ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 22–1–1968

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಚರಣ್‌ಸಿಂಗ್‌ಗೆ ಎಸ್ಸೆಸ್ಪಿ ಬೆಂಬಲ? ಪಕ್ಷದಲ್ಲಿ ಒಡಕು

ಲಖನೌ, ಜ. 21– ಸಂಯುಕ್ತ ವಿಧಾಯಕ ದಳದ ನಾಯಕರ ಚುನಾವಣೆ ಬಗ್ಗೆ ಪಕ್ಷದ ಶಾಸಕರನ್ನು ಸಮಾಲೋಚಿಸದೆ ನಿರ್ಧಾರ ಹೇರುವ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ಮೂವರು ಎಸ್.ಎಸ್.ಪಿ. ನಾಯಕರು ಎಚ್ಚರಿಸಿ ಇದರಿಂದ ದುಷ್ಪರಿಣಾಮಗಳು ಸಂಭವಿಸುವುವೆಂದು ಹೇಳಿದ್ದಾರೆ.

ದಳ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಹಾರಕ್ಕೆ ಹೊಸ ನಾಯಕರಆಯ್ಕೆಯಲ್ಲದೆ ಅನ್ಯಮಾರ್ಗವೇ ಇಲ್ಲವೆಂದು ಉಪಮುಖ್ಯಮಂತ್ರಿ ಶ್ರೀ ಪ್ರಕಾಶ್‌ರವರು ಇನ್ನೊಂದು ಅಭಿಪ್ರಾಯ ತಿಳಿಸಿದ್ದಾರೆ.

ವಿಶ್ವದ ನಾಲ್ಕನೆ ಬದಲಿ ಹೃದಯಿ ಕಸ್ಟೆರಕ್‌ರ ಸಾವು

ಪಾಲೊಅಲ್ಪೊ (ಕ್ಯಾಲಿಫೋರ್ನಿಯ), ಜ. 21– ವಿಶ್ವದ ನಾಲ್ಕನೆ ಬದಲಿ ಹೃದಯಿಯಾಗಿ ಹದಿನೈದು ದಿನಗಳ ಕಾಲ ಜೀವಿಸಿದ್ದ ನಂತರ ಮೈಕ್ ಕಸ್ಪೆರಕ್ ಅವರು ಇಂದು ಮೃತರಾದರು.

ಹಿಂದೆ ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ 54 ವರ್ಷ ವಯಸ್ಸಿನ ಮೈಕ್ ಕಸ್ಪೆರಕ್ ಅವರಿಗೆ ಜನವರಿ 6 ರಂದು 43 ವರ್ಷ ವಯಸ್ಸಿನ ಮಹಿಳೆಯೊಬ್ಬಳ ಹೃದಯವನ್ನು ಜೋಡಿಸಲಾಯಿತು.

ಹದಿನೈದು ದಿನಗಳ ಹಿಂದೆ ನಡೆದ ಶಸ್ತ್ರಚಿಕಿತ್ಸೆಯ ನಂತರ ಉಂಟಾದ ಕೆಲವೊಂದು ಜಟಿಲತೆಗಳ ಕಾರಣ ಕಸ್ಪೆರಕ್‌ ಮೃತರಾದರೆಂದು ಸ್ಟಾನ್‌ಫರ್ಡ್‌ ಮೆಡಿಕಲ್‌ ಸಂಟರ್‌ ಹೊರಡಿಸಿದ ಪ್ರಕಟಣೆ ತಿಳಿಸುತ್ತದೆ.

ಡಾ. ಬ್ಲೇಬರ್ಗ್ ಸ್ಥಿತಿ ಉತ್ತಮ

ಕೇಪ್‌ಟೌನ್, ಜ. 21– ವಿಶ್ವದ ಏಕಮಾತ್ರ ಜೀವಂತ ಬದಲಿ ಹೃದಯಿ ಡಾ. ಫಿಲಿಪ್ ಬ್ಲೇಬರ್ಗ್ ಅವರು ಇನ್ನೂ ಗುಣಮುಖರಾಗುತ್ತಿದ್ದಾರೆಂದು ಮುಂದಿನ ತಿಂಗಳು ಮಧ್ಯ ಭಾಗದ ವೇಳೆಗೆ ಅವರು ಆಸ್ಪತ್ರೆ ಬಿಟ್ಟು ತೆರಳಬಹುದೆಂದೂ ವೈದ್ಯರುಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT