ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ನಿರ್ದೇಶಕ ಸರ್ಗೆಯ್‌ ಐಸೆನ್ ಸ್ಟೆಯ್ನ್‌ಗೆ ಗೂಗಲ್ ಗೌರವ

Last Updated 22 ಜನವರಿ 2018, 17:37 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾದ ಖ್ಯಾತ ನಟ ಮತ್ತು ಚಲನಚಿತ್ರ ನಿರ್ದೇಶಕ ಸರ್ಗೆಯ್‌ ಐಸೆನ್ ಸ್ಟೆಯ್ನ್ ಅವರ 120ನೇ ಜನ್ಮದಿನದ ಅಂಗವಾಗಿ ಗೂಗಲ್ ಸಂಸ್ಥೆ ಸೋಮವಾರ ವಿಶೇಷ ಡೂಡಲ್ ರಚಿಸಿ ವಿಶೇಷ ಗೌರವ ಸಲ್ಲಿಸಿದೆ. ‌

ಫಿಲ್ಮ್‌ ರೀಲ್‌ಗಳಲ್ಲೇ ‘Google' ಅಕ್ಷರಗಳನ್ನು ಬರೆದು, ಮಧ್ಯದಲ್ಲಿ ಸರ್ಗೆಯ್‌ ಅವರು ಒಂದು ಕೈಯಲ್ಲಿ ಕತ್ತರಿ ಹಿಡಿದುಕೊಂಡು ಫಿಲ್ಮ್‌ ರೀಲ್‌ಗಳನ್ನು ಪರೀಕ್ಷಿಸುತ್ತಿರುವಂತೆ ಕಪ್ಪು–ಬಿಳುಪು ಬಣ್ಣದಲ್ಲಿ ವಿಶೇಷವಾಗಿ ಡೂಡಲ್‌ ರಚಿಸಿದೆ.

ಸರ್ಗೆಯ್‌ ಐಸೆನ್ ಸ್ಟೆಯ್ನ್ ಜೀವನ

22 ಜನವರಿ 1898ರಂದು ಲಿವೊನಿಯಾದ ರಿಗಾದಲ್ಲಿ ಜನಿಸಿದರು. ಪದವಿಯಲ್ಲಿ ಆರ್ಕಿಟೆಕ್ಚರ್ ಮತ್ತು  ಸಿವಿಲ್‌ ಎಂಜಿನಿಯರಿಂಗ್ ವಿಷಯಗಳನ್ನು ಓದಿದರು. 1918ರಲ್ಲಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಕೆಂಪು ಸೇನೆಯನ್ನು ಸೇರಿ ಬೊಲ್ಷೆವಿಕ್‌ ಕ್ರಾಂತಿಯಲ್ಲಿ ಭಾಗವಹಿಸಿದರು.

1923ರಲ್ಲಿ ‘ದಿ ಮಾಂಟೇಜ್ ಆಫ್ ಅಟ್ರ್ಯಾಕ್ಷನ್ಸ್ ಫಾರ್ ಲೈಫ್‌’ ಎಂಬ ಕೃತಿ ಬರೆದರು. ನಂತರ ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡರು.

’ಗುಲ್ಮೊವಸ್‌ ಡೈರಿ’ ಅವರ ಮೊದಲ ಚಿತ್ರ. 1925 ಸ್ಟ್ರೈಕ್‌ ಹೆಸರಿನ ಪೂರ್ಣ ಪ್ರಮಾಣದ ರೀಲ್‌ ಚಿತ್ರವನ್ನು ನಿರ್ಮಿಸಿದರು. ಅದೇ ವರ್ಷ ಬಿಡುಗಡೆಯಾದ ಬ್ಯಾಟಲ್‌ಷಿಪ್ ಪೊಟೆಮ್ಕಿನ್ ಚಿತ್ರ ವಿಶ್ವದಾದ್ಯಂತ ಚರ್ಚೆಯಾಯಿತು. ಇವರ ಅಕ್ಟೊಬರ್ ಎಂಬ ಚಿತ್ರವೂ ವಿಶ್ವದಾದ್ಯಂತ ಮನ್ನಣೆ ಗಳಿಸಿತು. 

ಸಮಾಜದ ದುಸ್ಥಿತಿ, ಸಾಮಾಜಿಕ ಸಮಸ್ಯೆಗಳೇ ಅವರ ಚಿತ್ರಗಳ ಕಥಾವಸ್ತುಗಳು. ಜನಪ್ರಿಯ ನಟರು ಅವರ ಚಿತ್ರದಲ್ಲಿ ಇರುತ್ತಿರಲಿಲ್ಲ. ಸಮಾಜದ ಕೆಳಸ್ತರದ ವ್ಯಕ್ತಿಗಳನ್ನೇ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದರು.

ಫೆಬ್ರುವರಿ 11, 1948ರಂದು 50ನೇ ವಯಸ್ಸಿನಲ್ಲಿ ಮಾಸ್ಕೊದಲ್ಲಿ ಅವರು ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT