ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಣಿಕಾ, ಮಾನಸಾ ಜೋಡಿಗೆ ಪ್ರಶಸ್ತಿ

ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ
Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಎಸ್.ಕಾರ್ಣಿಕಾಶ್ರೀ, ಮಾನಸಾ ರಾವತ್‌ (ಉತ್ತರಾಖಂಡ್‌) ಜೋಡಿ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಭಾನುವಾರ ನಡೆದ 13ವರ್ಷ ದೊಳಗಿನ ಬಾಲಕಿಯರ ಡಬಲ್ಸ್‌ನಲ್ಲಿ ಎಸ್.ಕಾರ್ಣಿಕಾ ಶ್ರೀ, ಮಾನಸಾ ರಾವತ್‌ ಅವರು 21–18, 21–9 ರ ನೇರ ಸೆಟ್‌ಗಳಿಂದ ನವ್ಯಾ ಕಂದೇರಿ (ಆಂಧ್ರಪ್ರದೇಶ), ಪಿ.ದಿವಿತಾ (ತೆಲಂಗಾಣ) ಅವರನ್ನು ಮಣಿಸಿದರು.

13 ವರ್ಷದೊಳಗಿನ ಬಾಲಕರ ಡಬಲ್ಸ್‌ನಲ್ಲಿ ಎಸ್‌.ಸಾರಸ್ವತ್‌ (ರಾಜ ಸ್ಥಾನ), ಎ.ವಾಲಿಶೆಟ್ಟಿ (ತೆಲಂಗಾಣ) ಅವರ ಜೋಡಿಯು 12–21, 21–14, 23–21ರಲ್ಲಿ ಕರ್ನಾಟಕದ ಸಾತ್ವಿಕ್ ಶಂಕರ್‌, ತುಷಾರ್ ಸುವೀರ್ ಎದುರು ಗೆದ್ದರು.

13 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ 11ನೇ ಶ್ರೇಯಾಂಕದ ಅಸ್ಸಾಂನ ಅಂಕಿತಾ ಗೋಗೋಯ್‌ ಅವರು 21–18, 21–19ರಲ್ಲಿ 2ನೇ ಶ್ರೇಯಾಂಕದ ಉತ್ತಾಖಂಡ್‌ನ ಮಾನಸಾ ರಾವನ್‌ ಅವರಿಗೆ ಸೋಲುಣಿಸಿದರು.

13 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ 3ನೇ ಶ್ರೇಯಾಂಕದ ಹರಿಯಾಣದ ಗಗನ್ 15–21, 21–12, 21–19ರಲ್ಲಿ ಒಂದನೇ ಶ್ರೇಯಾಂಕದ ಸಂಸ್ಕಾರ್ ಸಾರಸ್ವತ್ ವಿರುದ್ಧ ಗೆದ್ದರು.

15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಮಹಾರಾಷ್ಟ್ರದ ತಾರಾ ಷಾ 21–17, 21–8ರಲ್ಲಿ ಉತ್ತರಾಖಂಡ್‌ನ ಅನುಪಮಾ ಉಪಾಧ್ಯಾ ಎದುರು, 15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ತೆಲಂಗಾಣದ ಪ್ರಣವ್‌ ರಾವ್ ಅವರು 21–17, 21–12ರಲ್ಲಿ ಗೆಲುವು ಸಾಧಿಸಿದರು.

15 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ನಲ್ಲಿ ತೆಲಂಗಾಣದ ಮೇಘನಾ ರೆಡ್ಡಿ, ಗುಜರಾತ್‌ನ ತಸ್ನಿಮ್ ಮಿರ್‌ ಜೋಡಿ 21–17, 18–21, 21–7ರಲ್ಲಿ ಹರಿಯಾಣದ ದೇವಿಕಾ ಶಿಹಾಗ್, ಉತ್ತರಾಖಂಡ್‌ನ ಅನುಪಮಾ ಉಪಾಧ್ಯಾಯ ಅವರನ್ನು ಸೋಲಿಸಿತು.

15 ವರ್ಷದೊಳಗಿನ ಬಾಲಕರ ಡಬಲ್ಸ್‌ನಲ್ಲಿ ತೆಲಂಗಾಣದ ಪ್ರಣವ್‌ರಾವ್‌, ಸಾಯಿ ವಿಷ್ಣು ಪುಲ್ಲೇಲ ಜೋಡಿ 21–14, 21–18ರಲ್ಲಿ ತೆಲಂಗಾಣದ ಉನೀತ್‌ ಕೃಷ್ಣ, ಉತ್ತರಖಂಡ್‌ನ ಶಶಾಂಕ್ ಚೆಟ್ರಿ ವಿರುದ್ಧ ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT