ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆ: ಗಮನಸೆಳೆದ ಕುದುರೆಗಳ ಕುಣಿತ

Last Updated 22 ಜನವರಿ 2018, 7:20 IST
ಅಕ್ಷರ ಗಾತ್ರ

ಕಕ್ಕೇರಾ: ಪಟ್ಟಣದ ನಡೆಯುತ್ತಿರುವ ಸೋಮನಾಥ ಜಾತ್ರೆಯಲ್ಲಿ ಕುದುರೆಗಳ ಕುಣಿತ ಭಕ್ತರ ಗಮನಸೆಳೆಯಿತು. ನಂದಣ್ಣಪ್ಪ ಪೂಜಾರಿ, ಕರಿಮಡ್ಡೆಪ್ಪ ತಾತಾ, ಬಬಲುಗೌಡ ಕೊಡೇಕಲ್, ಪರಮಣ್ಣ ಪೂಜಾರಿ ಹಿರೇಮನಿ, ಹುಣಸಗಿ ನಾಗಣ್ಣ ದಂಡಿನ್, ಯಲಗಟ್ಟಿ ಮಾಂತಯ್ಯಸ್ವಾಮಿ, ಹಾಗೂ ಕಾಮನಟಗಿ ಅಮರೇಶ ಸಾಹುಕಾರ ಅವರ ಏಳು ಕುದುರೆಗಳನ್ನು ಕುಣಿಸಲಾಯಿತು. ಚೌಕಾಕಾರದ ಒಂದು ಚಿಕ್ಕಕಲ್ಲಿನ ಮೇಲೆ ನಾಲ್ಕು ಕಾಲುಗಳಿಂದ ನಿಲ್ಲುವುದು, ಮುಂಗಾಲುಗಳಿಂದ ಕುಣಿತ, ಚಿಕ್ಕ ಟೇಬಲ್ ಮೇಲೆ ನಾಲ್ಕೂ ಕಾಲುಗಳಿಂದ ನಿಲ್ಲುವುದು, ಹೀಗೆ ನಾನಾ ಮಾದರಿಯಲ್ಲಿ ಕುಣಿದವು.

ದೇವಸ್ಥಾನ ಆವರಣ, ರಥದ ಮಾರ್ಗ, ಚೌಡಯ್ಯ ವೃತ್ತದ ಮೂಲಕ ದೇವಸ್ಥಾನ ತಲುಪಿದವು. ಚಿದಾನಂದ ನಡಗೇರಿ ಸಂಗಡಿಗರ ಹಲಗೆ ತಾಳಕ್ಕೆ ಕುದುರೆಗಳ ಕುಣಿತ ಗಂಟೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT