ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಾಧಾರಿತ ರಾಜಕಾರಣದ ಧೀಮಂತ ನಾಯಕ: ಬಿ.ಜಿ.ಬಣಕಾರ

Last Updated 8 ಫೆಬ್ರುವರಿ 2018, 10:25 IST
ಅಕ್ಷರ ಗಾತ್ರ

ಹಿರೇಕೆರೂರ: ವಿಧಾನಸಭೆ ಮಾಜಿ ಅಧ್ಯಕ್ಷ ಬಿ.ಜಿ.ಬಣಕಾರ ಅವರು ನಾಡು ಕಂಡ ಅಪರೂಪದ ಪ್ರಾಮಾಣಿಕ ರಾಜಕಾರಣಿ. ಜುಲೈ 22, 1927ರಲ್ಲಿ ತಾಲ್ಲೂಕಿನ ಚಿಕ್ಕೊಣತಿ ಗ್ರಾಮದ ಕೃಷಿಕ ಮನೆತನದ ಗಡ್ಲಪ್ಪಗೌಡ ಹಾಗೂ ಶಿವಗಂಗವ್ವ ದಂಪತಿಯ ಪುತ್ರನಾಗಿ ಜನಿಸಿದ ಬಿ.ಜಿ.ಬಣಕಾರ ಇನ್ನು ನೆನಪು ಮಾತ್ರ.

ರಾಜ್ಯ ರಾಜಕಾರಣದಲ್ಲಿಯೇ ಛಾಪು ಮೂಡಿಸಿದ್ದ ಬಿ.ಜಿ.ಬಣಕಾರ ಅವರು ಬಿ.ಎ. ಎಲ್ಎಲ್‌ಬಿ ಪದವಿ ಮುಗಿಸಿ 1955ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಗಂಭೀರ ಭಾವ ಮುದ್ರೆಯ ಮುಖ, ಸಾತ್ವಿಕ ತೇಜಸ್ಸು ಹೊಂದಿದ್ದ ಅವರು ಅಲ್ಪ ಅವಧಿ ಯಲ್ಲಿಯೇ ಜನಾನುರಾಗಿ ಎನಿಸಿದರು. ಗ್ರಾಮ ಪಂಚಾಯ್ತಿ ಮೂಲಕ ಚುನಾವಣಾ ರಾಜಕೀಯಕ್ಕೆ ಧುಮುಕಿದ ಅವರು ನಂತರ ಮೂರು ಬಾರಿ ಶಾಸಕರಾದರು.

1976ರಲ್ಲಿ ಡಿ.ದೇವರಾಜ ಅರಸು ಸಂಪುಟದಲ್ಲಿ ಪಶು ಸಂಗೋಪನಾ ಸಚಿವರಾಗಿ ಕರ್ತವ್ಯ ನಿರ್ವಹಿಸಿದರು. 1985ರಲ್ಲಿ 3ನೇ ಬಾರಿಗೆ ಜನತಾ ಪಕ್ಷದಿಂದ ಆರಿಸಿ ಬಂದು ವಿಧಾನಸಭಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ನಂತರದ ಚುನಾವಣೆಯಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆದ ಬಿ.ಜಿ.ಬಣಕಾರ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿ.ಜಿ.ಬಣಕಾರ ಪ್ರತಿಷ್ಠಾನದ ಮೂಲಕ ಪ್ರತಿ ವರ್ಷ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಪ್ರತಿಷ್ಠಾನದ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು, ವಕೀಲರು, ನೌಕರರು ಹಾಗೂ ಪತ್ರಕರ್ತರನ್ನು ಸನ್ಮಾನಿಸುವ ಪರಿಪಾಠವನ್ನು ಪ್ರತಿ ವರ್ಷ ತಪ್ಪದೇ ನಡೆಸಿಕೊಂಡು ಬರುತ್ತಿದ್ದರು.

ಬಿ.ಜಿ.ಬಣಕಾರ ರಾಜಕೀಯ ನಿವೃತ್ತಿಯ ನಂತರ ಅವರ ಪುತ್ರ ಯು.ಬಿ.ಬಣಕಾರ 2ನೇ ಬಾರಿ ಶಾಸಕರಾಗಿದ್ದು, ಸಕ್ರಿಯ ರಾಜಕಾರಣದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಬಿ.ಜಿ.ಬಣಕಾರ ನಿಧನದಿಂದ ತಾಲ್ಲೂಕಿನಲ್ಲಿ ಶೋಕದ ಕಳೆ ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT