ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಶಂಕರಿದೇವಿ ಅದ್ಧೂರಿ ರಥೋತ್ಸವ

Last Updated 1 ಫೆಬ್ರುವರಿ 2018, 9:53 IST
ಅಕ್ಷರ ಗಾತ್ರ

ಅಮೀನಗಡ: ಸಮೀಪದ ಸೂಳೇಬಾವಿಯ ಬನಶಂಕರಿದೇವಿ ಜಾತ್ರೆ ಪ್ರತಿ ವರ್ಷ ಮಾಘ ಶುದ್ಧ ಪೌರ್ಣಿಮೆ ಭಾರತ ಹುಣ್ಣಿಮೆ ದಿನ ನಡೆಯುವಂತೆ ರಥೋತ್ಸವ ಗ್ರಾಮ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ಮಂಗಳವಾರ ಪೂರ್ಣಚಂದ್ರಗ್ರಹಣ ಇದ್ದಿದ್ದರಿಂದ ಸಂಜೆ 4 ಗಂಟೆಗೇ ರಥೋತ್ಸವ ನೆರವೇರಿತು.

 ಹಡಪದ ಸಮಾಜದವರಿಂದ ತೇರಿನ ಉತ್ಸವಮೂರ್ತಿ ತರಲಾಯಿತು. ವಿಜಯಮಹಾಂತ ಮಠದಿಂದ ನಂದಿಕೋಲು, ಹಾಲುಮತ ಸಮಾಜದಿಂದ ಛತ್ರಿ ಚಾಮರ, ಅಂಬಿಗೇರ ಸಮಾಜದಿಂದ ಕಳಸದ ಮೇಲಿನ ಬೆಳ್ಳಿ ಛತ್ರಿ ತರಲಾಯಿತು.

ಮಾಜಿ ಶಾಸಕ ಎಸ್.ಜಿ.ನಂಜಯ್ಯನ ಮಠ, ಸಹಕಾರಿ ಧುರೀಣ ರವೀಂದ್ರ ಕಲಬುರ್ಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಕಿಡಕಿಮನಿ ಪಾಲ್ಗೊಂಡಿದ್ದರು. ಅಮೀನಗಡದಲ್ಲಿ ರಥೋತ್ಸವ: ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ನಡೆಯುವ ಪಟ್ಟಣದ ಬನಶಂಕರಿ ದೇವತೆ ರಥೋತ್ಸವ ಸಂಭಮದಿಂದ ಜರುಗಿತು. ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮುಖಂಡರಾದ ಗುರುನಾಥ ಚಳ್ಳಮರದ, ಪತ್ರಕರ್ತ ರಾ.ನರಸಿಂಹ ಮೂರ್ತಿ, ಪ್ರಮೋದ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT