ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನಗಳಿಂದ ಅನಿಷ್ಟ ಪದ್ಧತಿ ನಿರ್ಮೂಲನೆ’

Last Updated 3 ಫೆಬ್ರುವರಿ 2018, 5:22 IST
ಅಕ್ಷರ ಗಾತ್ರ

ಹುಣಸಗಿ: ‘ಮೂಢನಂಬಿಕೆ, ಕಂದಾಚಾರದಂತಹ ಅನಿಷ್ಟ ಪದ್ಧತಿ ಹೋಗಲಾಡಿಸಲು ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ದಾರಿದೀಪವಾಗಿವೆ’ ಎಂದು ಟೋಕರಿ ಕೋಲಿ ಕಬ್ಬಲಿಗ ಹಾಗೂ ಗಂಗಾಮತ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷ ಉಮೇಶ.ಕೆ. ಮುದ್ನಾಳ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಸಮಾಜದ ಜನರು ಶಿಕ್ಷಣಕ್ಕೆ ಒತ್ತು ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು’ ಎಂದು ಸಲಹೆ ನೀಡಿದರು.

ಕರವೇ ಕಲಬುರ್ಗಿ ಘಟಕದ ಅಧ್ಯಕ್ಷ ಶಿವಕುಮಾರ ನಾಟಿಕಾರ ಮಾತನಾಡಿ,‘ ಕೋಲಿ ಕಬ್ಬಲಿಗ ಸಮಾಜದ ಜನರು ಮೊದಲು ದುಶ್ಚಟದಿಂದ ದೂರವಿರಬೇಕು. ಸಮಾಜದ ಒಳಿತಿಗಾಗಿ ಸಂಘಟಿತರಾಗುವ ಮೂಲಕ ಸಮಾಜದ ಹಿರಿಯ ಮುಖಂಡ ದಿವಂಗತ ವಿಠ್ಠಲ್ ಹೇರೂರ ಅವರ ಕನಸು ನನಸು ಮಾಡಬೇಕು. ಹೇರೂರ ಅವರ ಪರಿಶ್ರಮದಿಂದ ರಾಜ್ಯದಲ್ಲಿ ಕೋಲಿ ಸಮಾಜದ ಮಠ ಗುರುತಿಸುವಂತಾಗಿದೆ’ ಎಂದು ಹೇಳಿದರು.

ಗಂಗಾಮತ ಸಮಾಜದ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಮಾತನಾಡಿದರು. ಹಾವೇರಿಯ ನಿಜಶರಣ ಅಂಬಿಗರ ಚೌಡಯ್ಯ ಗುರು ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿದ್ಯ ವಹಿಸಿ ಆಶಿರ್ವಚನ ನೀಡಿದರು.

ಮುಖಂಡ ನಿಂಗಣ್ಣ ಡಂಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಗ್ರಾಮದೇವತೆ ಕಟ್ಟೆ ಒಳ ಅಗಸಿವರೆಗೆ ಅಂಬಿಗರ ಚೌಡಯ್ಯ ಅವರ ಭಾವಚಿತ್ರ ಹಾಗೂ ಮಾತೆಯರಿಂದ ಪೂರ್ಣ ಕುಂಭ ಕಳಸ ಮೆರವಣಿಗೆ ನಡೆಯಿತು. ಈಶ್ವರ ಬಡಿಗೇರ್ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ನೂತನ ಅಂಬಿಗ ಸುದ್ದಿ ವಾಹಿನಿಯ ಲೋಗೋ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುದನೂರಿನ ಕಂಠಿ ಮಠದ ಮಲ್ಲಿಕಾರ್ಜುನ ದೇವರು, ಮುಖಂಡರಾದ ನಾಗಣ್ಣ ದಂಡಿನ್, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಶಾಂತಪ್ಪ ಬಾಕಲಿ, ಶ್ರೀಕಾಂತ ನಾಗರಾಳ, ಬಸವರಾಜ ಹಂಚಲಿ, ಡಾ.ಸಂಗಣ್ಣ ಕಾಮನಟಗಿ, ಬಸವರಾಜ ಬಾಕಲಿ, ಬಸವರಾಜ ಮೇಸ್ತಕ, ಸಿದ್ದನಗೌಡ ಪಾಟೀಲ, ಸಂತೋಷ ಢಂಗಿ, ಮಂಜು ತಾಳಿಕೋಟಿ, ಬಸ್ಸು ತಾಳಿಕೋಟಿ, ಮಡಿವಾಳಪ್ಪ ಢಂಗಿ ಇದ್ದರು. ಕನಕಪ್ಪ ವಗಣಗೇರಿ ನಿರೂಪಿಸಿದರು. ಮಲ್ಲಣ್ಣ ಡಂಗಿ ಸ್ವಾಗತಿಸಿದರು. ಅಂಬರೀಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT