ಕೊಕ್ಕರೆಬೆಳ್ಳೂರಿನಲ್ಲಿ ಮತ್ತೆ 2 ಕೊಕ್ಕರೆಗಳ ಸಾವು

ಸತ್ತಿರುವ ಕೊಕ್ಕರೆಗಳ ಕಳೇಬರವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು.

ಭಾರತೀನಗರ (ಮಂಡ್ಯ ಜಿಲ್ಲೆ): ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಕೊಕ್ಕರೆಗಳ ಸಾವಿನ ಸರಣಿ ಮುಂದುವರಿದಿದ್ದು, ಸೋಮವಾರ 2 ಕೊಕ್ಕರೆಗಳು ಸಾವನ್ನಪ್ಪಿವೆ.

ಇದುವರೆಗಿನ ಕೊಕ್ಕರೆಗಳ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈಚೆಗೆ ಸೂಳೆಕೆರೆ ಹಾಗೂ ಮಾದರಹಳ್ಳಿ ಕೆರೆಗಳಲ್ಲಿ ಕೊಕ್ಕರೆಗಳು ಸತ್ತಿರುವ ಘಟನೆಯಿಂದ ಜನರು ಭಯಭೀತರಾಗಿದ್ದಾರೆ. ವಿವಿಧೆಡೆ ಹಕ್ಕಿ ಜ್ವರ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊಕ್ಕರೆಗಳ ಸಾವು ಜನರಲ್ಲಿ ಆತಂಕ ಮೂಡಿಸಿದೆ.

ಈಗಾಗಲೇ ಸತ್ತಿರುವ ಕೊಕ್ಕರೆಗಳು ಹಕ್ಕಿಜ್ವರದಿಂದಲ್ಲ ಎಂದು ಪ್ರಯೋಗಾಲಯದ ವರದಿ ಆಧಾರದ ಮೇಲೆ ಅಧಿಕಾರಿಗಳು ಹೇಳುತ್ತಿದ್ದಾರೆ. ಪೆಲಿಕಾನ್‌ಗಳಲ್ಲದೇ ಪೇಂಟೆಡ್‌ ಸ್ಟಾರ್ಕ್‌ ಗಳು (ಬಣ್ಣದ ಕೊಕ್ಕರೆ) ಈಗಾಗಲೇ ಗ್ರಾಮಕ್ಕೆ ಬಂದಿವೆ. ಇವಕ್ಕೂ ಕೂಡ ತೊಂದರೆಯಾಗಬಹುದು ಎಂದು ಗ್ರಾಮದ ಯುವ ಮುಖಂಡ ಸ್ವಾಮಿ ಆತಂಕ ವ್ಯಕ್ತಪಡಿಸುತ್ತಾರೆ.

ಸತ್ತಿರುವ ಕೊಕ್ಕರೆಗಳ ಕಳೇಬರವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ಮತ್ತೊಮ್ಮೆ ಕೊಕ್ಕರೆಗಳ ವಾಸಸ್ಥಳಗಳಿಗೆ ಆ್ಯಂಟಿವೈರಲ್‌ ಔಷಧಿ ಸಿಂಪಡಿಸುವಂತೆ ಅರಣ್ಯ ಅಧಿಕಾರಿಗಳನ್ನು ಕೋರಲಾಗುವುದು ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಲ್.ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿಕಾರಿಗಳು ಸ್ಥಳದಲ್ಲಿ ವಾಸ್ತವ್ಯ ಮಾಡಿ, ಕೊಕ್ಕರೆಗಳ ಆರೋಗ್ಯ ಸ್ಥಿತಿಗತಿ ಗಮನಿಸಬೇಕು. ಗ್ರಾಮದ ಜನರ ಆತಂಕ ನಿವಾರಣೆ ಮಾಡಬೇಕು. ಕೊಕ್ಕರೆಗಳ ಸಾವು ತಡೆಗಟ್ಟಬೇಕು’ ಎಂದು ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಬಿ.ಲಿಂಗೇಗೌಡ ಆಗ್ರಹಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಸೋರುತಿಹುದು ಕಾಲೇಜು ಮಾಳಿಗೆ: ಭಯದಲ್ಲೇ ಪಾಠ

ಮಂಡ್ಯ
ಸೋರುತಿಹುದು ಕಾಲೇಜು ಮಾಳಿಗೆ: ಭಯದಲ್ಲೇ ಪಾಠ

27 May, 2018
ಮೇಲುಕೋಟೆ: ‘ನಮ್ಮ ಗಾಂಧಿ ಜಯಂತಿ’ ನಾಟಕ ಇಂದು

ಪಾಂಡವಪುರ/ಮೇಲುಕೋಟೆ
ಮೇಲುಕೋಟೆ: ‘ನಮ್ಮ ಗಾಂಧಿ ಜಯಂತಿ’ ನಾಟಕ ಇಂದು

27 May, 2018
ಒಳರಂಡಿ ಅವ್ಯವಸ್ಥೆ: ಆರೋಗ್ಯ ಪರಿವೀಕ್ಷಕನಿಗೆ ತರಾಟೆ

ನಾಗಮಂಗಲ
ಒಳರಂಡಿ ಅವ್ಯವಸ್ಥೆ: ಆರೋಗ್ಯ ಪರಿವೀಕ್ಷಕನಿಗೆ ತರಾಟೆ

27 May, 2018
27ರಂದು ‘ಜ್ಞಾನಾಮೃತ ಭವನ’ ಲೋಕಾರ್ಪಣೆ

ನಾಗಮಂಗಲ
27ರಂದು ‘ಜ್ಞಾನಾಮೃತ ಭವನ’ ಲೋಕಾರ್ಪಣೆ

26 May, 2018

ಪಾಂಡವಪುರ
ಡೇರಿ ಕಟ್ಟಡ ನಿರ್ಮಾಣಕ್ಕೆ ₹4 ಲಕ್ಷ ಚೆಕ್‌ ವಿತರಣೆ

ಪಟ್ಟಣದ ಮನ್‌ಮುಲ್‌ ಉಪ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಟ್ಟನಹಳ್ಳಿಯ ಡೇರಿ ಕಟ್ಟಡಕ್ಕೆ ₹3 ಲಕ್ಷ ಹಾಗೂ ಜಿ.ಸಿಂಗಾಪುರದ ಡೇರಿ ಕಟ್ಟಡಕ್ಕೆ ₹1 ಲಕ್ಷ ಅನುದಾನದ...

26 May, 2018