ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆಯಲ್ಲಿ ಹೆಣ್ಣು ಹುಲಿ ಸಾವು

Last Updated 7 ಫೆಬ್ರುವರಿ 2018, 6:52 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ಹುಲಿ ರಕ್ಷಿತಾರಣ್ಯದ ಆನೇಚೌಕೂರು ವಲಯದಲ್ಲಿ 8 ವರ್ಷದ ಹೆಣ್ಣು ಹುಲಿಯ ಮೃತದೇಹ ಮಂಗಳವಾರ ದೊರಕಿದೆ. ಮೇಲ್ನೋಟಕ್ಕೆ ಮೈಮೇಲೆ ಬೇರೆ ಹುಲಿ ಮಾಡಿರುವ ಗಾಯದ ಗುರುತುಗಳು ಕಂಡು ಬಂದಿವೆ. ಮತ್ತೊಂದು ಹುಲಿಯೊಂದಿಗೆ ನಡೆಸಿದ ಕಾದಾಟದಲ್ಲಿ ಮೃತಪಟ್ಟಿರಬಹುದು ಎನ್ನಲಾಗಿದೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ.

‘ಮೃತಪಟ್ಟಿರುವ ಹುಲಿಯನ್ನು ಅಂತರಸಂತೆ ವಲಯ ಅರಣ್ಯ ಪ್ರದೇಶದಲ್ಲಿ 2014, 2015 ಹಾಗೂ 2016ನೇ ಸಾಲಿನಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ವೇಳೆ ಗುರುತಿಸಿ, 44 ಎಂಬ ಸಂಕೇತ ಸಂಖ್ಯೆಯನ್ನು ನೀಡಲಾಗಿತ್ತು. ಆದರೆ, ಈಗ ಆನೆಚೌಕೂರು ವಲಯದಲ್ಲಿ ಮೃತಪಟ್ಟಿದೆ’ ಎಂದು ಹುಲಿ ಯೋಜನಾ ನಿರ್ದೇಶಕ ಮಣಿಕಂಠನ್ ತಿಳಿಸಿದರು.

‘ಹುಲಿಯ ಸಂತಾನಾಭಿವೃದ್ಧಿಯ ಕಾಲ ಇದಾಗಿದೆ. ಈ ಸಮಯದಲ್ಲಿ ಹೆಣ್ಣು ಹುಲಿಯೊಂದಿಗೆ ಗಂಡು ಹುಲಿಗಳು ಕೂಡುವುದಕ್ಕೆ ಸಂಘರ್ಷ ನಡೆಸುತ್ತವೆ. ಈ ಕಾದಾಟದಲ್ಲಿ ಹುಲಿ ಮೃತಪಟ್ಟಿರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT