ಕೊಡಿಗೇನಹಳ್ಳಿ

ಸರ್ಕಾರಿ ಜಾಗದಲ್ಲಿ ರಾತ್ರೋ ರಾತ್ರಿ ಕಟ್ಟಡ: ಆಕ್ರೋಶ

ಸರ್ವೆ ನಡೆಸಿ ಬಾಂಡು ಕಲ್ಲು ಹಾಕುವವರಿಗೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ಅಧಿಕಾರಿಗಳು ಸೂಚಿಸಿದ್ದರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರಾತ್ರೋ ರಾತ್ರಿ ಕಮಲ್ ಪಾಷಾ ಎಂಬ ಉದ್ಯಮಿ ಕಟ್ಟಡ ನಿರ್ಮಿಸಲು ಪಿಲ್ಲರ್ ಎಬ್ಬಿಸಿರುವುದಕ್ಕೆ ಗ್ರಾಮಸ್ಥರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಿಗೇನಹಳ್ಳಿ: ಸರ್ವೆ ನಡೆಸಿ ಬಾಂಡು ಕಲ್ಲು ಹಾಕುವವರಿಗೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ಅಧಿಕಾರಿಗಳು ಸೂಚಿಸಿದ್ದರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರಾತ್ರೋ ರಾತ್ರಿ ಕಮಲ್ ಪಾಷಾ ಎಂಬ ಉದ್ಯಮಿ ಕಟ್ಟಡ ನಿರ್ಮಿಸಲು ಪಿಲ್ಲರ್ ಎಬ್ಬಿಸಿರುವುದಕ್ಕೆ ಗ್ರಾಮಸ್ಥರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಸರ್ವೆ ನಂ 32, 33, 34, 35 ಮತ್ತು 42ರಲ್ಲಿ ಸುಮಾರು 55 ಎಕೆರೆ ಸರ್ಕಾರಿ ಗೋಮಾಳವಿದ್ದು ಇದನ್ನು ಅದೇ ಗ್ರಾಮದ ದಲಿತರು ಸಾಗು ಮಾಡುತ್ತಿದ್ದಾರೆ. ಅದೇ ಜಾಗದಲ್ಲಿ ಕಮಲ್ ಪಾಷಾ ಎಂಬ ಉದ್ಯಮಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲು ಮುಂದಾದಾಗ ದಲಿತರಿಂದ ಭಾರಿ ಪ್ರತಿರೋಧವುಂಟಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಮಾಡಿಸಿ ಕಾಮಗಾರಿ ನಡೆಸದಂತೆ ಸೂಚಿಸಿದ್ದರು. ಆದರೂ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಪ್ರಸನ್ನಕುಮಾರ್, ಅಂಜಿನಪ್ಪ, ಗಂಗಾಧರಯ್ಯ, ನರಸಿಂಹಮೂರ್ತಿ, ಕ್ವಾಮಿಟಿ ಮೂರ್ತಿ, ದೇವರಾಜು, ಟಿ.ಜಿ. ನರಸಿಂಹಯ್ಯ ಆರೋಪಿಸಿದರು.

ಕಾಮಗಾರಿ ನಡೆಯದಂತೆ ವಿರೋಧ ವ್ಯಕ್ತಪಡಿಸಿ ಕಾವಲುಗಾರರು ಮತ್ತು ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮುಕಿ ನಡೆಯಿತು. ಆಗ ಇಲ್ಲಿಗೆ ಬಂದು ವಿರೋಧ ವ್ಯಕ್ತಪಡಿಸುವವರಿಗೆಲ್ಲ ಹಣ ನೀಡುತ್ತೇವೆ ಎಂದು ಅವರ ಸಿಬ್ಬಂದಿಯವರು ಆಮಿಷ ಒಡುತ್ತಿದ್ದಾರೆ ಎಂದು ಟಿ.ಜಿ.ಕಾಂತರಾಜು ದೂರಿದರು.

ಸರ್ಕಾರಿ ಜಮೀನನ್ನು ಕಬಳಿಸಲು ಮುಂದಾಗಿರುವದಲ್ಲದೆ ನಮ್ಮ ಬಗುರ್ ಹುಕುಂ ಸಾಗುವಳಿ ಜಮೀನು ಕೂಡ ಕಬಳಿಸಲು ಮುಂದಾಗಿದ್ದರು. ಸರ್ಕಾರಿ ಆಸ್ತಿ ರಕ್ಷಿಸಬೇಕಾದ ಅಧಿಕಾರಿಗಳು ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಟಿ.ಜಿ.ತಿಪ್ಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಸತ್ಯಕಂ ವೆಂಕಟೇಶ್ ಅವರು ಇದೇ ರೀತಿ ಸರ್ಕಾರಿ ಆಸ್ತಿ ಕಬಳಿಸಲು ಮುಂದಾದಾಗ ಸ್ಥಳೀಯರೆಲ್ಲ ಸೇರಿ ಶಾಸಕ ಕೆ.ಎನ್.ರಾಜಣ್ಣ ಅವರ ಗಮನಕ್ಕೆ ತಂದಾಗ ಅಧಿಕಾರಿಗಳಿಗೆ ಸೂಚಿಸಿ ಸರ್ಕಾರಿ ಜಮೀನು ಉಳಿಯುವಂತೆ ಮಾಡಿದ್ದಾರೆ ಎಂದು ತಿಂಗಳೂರು ಟಿ.ಎಸ್. ಮೂರ್ತಿ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ತುಮಕೂರು
ಕಲ್ಪತರು ನಾಡಿಗೆ ನಿರಾಸೆ ತಂದ ಬಜೆಟ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ ಜಿಲ್ಲೆಯ ಜನರಿಗೆ ಖುಷಿಗಿಂತ ನಿರಾಸೆ ತಂದಿದೆ.  ಹಲವಾರು ಯೋಜನೆಗಳನ್ನು ಪ್ರಕಟಿಸಬಹುದು, ವಿಶೇಷವಾಗಿ ತೆಂಗು ಬೆಳೆಗಾರರನ್ನು ಕೈ ಹಿಡಿಯಬಹುದು...

17 Feb, 2018

ತುರುವೇಕೆರೆ
ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್; ಪ್ರತಿಭಟನೆ

ಪಟ್ಟಣದ ಸಂತೆ ಮೈದಾನದಲ್ಲಿ ಪಟ್ಟಣ ಪಂಚಾಯಿತಿಯು ಇಂದಿರಾ ಕ್ಯಾಂಟೀನ್ ತೆರೆಯಲು ಮುಂದಾಗಿರುವ ಕ್ರಮ ಖಂಡಿಸಿ ನೂರಾರು ವ್ಯಾಪಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

17 Feb, 2018
ಕೊನೆಗೂ ಸಿಕ್ಕಿತು ಶಾಲೆಗೆ ಟುಡಾ ಜಾಗ

ತುಮಕೂರು
ಕೊನೆಗೂ ಸಿಕ್ಕಿತು ಶಾಲೆಗೆ ಟುಡಾ ಜಾಗ

17 Feb, 2018

ಚಿಕ್ಕನಾಯಕನಹಳ್ಳಿ
ಮುಂದಿನ ಬಜೆಟ್ ನಾನು ಮಂಡಿಸುವೆ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಕೊನೆಯ ಬಜೆಟ್. ನಾನು ಮುಂದಿನ ಬಜೆಟ್ ಮಂಡಿಸುವೆ. ಇದು ಅಹಂಕಾರದ ಮಾತಲ್ಲ, ಆತ್ಮವಿಶ್ವಾಸದ ನುಡಿ’ ಎಂದು ಜೆಡಿಎಸ್ ರಾಜ್ಯ...

17 Feb, 2018

ಕೊರಟಗೆರೆ
ನಾಳೆ ಯುವ ಚೈತನ್ಯ ಸಮಾವೇಶ

ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ಉದ್ದೇಶದಿಂದ ಫೆ.18 ರಂದು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವ ಚೈತನ್ಯ ಸಮಾವೇಶ ಆಯೋಜಿಸಲಾಗಿದೆ...

17 Feb, 2018