ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಥಣಿ ಜಾತ್ರೆ: 400 ವಟುಗಳಿ ಉಪನಯನ

Last Updated 1 ಫೆಬ್ರುವರಿ 2018, 7:40 IST
ಅಕ್ಷರ ಗಾತ್ರ

ಕಕ್ಕೇರಾ: ತಿಂಥಣಿ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಮಂಗಳವಾರ ವಿವಿಧ ಕ್ಷೇತ್ರಗಳ ಶ್ರೀಗಳ ಸಮ್ಮುಖದಲ್ಲಿ ವಿಶ್ವಕರ್ಮ ವಿಕಾಸ ಸಂಸ್ಥೆ ವತಿಯಿಂದ 400ಕ್ಕೂ ಹೆಚ್ಚು ವಟುಗಳ ಉಪನಯನ ಜರುಗಿತು.

ಯಾದಗಿರಿ ಏಕದಂಡಿಗಿ ಮಠದ ಕುಮಾರ ಸ್ವಾಮೀಜಿ  ಮಾತನಾಡಿ, ಹಿಂದೂ, ಮುಸ್ಲಿಂ, ವಿಶ್ವಕರ್ಮ ಎನ್ನದೇ ಸರ್ವ ಧರ್ಮಗಳ ಬೃಹತ್‌ ಸಂಗಮದ ಸಂಕೇತವಾಗಿರುವ ತಿಂಥಣಿಯ ಮೌನೇಶ್ವರರು ಕೊಡುಗೆ ನೀಡಿ ಜಗತ್ತಿಗೇ ಗುರುವಾಗಿದ್ದಾರೆ. ಅನೇಕ ಪವಾಡಗಳನ್ನು ಮಾಡಿದ ಮಹಾಮಹಿಮನ ಪುಣ್ಯಕ್ಷೇತ್ರ ಇದಾಗಿದೆ ಎಂದರು.

ದೊಡ್ಡೇಂದ್ರ ಸ್ವಾಮೀಜಿ ಸುಲೇಪೇಟ, ಅಫಜಲಪುರದ ಮೌನೇಶ್ವರ ಸ್ವಾಮೀಜಿ, ಚಿಕ್ಕೆಂದ್ರ ಸ್ವಾಮೀಜಿ, ಮಹೇಂದ್ರ ಸ್ವಾಮೀಜಿ, ಬ್ರಹ್ಮಾನಂದ ಸ್ವಾಮೀಜಿ, ದೇವದರ್ಗುದ ಮೌನೇಶ್ವರ ಸ್ವಾಮೀಜಿ, ಅಜೇಂದ್ರ ಸ್ವಾಮೀಜಿ, ನಿರಂಜನ ಸ್ವಾಮೀಜಿ, ಕಾಳಿಕಾದೇವಿ ಅರ್ಚಕ ವಿಶ್ವನಾಥ,  ಪ್ರವೀಣಕುಮಾರ, ದೇವಸ್ಥಾನ ಸಮಿತಿ ಸದಸ್ಯರಾದ ಗಂಗಾಧರ ಸ್ವಾಮೀಜಿ, ಉಪತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ, ದೇವಸ್ಥಾನ ಮೇಲ್ವಿಚಾರಕ ಶಿವಾನಂದಸ್ವಾಮಿ, ಗ್ರಾಪಂ  ಅಧ್ಯಕ್ಷ ಸಂಜೀವಪ್ಪ ಕವಾಲ್ದಾರ, ಈರಣ್ಣ ಹಳಿಸಗರ, ಹಣಮಂತ್ರಾಯ ಹೊಸಪೇಟ, ಸಣ್ಣಮಾನಯ್ಯ ಸಾಹು ಬಂಡೊಳ್ಳಿ, ಚಿನ್ನಪ್ಪ ಗುಡಗುಂಟಿ, ನಿಂಗಣ್ಣ ಜೋಶಿ, ವಿಶ್ವಮರ್ಕ ಮಹಾಸಭಾದ ಮೌನೇಶ.ಡಿ.ಪತ್ತಾರ್ ಕೆಂಭಾವಿ, ವಿಶ್ವಕರ್ಮ ವಿಕಾಸ ಸಂಸ್ಥೆ ಅಧ್ಯಕ್ಷ ಮನೋಹರ ಕೆಂಭಾವಿ, ನರಸಿಂಗರಾವ್ ಯಮನೂರ, ನಾಗಪ್ಪ ಶಹಾಪುರಕರ್, ಮಹೇಶ ಶಾರದಳ್ಳಿ, ದೇವಿಂದ್ರಪ್ಪ ಕೆಂಭಾವಿ, ವಾಲ್ಮೀಕಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಗಂಗಾಧರನಾಯಕ್, ಮೌನೇಶ, ಸಿಪಿಐ ಟಿ.ಆರ್.ರಾಘವೇಂದ್ರರಾವ್, ಜೆಸ್ಕಾಂ ಅಧಿಕಾರಿ ಈರಣ್ಣ ಹಳ್ಳಿಚಂಡಿ, ಇಸ್ಮಾಯಿಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT