ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರ್ಜಾ ಶೀಲ್ಡ್‌ ಕ್ರಿಕೆಟ್‌: ಶರತ್‌ ಶ್ರೀನಿವಾಸ್ ಅಮೋಘ ಶತಕ

Last Updated 26 ಜೂನ್ 2018, 17:50 IST
ಅಕ್ಷರ ಗಾತ್ರ

ಬೆಂಗಳೂರು: ಶರತ್‌ ಶ್ರೀನಿವಾಸ್‌ ಅವರು ಗಳಿಸಿದ ಅಪೂರ್ವ ಶತಕದ ನೆರವಿನಿಂದ ಮಿರ್ಜಾ ಇಸ್ಮಾಯಿಲ್‌ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಆಶ್ರಯದ ಗುಂಪು–1, ಡಿವಿಷನ್‌ ಒಂದರ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ (1) ತಂಡವು ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ ತಂಡದ (1) ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌: ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1): ಮೊದಲ ಇನಿಂಗ್ಸ್: 77 ಓವರ್‌ಗಳಲ್ಲಿ 372 (ಬಿ. ಯು. ಶಿವಕುಮಾರ್‌ 31, ಎನ್‌. ವಿನಯ್‌ ಸಾಗರ್‌ 168, ಜಿ. ಎಸ್‌. ಚಿರಂಜೀವಿ ಔಟಾಗದೆ 84, ಶುಭಂ ಸಿಂಗ್‌ ಗೌರ್‌ 28ಕ್ಕೆ 3, ಡೇಸ್ಮಂಡ್‌ ಆ್ಯಂಟನಿ 34ಕ್ಕೆ 2, ಪೃಥ್ವಿ ವರದರಾಜನ್‌ 59ಕ್ಕೆ 2).

ಬೆಂಗಳೂರು ಯುನೈಟೆಡ್ ಕ್ರಿಕೆಟ್‌ ಕ್ಲಬ್‌ (1): ಮೊದಲ ಇನಿಂಗ್ಸ್‌: 92 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 376 (ಶಿವಂ ಮಿಶ್ರಾ 65, ಲಿಯಾನ್‌ ಖಾನ್‌ 71, ಶರತ್‌ ಶ್ರೀನಿವಾಸ್‌ ಔಟಾಗದೆ 121, ಧೀರಜ್‌ ಶಶಿಧರ್‌ 50). ಫಲಿತಾಂಶ: ಪಂದ್ಯ ಡ್ರಾ.

ಹೆರಾನ್ಸ್‌ ಕ್ರಿಕೆಟ್‌ ಕ್ಲಬ್‌: ಮೊದಲ ಇನಿಂಗ್ಸ್‌: 78.2 ಓವರ್‌ಗಳಲ್ಲಿ 237 (ಎ. ಅರ್ಜುನ್‌ ಹೊಯ್ಸಳ 41, ಮಿಲಿಂದ್‌ ರಮೇಶ್‌ 46, ಪ್ರದೀಪ್‌ ಗಂಗಾಧರ್‌ ಔಟಾಗದೆ 52, ರಜತ್‌ ಹೆಗಡೆ 66, ಪೃಥ್ವಿರಾಜ್‌ 88ಕ್ಕೆ 5, ಸ್ಟಾಲಿನ್‌ ಹೂವರ್‌ 49ಕ್ಕೆ2, ದಿಕ್ಷಾಂಶು ನೇಗಿ 48ಕ್ಕೆ 3). ಎರಡನೇ ಇನಿಂಗ್ಸ್‌: 18 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 86 (ಎ. ಅರ್ಜುನ್‌ ಹೊಯ್ಸಳ ಔಟಾಗದೆ 31, ಮಿರ್‌ ಕೌನೇನ್ ಅಬ್ಬಾಸ್‌ ಔಟಾಗದೆ 29).

ಸೋಷಿಯಲ್‌ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌: 55.3 ಓವರ್‌ಗಳಲ್ಲಿ 184 (ಮೊಹಮ್ಮದ್ ತಹಾ 37, ಸ್ಟಾಲಿನ್‌ ಹೂವರ್‌ 64, ದಿಕ್ಷಾಂಶು 35, ಎಚ್. ಎಸ್‌. ಶರತ್‌ 44ಕ್ಕೆ 3, ಎಂ. ಭರತ್‌ ಕೊಂಡಜ್ಜಿ 43ಕ್ಕೆ 4, ರಜತ್‌ ಹೆಗಡೆ 37ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ.

ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2): ಮೊದಲ ಇನಿಂಗ್ಸ್‌: 98.3 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 337 ಡಿಕ್ಲೇರ್ಡ್‌ (ಅಂಕಿತ್‌ ಉಡುಪ 123, ಅಮಿತ್‌ ವರ್ಮಾ 159, ಎಂ. ಕ್ರಾಂತಿಕುಮಾರ್‌ 39ಕ್ಕೆ 4, ಸೂರಜ್‌ ಕಾಮತ್‌ 45ಕ್ಕೆ 2).

ಸರ್‌ ಸೈಯದ್‌ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌: 78 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 254 (ಅಮನ್‌ ರಾಜ್‌ 21, ಲವನೀತ್‌ ಸಿಸೋಡಿಯಾ 95, ವಿನಿತ್‌ ಯಾದವ್‌ ಔಟಾಗದೆ 85, ಮಿತ್ರಕಾಂತ್‌ ಸಿಂಗ್‌ 67ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ.

ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1): ಮೊದಲ ಇನಿಂಗ್ಸ್‌: 99 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 378 ಡಿಕ್ಲೇರ್ಡ್‌ (ಆರ್‌. ಸಮರ್ಥ್‌ 55, ಅಭಿಷೇಕ್‌ ರೆಡ್ಡಿ 107, ಶ್ರೇಯಸ್‌ ಗೋಪಾಲ್‌ 45, ಆರ್‌. ಜೋನಾಥನ್‌ ಔಟಾಗದೆ 100, ಕೆ. ಎಸ್‌. ದೇವಯ್ಯ 69ಕ್ಕೆ 2, ವಿದ್ವತ್‌ 94ಕ್ಕೆ 2).

ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ (1): 80.3 ಓವರ್‌ಗಳಲ್ಲಿ 272 (ಶಿಶಿರ್‌ ಭವಾನೆ 100, ಕೆ. ಸಿ. ಅವಿನಾಶ್‌ 60, ರಾಹುಲ್‌ ಎಚ್‌. ಪಿ. 51, ಟಿ. ಪ್ರದೀಪ್‌ 20ಕ್ಕೆ 3, ಕಾಜಿ ಅಬ್ರಾರ್‌ 69ಕ್ಕೆ 5). ಫಲಿತಾಂಶ: ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT