ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್ ಅಗರವಾಲ್‌ ಶತಕ; ಭಾರತ ‘ಎ’ಗೆ ಜಯ

Last Updated 19 ಜೂನ್ 2018, 19:11 IST
ಅಕ್ಷರ ಗಾತ್ರ

ಲೀಸ್ಟರ್‌: ಕನ್ನಡಿಗ ಮಯಂಕ್‌ ಅಗರವಾಲ್‌ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರ ಶತಕಗಳ ನೆರವಿನಿಂದ ಭಾರತ ‘ಎ’ ತಂಡ ಎರಡನೇ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಲೀಸ್ಟರ್ಎದುರಿನ ಪಂದ್ಯದಲ್ಲಿ ಭಾರತ ‘ಎ’ ತಂಡ 281 ರನ್‌ಗಳಿಂದಗೆದ್ದಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಲ್ಕು ವಿಕೆಟ್ ಕಳೆದುಕೊಂಡು 458 ರನ್‌ ಗಳಿಸಿತು. ನಂತರಎದುರಾಳಿಗಳನ್ನು 177 ರನ್‌ಗಳಿಗೆ ಕೆಡವಿತು. ದೀಪಕ್‌ ಚಾಹರ್‌ ಮೂರು ವಿಕೆಟ್ ಕಬಳಿಸಿದರೆ ಪ್ರಸಿದ್ಧ ಕೃಷ್ಣ, ದೀಪಕ್ ಹೂಡ ಮತ್ತು ಅಕ್ಷರ್ಪಟೇಲ್‌ ತಲಾ ಎರಡು ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ ‘ಎ‘: 50 ಓವರ್‌ಗಳಲ್ಲಿ 4ಕ್ಕೆ 458 (ಮಯಂಕ್‌ ಅಗರವಾಲ್‌ 151, ಪೃಥ್ವಿ ಶಾ 120, ಶುಭಮನ್ ಗಿಲ್‌ 86; ಅತೀಕ್‌ ಜಾವೇದ್‌ 91ಕ್ಕೆ2); ಲೀಸ್ಟರ್‌: 40.4 ಓವರ್‌ಗಳಲ್ಲಿ 177ಕ್ಕೆ ಆಲೌಟ್‌: (ಟಾಮ್ ವೆಲ್ಸ್‌ 62, ದೀಪಕ್ ಚಾಹರ್‌ 24ಕ್ಕೆ3, ದೀಪಕ್ ಹೂಡ 9ಕ್ಕೆ2, ಅಕ್ಷರ್‌ ಪಟೇಲ್‌ 17ಕ್ಕೆ2, ಪ್ರಸಿದ್ಧ ಕೃಷ್ಣ 48ಕ್ಕೆ2). ಫಲಿತಾಂಶ: ಭಾರತ ‘ಎ’ ತಂಡಕ್ಕೆ 281 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT