ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಯೂರು ಜಾತ್ರೆಗೆ ಹಸಿರುವಾಣಿ ಮೆರವಣಿಗೆ

Last Updated 24 ಜನವರಿ 2018, 6:55 IST
ಅಕ್ಷರ ಗಾತ್ರ

ವಿಟ್ಲ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಇದೇ 26 ಮತ್ತು 27 ರಂದು ನಡೆಯುವ ಶ್ರೀ ಒಡಿ ಯೂರು ರಥೋತ್ಸವ-ತುಳುನಾಡ್ದ ಜಾತ್ರೆ ಅಂಗವಾಗಿ ಮಂಗಳವಾರ ಮಂಗಳೂರಿನ ಶ್ರೀಮಂಗಳಾದೇವಿ ದೇವಸ್ಥಾನದಿಂದ ಶ್ರೀ ಕ್ಷೇತ್ರದ ತನಕ ಹಸಿರುವಾಣಿ ವಾಹನ ಮೆರವಣಿಗೆ ನಡೆಯಿತು.

ಉಡುಪಿ, ಮಣಿಪಾಲ, ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ವ್ಯಾಪ್ತಿಯ ಶ್ರೀಗುರುದೇವ ಬಂಧುಗಳು ಈ ವಾಹನ ಜಾಥಾದಲ್ಲಿ ಪಾಲ್ಗೊಂಡರು.

ಮಂಗಳಾದೇವಿಯಿಂದ 10 ಗಂಟೆಗೆ ಹೊರಟ ಹಸಿರುವಾಣಿ ಮೆರವಣಿಗೆ, ಫರಂಗಿಪೇಟೆ ಬಿ.ಸಿ.ರೋಡ್‌, ಕಲ್ಲಡ್ಕ ಮೂಲಕ ಮಧ್ಯಾಹ್ನ 12.30 ಕ್ಕೆ ವಿಟ್ಲ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಒಟ್ಟು ಸೇರಿತು. ದೇಗು ಲದಲ್ಲಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ವಿಟ್ಲದಿಂದ ಶ್ರೀ ಕ್ಷೇತ್ರ ಒಡಿಯೂರಿಗೆ ಸಾಗಿದ ಮೆರವಣಿಗೆ, ಸಂಜೆ ವೇಳೆ ನೂರಾರು ಭಕ್ತರ ಸಮ್ಮುಖ ಸಮರ್ಪಣಾ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು, ದೇವಾಡಿಗ, ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಉಡುಪಿ ವಲಯಾಧ್ಯಕ್ಷ ಪ್ರಭಾಕರ ಶೆಟ್ಟಿ ಮಣಿಪಾಲ, ಒಡಿಯೂರು ತುಳು ಕೂಟದ ಅಧ್ಯಕ್ಷ ಹೆಚ್.ಕೆ.ಪುರುಷೋತ್ತಮ, ಮಂಗಳೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್, ಪುತ್ತೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಮೋನಪ್ಪ ಪೂಜಾರಿ, ಸುಳ್ಯ ಗುರುದೇವ ಸೇವಾ ಬಳಗದ ಅಧ್ಯಕ್ಷ ರಾಧಾಕೃಷ್ಣ ಪಕ್ಕಳ, ವಿಟ್ಲ ಮಂಡಲ ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಸದಾಶಿವ ಶೆಟ್ಟಿ ಅಳಿಕೆ, ಕಾರ್ಯದರ್ಶಿ ಸುನಿಲ್ ವಿಟ್ಲ, ಪುತ್ತೂರು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ, ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಹಸಿರುವಾಣಿ ಸಮಿತಿಯ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಅಜಿತ್‍ನಾಥ್ ಶೆಟ್ಟಿ, ಒಡಿಯೂರು ರಥಯಾತ್ರೆ ಸಮಿತಿಯ ಸಂಚಾಲಕ ಸುದರ್ಶನ ಆಳ್ವಾ ಅನೆಯಾಲಗುತ್ತು, ಪ್ರಭಾಕರ ಶೆಟ್ಟಿ ಪೆರುವಾಯಿ, ರಾಜೇಂದ್ರನಾಥ ರೈ ಪೆರುವಾಯಿ, ಗೀತಾನಂದ ಶೆಟ್ಟಿ ಮಾನಿಲ, ಅಶೋಕ್ ಶೆಟ್ಟಿ ಮಾಣಿಲ ಬಿರ್ಕಾಪು, ಸನತ್ ಶೆಟ್ಟಿ ಅನಂತಾಡಿ, ವೆಂಕಪ್ಪ ರೈ ಕುರ್ಲೆತ್ತಿಮಾರ್, ರಾಜೇಂದ್ರ ರೈ ಬೈಲುಗುತ್ತು ಪುಣಚ, ಶೇಖರ್ ಮಲಾರು, ಕರಿಯ ಗಾಣಂತಿ ರಾಮಕುಂಜ, ನಿತ್ಯಾನಂದ ಶೆಟ್ಟಿ ಪುತ್ತೂರು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ವಿಟ್ಲ ಶಾಖೆ ಮ್ಯಾನೇಜರ್ ಸದಾಶಿವ ಶೆಟ್ಟಿ, ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT