ಬಬ್ಲಿ ಚಟರ್ಜಿ ಅವರು ಶ್ವಾನ ಪ್ರಿಯರು. ಶ್ವಾನಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಮನೆಯಲ್ಲಿ ಆರು ಶ್ವಾನಗಳಿದ್ದು, ಇವುಗಳ ಜತೆಗೆ ಇನ್ನೂ ಎರಡು ಶ್ವಾನಗಳನ್ನು ಸಾಕಲಾಗುತ್ತಿದೆ. ಅವರು ಶ್ವಾನಗಳನ್ನು ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಮನೆಮಕ್ಕಳಂತೆ ಆರೈಕೆ ಮಾಡುತ್ತಿದ್ದರು. ಹಾಗಾಗಿ ಅವರ ನೆನಪು ಜೀವಂತವಾಗಿ ಉಳಿಯಲು ಶ್ವಾನ ಆಸ್ಪತ್ರೆಯನ್ನು ತೆಗೆಯುವ ಮನಸ್ಸಾಗಿದೆ ಎಂದು ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.