ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ಹಂಚಿಕೆಯ ಬಿಐಯು ಆ್ಯಪ್‌

Last Updated 6 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸುದ್ದಿ ಹಂಚಿಕೆಯ ಬಿಐಯು ಆ್ಯಪ್‌
ದೇಶದಲ್ಲಿ ಹಿಂದಿ, ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳಗಳಲ್ಲಿ ನೂರಾರು ಪತ್ರಿಕೆಗಳು ಸಕ್ರಿಯವಾಗಿವೆ. ಈ ಸುದ್ದಿ ಪತ್ರಿಕೆಗಳಲ್ಲಿ ಮುದ್ರಿತವಾಗುವ ಸುದ್ದಿ ಹಾಗೂ ವಿಶ್ಲೇಷಣೆಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲು ಬಿಐಯು ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಮುದ್ರಣ ಮಾದ್ಯಮಕ್ಕೆ ಮಾತ್ರ ಸಂಬಂಧಿಸಿದೆ. ಸುದ್ದಿಗಳನ್ನು ಸ್ಕ್ಯಾನ್ ಮಾಡಿ ಸ್ನೇಹಿತರು ಮತ್ತು ಗ್ರಾಹಕರಿಗೆ ಶೇರ್ ಮಾಡಬಹುದಾದ ಆ್ಯಪ್ ಇದಾಗಿದೆ. ಕೇವಲ ಸುದ್ದಿಗಳನ್ನು ಶೇರ್ ಮಾಡಿಕೊಳ್ಳುವ ಸೌಲಭ್ಯ ಮಾತ್ರವಲ್ಲದೆ ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಗೂ ಈ ಆ್ಯಪ್ ಸಹಕಾರಿಯಾಗಿದೆ. ಇದರ ಮೂಲಕ  ಪತ್ರಿಕಾ ಪ್ರಕಟಣೆಗಳನ್ನೂ ಹಂಚಿಕೊಳ್ಳಬಹುದು. ದೇಶದಲ್ಲಿ ಮುಂಚೂಣಿಯಲ್ಲಿರುವ 1100 ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳಿಗೆ ಡೇಟಾ ಸೇವೆ ಮತ್ತು ಆರ್ಕೈವ್ ಸ್ಥಳವನ್ನು ಈ ಆ್ಯಪ್ ನೀಡಲಿದೆ.
ಗೂಗಲ್ ಪ್ಲೇಸ್ಟೋರ್: biu media tracking app

ಬಿ ಥಿಯೇಟರ್‌ ಆ್ಯಪ್‌
ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ವಿಕ್ರಂ ಭಟ್ ಅವರು ನೂತನ ವಿಬಿ ಥಿಯೇಟರ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರ ವೆಬ್ ಸರಣಿಯ ವಿಡಿಯೊಗಳನ್ನು ವೀಕ್ಷಣೆ ಮಾಡಬಹುದು. ವಿಕ್ರಂ ಭಟ್ ಅವರ ವಿಡಿಯೊ ಸರಣಿಗಳನ್ನು ಈ ಹಿಂದೆ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಉಚಿತವಾಗಿ ನೋಡಬಹುದಿತ್ತು. ಇದೀಗ ವಿಬಿ ಆ್ಯಪ್ ಮೂಲಕ ವಿಡಿಯೊಗಳನ್ನು ನೋಡುವ ಸೌಲಭ್ಯ ಕಲ್ಪಿಸಿದ್ದಾರೆ. ಆದರೆ ಇದು ಸ್ವಲ್ಪ ದುಬಾರಿಯಾಗಿದೆ. ಯಾಕೆಂದರೆ ಇಲ್ಲಿ ಇಂದು ವೆಬ್ ಸರಣಿಯನ್ನು ವೀಕ್ಷಣೆ ಮಾಡಲು ₹ 18   ಪಾವತಿ ಮಾಡಬೇಕು. ವಿಕ್ರಂ ಭಟ್ ಅವರ ಮಾಯಾ, ತಂತ್ರ ವಿಡಿಯೊ ಸರಣಿಗಳು ಜನಪ್ರಿಯವಾಗಿವೆ. ಈ ಸರಣಿ ವಿಡಿಯೊಗಳನ್ನು 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.
ಗೂಗಲ್ ಪ್ಲೇಸ್ಟೋರ್: vb theater app

ಡೈಲಿಹಂಟ್‌ನಿಂದ ಸಂಕ್ಷಿಪ್ತ ಸುದ್ದಿಗೆ ಹೊಸ ನ್ಯೂಜ್ಲಿ ಆ್ಯಪ್‌
ಸುದ್ದಿ ಮಾದರಿಯ ಕಂಟೆಂಟ್ ಅಪ್ಲಿಕೇಷನ್ ಸಂಸ್ಥೆ ಡೈಲಿಹಂಟ್ ಇದೀಗ ಸಂಕ್ಷಿಪ್ತ ಸುದ್ದಿಗಾಗಿ ನ್ಯೂಜ್ಲಿ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಓದುಗರಿಗೆ ಸುದ್ದಿಯನ್ನು ಸಂಕ್ಷಿಪ್ತವಾಗಿ ಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ. ಉದಾಹರಣೆಗೆ ರಾಜ್ಯದ ಮುಖ್ಯಮಂತ್ರಿ ಗಣರಾಜ್ಯೋತ್ಸವದ ದಿನ 2 ಗಂಟೆಗಳ ಕಾಲ ಭಾಷಣ ಮಾಡುತ್ತಾರೆ. ಈ ಭಾಷಣದ ಸಂಕ್ಷಿಪ್ತ ರೂಪವನ್ನು ನ್ಯೂಜ್ಲಿ ಆ್ಯಪ್ ಮೂಲಕ ಓದುಗರಿಗೆ ನೀಡಲಾಗುತ್ತದೆ. ಕನ್ನಡ ಸೇರಿದಂತೆ ದೇಶದ 9 ಭಾಷೆಗಳಲ್ಲಿ ಈ ಆ್ಯಪ್ ಲಭ್ಯವಿದೆ.


ರಾಜಕೀಯ, ಕ್ರೀಡೆ, ಸಿನಿಮಾ, ಮನರಂಜನೆ, ಗ್ಯಾಜೆಟ್, ಅಂತರರಾಷ್ಟ್ರೀಯ, ವಾಣಿಜ್ಯ ಸುದ್ದಿಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಓದಬಹುದು. ಓದುಗರು ಸುದ್ದಿಗಳನ್ನು ಆ್ಯಪ್ ಮೂಲಕ ಸಾಮಾಜಿಕ ಜಾಲತಾಣಗಳಿಗೂ ಸುಲಭವಾಗಿ ಹಂಚಿಕೊಳ್ಳಬಹುದು ಎಂದು ಡೈಲಿಹಂಟ್ ಸಿಇಒ ವಿರೇಂದ್ರ ಗುಪ್ತ ಹೇಳಿದ್ದಾರೆ. ಈ ಆ್ಯಪ್ ಆಂಡ್ರಾಯ್ಡ್‌ ಮಾದರಿಯಲ್ಲಿ ಮಾತ್ರ ಲಭ್ಯವಿದೆ.
ಗೂಗಲ್ ಪ್ಲೇಸ್ಟೋರ್: newzly app

ಟ್ವಿಟರ್‌ನಲ್ಲಿ ಸ್ನ್ಯಾಪ್‌ಚಾಟ್‌ ಟೂಲ್
ಸ್ನ್ಯಾಪ್‌ಚಾಟ್‌ (Snapchat) ಪ್ರಿಯರಿಗೆ ಒಂದು ಸಿಹಿ ಸುದ್ದಿಯನ್ನು ಟ್ವಿಟರ್ ತಂದಿದೆ. ಇನ್ನು ಮುಂದೆ ಟ್ವಿಟರ್‌ನಲ್ಲಿ ಸಹ ಸ್ನ್ಯಾಪ್‌ಚಾಟ್‌ ಸೌಲಭ್ಯ ಸಿಗಲಿದೆ. ಇದನ್ನು ವಿಡಿಯೊಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಟ್ವಿಟರ್ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಅಕ್ಷರಗಳ ಮಿತಿ, ಹಾಗೂ ವಿಡಿಯೊದ ಕಾಲ ಮಿತಿಯನ್ನು ಹೆಚ್ಚಿಸುವ ಮೂಲಕ ಬಳಕೆದಾರರು ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಸ್ನ್ಯಾಪ್‌ಚಾಟ್‌ ಪ್ರಿಯರಿಗೆ ಹೊಸ ಟೂಲ್ ಬಿಡುಗಡೆ ಮಾಡುವ ಮೂಲಕ ಬಳಕೆದಾರರನ್ನು ಹೆಚ್ಚು ಹೆಚ್ಚು ಸೆಳೆಯಲು ಪ್ರಯತ್ನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT