಂಗ್‌ ಹೆಯೊನ್‌ ವಿರುದ್ಧ ಸೆಣಸಲಿದ್ದಾರೆ.

ಮೂರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಚುಂಗ್‌ 5–7, 7–6, 2–6, 6–3, 6–0ರಲ್ಲಿ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಗೆದ್ದರು.

ಇತರ ಪಂದ್ಯಗಳಲ್ಲಿ ಡಾಮಿನಿಕ್‌ ಥೀಮ್‌ 6–4, 6–2, 7–5ರಲ್ಲಿ ಆ್ಯಡ್ರಿಯನ್‌ ಮನ್ನಾರಿನೊ ಎದುರೂ, ಟೆನ್ನಿಸ್‌ ಸ್ಯಾಂಡ್‌ಗ್ರೆನ್‌ 5–7, 6–3, 7–5, 7–6ರಲ್ಲಿ ಮ್ಯಾಕ್ಸಿಮಿಲಿಯನ್‌ ಮಾರ್ಟೆರರ್‌ ವಿರುದ್ಧವೂ, ಮಾರ್ಟನ್‌ ಫುಕ್‌ಸೊವಿಕ್ಸ್‌ 6–3, 6–3, 6–2ರಲ್ಲಿ ನಿಕೊಲಸ್‌ ಕಿಕ್ಕರ್‌ ಮೇಲೂ, ಫ್ಯಾಬಿಯೊ ಫಾಗ್ನಿನಿ 3–6, 6–2, 6–1, 4–6, 6–3ರಲ್ಲಿ ಜೂಲಿಯನ್‌ ಬೆನ್ನೆಟಿಯು ಎದುರೂ, ಥಾಮಸ್‌ ಬರ್ಡಿಕ್‌ 6–3, 6–3, 6–2ರಲ್ಲಿ ವುವಾನ್ ಮಾರ್ಟಿನ್‌ ಡೆಲ್‌ ಪೊಟ್ರೊ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT