ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಬೆಳೆ ಕ್ಷೇತ್ರೋತ್ಸವ

Last Updated 9 ಫೆಬ್ರುವರಿ 2018, 9:20 IST
ಅಕ್ಷರ ಗಾತ್ರ

ಸಿರುಗುಪ್ಪ: ‘ರೈತರು ಹತ್ತಿ ಬೆಳೆಯಲ್ಲಿ ಕೀಟವನ್ನು ಹತೋಟಿ ಮಾಡಿದರೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದು’ ಎಂದು ಜಿಲ್ಲಾ ಉಪಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್ ಹೇಳಿದರು.

ತಾಲ್ಲೂಕಿನ ಕುಡುದರಹಾಳು ಗ್ರಾಮದ ರೈತ ವಿರುಪನಗೌಡ ಜಮೀನಿನಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರು, ಭಾರತೀಯ ವ್ಯವಸ್ಥಾ ಪ್ರಬಂಧ ಸಂಸ್ಥೆ ಬೆಂಗಳೂರು, ಕೃಷಿ ಸಂಶೋಧನಾ ಕೇಂದ್ರ ಸಿರುಗುಪ್ಪ, ಕೃಷಿ ಇಲಾಖೆ ಹಾಗೂ ವಾಹಿನಿ ಅಭಿವೃದ್ಧಿ ಸಂಸ್ಥೆ ಹೊಸಪೇಟೆ ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ಹತ್ತಿ ಬೆಳೆ ಕ್ಷೇತ್ರೋತ್ಸವ ಮತ್ತು ರೈತರ ಬೆಳೆಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘ಸೇಡರ್ ಯಂತ್ರವನ್ನು ಬಳಿಸಿ ಹತ್ತಿಯ ಗಿಡವನ್ನು ಪುಡಿಯನ್ನಾಗಿಸುವ ಮೂಲಕ ಮಣ್ಣಿಗೆ ಸೇರಿಸಿ ಮಣ್ಣಿನ ಫಲವತ್ತತ್ತೆ ಹೆಚ್ಚಿಸಬಹುದು. ಇಲ್ಲವಾದರೆ ಗಿಡದಲ್ಲಿ ಉಳಿದಿರುವ ಕೀಟಗಳನ್ನು ನಾಶಗೊಳ್ಳುತ್ತವೆ’ ಎಂದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಈ ಸಾಪ್ ತಜ್ಞ ಡಾ.ಪ್ರಭುರಾಜ , ಕೀಟ ಶಾಸ್ತ್ರ ವಿಜ್ಞಾನಿ ಡಾ.ಭೀಮಣ್ಣ ಹತ್ತಿ ಬೆಳೆಯಲ್ಲಿ ಬರುವ ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಟ್ಟಿ ರಾಮಲಿಂಗಪ್ಪ, ಸದಸ್ಯ ಪ್ರತಾಪರೆಡ್ಡಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ.ಎಂ.ವಿಶ್ವನಾಥಸ್ವಾಮಿ, ಕೃಷಿ ವಿಜ್ಞಾನಿಗಳಾದ ಎಂ.ಎ.ಬಸವಣ್ಣೆಪ್ಪ, ಆಶೋಕ್‌ಕುಮಾರಗಡ್ಡಿ, ಎಡಿಎ ಬಿ.ಆರ್.ಪಾಲಕ್ಷಗೌಡ, ಶಿವಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT