ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌ ನಿಷೇಧ ಆದೇಶವನ್ನು ಹಿಂಪಡೆದ ಸೇಂಟ್‌ ಸ್ಟೀಫನ್‌ ಶಾಲೆ

Last Updated 23 ಜನವರಿ 2018, 13:59 IST
ಅಕ್ಷರ ಗಾತ್ರ

ಲಂಡನ್‌: ಇಂಗ್ಲೆಂಡಿನ ಸೇಂಟ್‌ ಸ್ಟೀಫನ್‌ ಶಾಲೆಯಲ್ಲಿ ಎಂಟು ವರ್ಷದ ಒಳಗಿನ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ನಿಷೇಧಿಸಿದಕ್ಕೆ ತೀವ್ರ ಟೀಕೆ ವ್ಯಕ್ತವಾದ ಕಾರಣ ಆದೇಶವನ್ನು ಹಿಂಪಡೆಯಲು ನಿರ್ಧರಿಸಿದೆ.

‘ಮಕ್ಕಳ ಆರೋಗ್ಯ, ಸುರಕ್ಷತೆ ಹಾಗೂ ಕ್ಷೇಮದ ಆಧಾರದಲ್ಲಿ ಶಾಲೆಯ ಸಮವಸ್ತ್ರದ ನೀತಿಯನ್ನು ರೂಪಿಸಲಾಗಿದೆ. ಆದರೆ, ಶಾಲೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ತಕ್ಷಣದಲ್ಲಿ ಜಾರಿಯಾಗುವಂತೆ ಸಮವಸ್ತ್ರ ನೀತಿಯನ್ನು ಬದಲಾವಣೆ ಮಾಡಲಾಗುವುದು’ ಎಂದು ಶಾಲೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಶಾಲಾ ಮಂಡಳಿಯ ಮುಖ್ಯಸ್ಥ ಆರಿಫ್‌ ಖವಾಯಿ, ಇತ್ತೀಚೆಗೆ ‌ಮಕ್ಕಳು ಹಿಜಾಬ್‌ ಧರಿಸುವುದನ್ನು ಮತ್ತು ರಂಜಾನ್‌ ಸಮಯದಲ್ಲಿ ಉಪವಾಸ ಕೈಗೊಳ್ಳುವುದರ ಬಗ್ಗೆ ಗಟ್ಟಿ ನಿರ್ಧಾರ ಕೈಗೊಳ್ಳುವಂತೆ ಬ್ರಿಟನ್‌ ಸರ್ಕಾರವನ್ನು ಆಗ್ರಹಿಸಿದ್ದರು. ಆರಿಫ್‌ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆರಿಫ್‌ ಅವರ ರಾಜೀನಾಮೆಗೆ ಸಮಾಜಿಕ ಜಾಲತಾಣದಲ್ಲಿ ಅವರ ಹಾಗೂ ಭಾರತ ಸಂಜಾತೆ ಶಾಲೆಯ ಪ್ರಾಂಶುಪಾಲರಾದ ನೀನಾ ಲಾಲ್‌ ವಿರುದ್ಧ ಆಕ್ರಮಣಕಾರಿ ಸಂದೇಶಗಳನ್ನು ಪೋಸ್ಟ್‌ ಮಾಡಲಾಗುತ್ತಿದೆ.

‘ಈಗ ಪ್ರಾಂಶು‍ಪಾಲರ ಸರದಿ. ಅವರನ್ನು ಹುದ್ದೆಯಿಂದ ಇಳಿಸಿ ಹಾಗೂ ಆಕೆ ಹಿಜಾಬ್‌ ಧರಿಸುವಂತೆ ವತ್ತಾಯಿಸಿ. ಅವಳಿಗು ಗೊತ್ತಾಲಗಿ ವತ್ತಾಯ ಎಂದರೇನು ಎಂದು’ ಎನ್ನುವಂತಹ ಸಂದೇಶಗಳು ನೀನಾ ಅವರ ವಿರುದ್ಧ ಪೋಸ್ಟ್‌ ಮಾಡಲಾಗುತ್ತಿದೆ.

</p><p>ಹನ್ನೊಂದು ವರ್ಷದ ಒಳಗಿನ ಹುಡುಗಿಯರಿಗೆ ಹಿಜಬ್‌ ನಿಷೇಧವನ್ನು ವಿಸ್ತರಿಸಲು ಶಾಲೆ ಯೋಜನೆ ಹಾಕಿಕೊಂಡಿತ್ತು. ಆದರೆ, ಇದನ್ನು ಶಾಲೆ ಕೈಬಿಟ್ಟಿದೆ. ಬ್ರಿಟನ್‌ನ ಶಿಕ್ಷಣ ಮಾರ್ಗಸೂಚಿ ಇಲಾಖೆಯ ಪ್ರಕಾರ, ಸಮವಸ್ತ್ರ ನೀತಿಯು ಆಯಾ ಪ್ರಾಂಶುಪಾಲರಿಗೆ ಹಾಗೂ ಅದರ ಆಡಳಿತ ಮಂಡಳಿಗೆ ಬಿಟ್ಟ ವಿಚಾರ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT