ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾ: 8 ಹೊಸ ಪಕ್ಷಿಗಳ ಪತ್ತೆ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಕಾರವಾರ: ಕೈಗಾ ಅಣು ವಿದ್ಯುತ್ ಕೇಂದ್ರವು ಪರಿಸರ ಮುಂದಾಳತ್ವ ಕಾರ್ಯಕ್ರಮದಡಿ ಭಾನುವಾರ ಆಯೋಜಿಸಿದ್ದ ಕೈಗಾ ಬರ್ಡ್‌ ಮ್ಯಾರಥಾನ್ 8ನೇ ಆವೃತ್ತಿಯಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಪ್ರದೇಶದಲ್ಲಿ 8 ಹೊಸ ಪಕ್ಷಿಗಳು ಪತ್ತೆಯಾಗಿವೆ.

ಪಕ್ಷಿ ಗಣತಿಯಲ್ಲಿ ಈವರೆಗೆ ಪತ್ತೆಯಾದ ಪಕ್ಷಿಗಳ ಸಂಖ್ಯೆ 284ಕ್ಕೆ ಏರಿದೆ.

ಇಂಡಿಯನ್ ಸ್ವಿಫ್ಟ್‌ಲೆಟ್, ವೆಟ್ರಂಪಡ್ ಸ್ಪೆನ್ ಟೇಲ್, ಯುರೇಶಿಯನ್ ಹಾಬಿ, ನಾರ್ತರ್ನ್‌ ಪಿನ್ಟೇಲ್, ನಾರ್ತರ್ನ್‌ ಶೆವೇಲಿಯರ್, ಯುವ್ರೀ ಬೆಲ್ಲಡ್ ಕುಕ್ಕೂ, ಗ್ರೇಟರ್ ಸ್ಪಾಟೆಡ್‌ ಈಗಲ್, ಯುರೇಶಿಯನ್ ಸ್ಪಾರ್ರೋ ಹಾಕ್‌– ಪತ್ತೆಯಾದ ಹೊಸ ಪಕ್ಷಿಗಳು.

ಸ್ಥಳೀಯ ಕೈಗಾ ನೌಕರರು, ಶಿರಸಿಯ ಅರಣ್ಯ ಮಹಾವಿದ್ಯಾಲಯ, ಉತ್ತರ ಕರ್ನಾಟಕ ಪಕ್ಷಿ ವೀಕ್ಷಣಾ ತಂಡ, ಗೋವಾ ಬರ್ಡ್‌ ಕನ್ಸರ್ವೇಷನ್ ನೆಟ್‌ವರ್ಕ್‌, ಗೋವಾ ಮಹಾವಿದ್ಯಾಲಯ, ಬೆಂಗಳೂರು ಪಕ್ಷಿ ವೀಕ್ಷಣಾಕಾರರ ಸಂಘ, ಡೆಹರಾಡೂನ್‌ನ ವೈಲ್ಡ್‌ಲೈಫ್‌ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ..
ಹೀಗೆ ದೇಶದ ವಿವಿಧ ಭಾಗಗಳಿಂದ ಸುಮಾರು 115 ಪಕ್ಷಿ ವೀಕ್ಷಣಾಕಾರರು ಗಣತಿಯಲ್ಲಿ ಭಾಗವಹಿಸಿದ್ದರು.

ಉದ್ಘಾಟನೆ: ಪಕ್ಷಿ ಗಣತಿಗೆ ಚಾಲನೆ ನೀಡಿದ ಕೈಗಾ ವಿದ್ಯುತ್ ಕೇಂದ್ರದ ಸ್ಥಾನಿಕ ನಿರ್ದೇಶಕ ಸಂಜಯಕುಮಾರ, ‘ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಪರಿಸರ ಆರೋಗ್ಯಕರವಾಗಿದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಕೈಗಾ ಅಣು ವಿದ್ಯುತ್ ಕೇಂದ್ರವು ಪರಿಸರ ಪೂರಕವಾಗಿದ್ದು, ಭಾರತದ ವಿದ್ಯುತ್‌ ಬೇಡಿಕೆಯನ್ನು ನೀಗಿಸುವತ್ತ ತನ್ನ ಅಮೂಲ್ಯ ಕೊಡುಗೆಯನ್ನು ನೀಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT