ಮಹಾರಾಷ್ಟ್ರದ ಗೌರಿ ಮೊದಲ ಒಂಬತ್ತು ಸುತ್ತುಗಳ ಅಂತ್ಯಕ್ಕೆ 289 ಪಾಯಿಂಟ್ಸ್ ಕಲೆ ಹಾಕಿದರು. ಇನ್ನು ಆರು ಸುತ್ತುಗಳು ಬಾಕಿಯಿದ್ದು, ಓಪನ್ ಸೈಟ್ ವಿಭಾಗದ ಪ್ರಶಸ್ತಿ ಯಾರಿಗೆ ಎಂಬುದು ಬುಧವಾರ ನಿರ್ಧಾರವಾಗಲಿದೆ. ಮಹಾರಾಷ್ಟ್ರದ ಅಶ್ವಿನಿ ಚಂದ್ರಕಾಂತ ಧವಳೆ 286 ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೈಸೂರಿನ ಎಚ್.ಎಸ್. ವಿವೇಕ 284 ಪಾಯಿಂಟ್ಸ್‌ನಿಂದ ಮೂರನೇ ಸ್ಥಾನದಲ್ಲಿದ್ದಾರೆ.