ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ರಿಂದ 22ರವರೆಗೆ ಶಿವರಾತ್ರಿ ಮಹೋತ್ಸವ

Last Updated 8 ಫೆಬ್ರುವರಿ 2018, 10:04 IST
ಅಕ್ಷರ ಗಾತ್ರ

ತುರುವನೂರು: ಹೋಬಳಿಯ ಬೆಳಗಟ್ಟ ಗ್ರಾಮದ ಗುರು ಕರಿಬಸವೇಶ್ವರಜ್ಜಯ್ಯ ಮಠದಲ್ಲಿ ಫೆ.13 ರಿಂದ 22ರ ವರೆಗೆ ಮಹಾಶಿವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಫೆ. 13 ಸಂಜೆ 6.40 ರಿಂದ ಶ್ರೀಮಠದಲ್ಲಿ ಭಕ್ತರಿಂದ ಜಾಗರಣೆ ಮತ್ತು ಭಜನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ. 14 ರಂದು ಬೆಳಿಗ್ಗೆ 2.43 ರಿಂದ 4 ರವರೆಗೆ ಅಮ್ಮಮಹದೇವಮ್ಮ ಮತ್ತು ನಾಗೇಶ್ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ಮತ್ತು ರುದ್ರಹೋಮ ನೆರವೇರಲಿದೆ.

ದುರ್ಗಾಪರಮೇಶ್ವರಿ ದೇವಿಗೆ ಶರಣರಿಂದ ಅಭಿಷೇಕ, ಕಂಕಣ ಧಾರಣೆ, ಬಳೆ ಮತ್ತು ಸುವರ್ಣ ಸಮರ್ಪಣೆಯೊಂದಿಗೆ ಅಲಂಕಾರ ನಂತರ ಮುತ್ತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ. ಬೆಳಿಗ್ಗೆ 5.45ರಿಂದ 6 ರೊಳಗೆ ಮಕ್ಕಳಿಂದ ಧ್ವಜಾರೋಹಣ ನೆರವೇರಲಿದೆ.

ಫೆ.15 ರಂದು ನವಗ್ರಹ ದಂಪತಿ ದೇವರುಗಳಿಗೆ ಪಂಚಾಮೃತ ಅಭಿಷೇಕ ನಡೆಯಲಿದ್ದು, ಸಂಜೆ 6.30ಕ್ಕೆ ಶರಣರಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಫೆ. 16 ರಂದು ನವಗ್ರಹ ದೇವರುಗಳಿಗೆ ಪೂಜೆ ಮತ್ತು ಮಡಿಲಕ್ಕಿ ಸಮರ್ಪಿಸಲಾಗುವುದು. ನಂತರ ಮಧ್ಯಾಹ್ನ 3.09 ಕ್ಕೆ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಫೆ.17ರಂದು ಗುರು ಕರಿಬಸವೇಶ್ವರಜ್ಜಯ್ಯಸ್ವಾಮಿ ಹಾಗೂ ದುರ್ಗಾಪರಮೇಶ್ವರಿ ದೇವಿಯ 17ನೇ ವರ್ಷದ ಮಹಾರಥೋತ್ಸವ, ಜ್ಞಾನ ದಾಸೋಹ, ಪ್ರತಿಭಾ ಪುರಸ್ಕಾರ ಹಾಗೂ ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ.

ಶ್ರೀಮಠದ ಪೀಠಾಧ್ಯಕ್ಷೆ ಅಮ್ಮಮಹದೇವಮ್ಮ ಅಧ್ಯಕ್ಷತೆ ವಹಿಸುವರು. ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಉರಗಾದ್ರಿ ಗವಿಮಠ ಸಂಸ್ಥಾನದ ಡಾ.ಕರಿಬಸವರಾಜೇಂದ್ರ ಸ್ವಾಮೀಜಿ ಅವರು ಕೃತಿಕಾ – 2 ಗ್ರಂಥ ಬಿಡುಗಡೆಗೊಳಿಸುವರು.

ಶೃಂಗೇರಿ ಶಾಖಾ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಗುಣನಾಥ ಸ್ವಾಮೀಜಿ ಹಾಗೂ ಚುಂಚನಕಟ್ಟೆ ಶಾಖಾ ಮಠದ ಶಿವಾನಂದ ಸ್ವಾಮೀಜಿ ಅವರು ‘ಮರ್ತ್ಯದ ವಿಸ್ಮಯ ಮಹಾದೇವಮ್ಮ’ ಎಂಬ ಗ್ರಂಥವನ್ನು ಬಿಡುಗಡೆಗೊಳಿಸುವರು.

ಸಂಸದರಾದ ಬಿ.ಶ್ರೀರಾಮುಲು, ಬಿ.ಎನ್. ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT