ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಟ್‌ಫಿಶ್‌ ಸಾಕಣೆ: ನಾಶಗೊಳಿಸಲು ಸೂಚನೆ

Last Updated 23 ಜನವರಿ 2018, 7:29 IST
ಅಕ್ಷರ ಗಾತ್ರ

ನಾಗಮಂಗಲ: ಜೀವಸಂಕುಲಕ್ಕೆ ಅಪಾಯಕಾರಿಯಾದ ಮತ್ತು ದೇಶದಲ್ಲಿ ನಿಷೇಧಿತವಾದ ಅಫ್ರಿಕನ್ ಕ್ಯಾಟ್ ಫಿಶ್‌ ಸಾಕಾಣಿಕೆ ಕೇಂದ್ರವೊಂದು ತಾಲ್ಲೂಕಿನ ಬೆಳ್ಳೂರು ಹೋಬಳಿ ತೊರೆಮಾವಿನಕೆರೆಯಲ್ಲಿ ಸೋಮವಾರ ಪತ್ತೆಯಾಗಿದೆ.

ಗ್ರಾಮದ ಕುಮಾರ್ ಅವರ ಮಗ ಪುನೀತ್ ಕ್ಯಾಟ್‌ಫಿಶ್‌ ಸಾಕುತ್ತಿದ್ದಾರೆ. 100X20 ಅಡಿ ಅಳತೆಯ ಹೊಂಡದಲ್ಲಿ 12 ಸಾವಿರ ಕ್ಯಾಟ್‌ಫಿಶ್‌ ಸಾಕುತ್ತಿರುವುದು ಪತ್ತೆಯಾಗಿದ್ದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಕೋಳಿ ಮಾಂಸದ ಅಂಗಡಿ ತ್ಯಾಜ್ಯವನ್ನು ಹೊಂಡದಲ್ಲಿ ಸುರಿಯುತ್ತಿರುವ ಕಾರಣ ಸುತ್ತಮುತ್ತಲಿನ ಪರಿಸರ ಗಬ್ಬೆದ್ದು ನಾರುತ್ತಿದೆ. ದುರ್ವಾಸನೆಯ ಕಾರಣದಿಂದ ಬೀದಿನಾಯಿಗಳು ತ್ಯಾಜ್ಯ ತಿನ್ನಲು ಸ್ಥಳಕ್ಕೆ ಬರುತ್ತಿವೆ. ಇದರಿಂದ ಸಾಕುಪ್ರಾಣಿಗಳಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದರು.

‘ಬೆಂಗಳೂರಿನಿಂದ ಪ್ರತಿ ಮೀನು ಮರಿಗೆ ₹ 5 ನೀಡಿ ತಂದಿದ್ದೇವೆ. ಬೆಳೆದ ಮೀನನ್ನು ಕೆ.ಜಿ.ಗೆ ₹ 40ರಂತೆ ಮಾರಾಟ ಮಾಡುತ್ತೇವೆ’ ಎಂದು ಪುನೀತ್‌ ಹೇಳಿದರು.

‘ಆಫ್ರಿಕನ್‌ ಕ್ಯಾಟ್‌ಫಿಶ್‌ ಸಾಕಾಣಿಕೆ ಮಾಡುವುದು ನಿಷಿದ್ಧ. ಕೂಡಲೇ ಮೀನು ಮರಿಗಳನ್ನು ನಾಶಪಡಿಸಬೇಕು. ಇಲ್ಲದಿದ್ದರೆ ಕ್ರಮ ಕೈಕೊಳ್ಳಲಾಗುವುದು. ಕ್ಯಾಟ್‌ಫಿಶ್‌ ಸಾಕುವವರಿಗೆ 6 ವರ್ಷ ಜೈಲು ಹಾಗೂ ದಂಡ ವಿಧಿಸಬಹುದು’ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಕೆ. ಲೋಕೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT