ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮೇಶ್ವರ ದೇವಾಲಯದಲ್ಲಿ ಶಿವಲಿಂಗ ಅಲಂಕರಿಸಲಿದೆ ಸೂರ್ಯನ ಪ್ರಭೆ

Last Updated 12 ಫೆಬ್ರುವರಿ 2018, 7:04 IST
ಅಕ್ಷರ ಗಾತ್ರ

ಕೋರಾ: ಇಲ್ಲಿಗೆ ಸಮೀಪದ ಹಿರೇತೊಟ್ಲುಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮರುದಿನ ಗರ್ಭಗುಡಿಯ ಲಿಂಗದ ಮೇಲೆ ಸೂರ್ಯನ ಪ್ರಭೆ ಬೀಳಲಿದೆ. ವರ್ಷಕ್ಕೊಮ್ಮೆ ಮಾತ್ರ ಸೂರ್ಯ ರಶ್ಮಿಯ ವಿಸ್ಮಯ ನಡೆಯಲಿದ್ದು, ಇದರ ವೀಕ್ಷಣೆಗೆ ನೂರಾರು ಭಕ್ತರು ಬರುವರು.

ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಾಂತಿ ದಿನ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸುತ್ತವೆ. ಅದೇ ವಿನ್ಯಾಸದೊಂದಿಗೆ ರೂಪುಗೊಂಡ ಸುಮಾರು 300 ವರ್ಷ ಇತಿಹಾಸದ ಹಿರೇತೊಟ್ಲುಕೆರೆ ಸೋಮೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮರುದಿನ ಸೂರ್ಯೋದಯದಲ್ಲಿ ಕೆಂಬಣ್ಣದ ಪ್ರಥಮ ಕಿರಣಗಳು ಸೋಮೇಶ್ವರ ದೇವರ ಲಿಂಗದ ಮೇಲೆ ಬೀಳುತ್ತವೆ.

ಈ ಐತಿಹ್ಯವನ್ನು ಭಕ್ತರು ಕಣ್ತುಂಬಿಕೊಳ್ಳುವರು. ಇದಕ್ಕೆ ದೇವಾಲಯದ ವಿಶಿಷ್ಟ ಶೈಲಿಯ ವಿನ್ಯಾಸವನ್ನು ರೂಪಿಸಿರುವುದೇ ಕಾರಣ. ಪೂರ್ವಾಭಿಮುಖವಾಗಿ ನಿರ್ಮಿಸಿದ ದೇವಾಲಯದ ಮುಖ್ಯ ದ್ವಾರಕ್ಕೆ ಶಿವರಾತ್ರಿ ಮರುದಿನ ಅಭಿಮುಖವಾಗಿ ಸೂರ್ಯ ಬಂದಾಗ ಲಿಂಗದ ಮೇಲೆ ರಶ್ಮಿ ಬೀಳುವುದು. ಇದು ಆಕರ್ಷಕವಾಗಿದ್ದು ಎಲ್ಲರ ಗಮನ ಸೆಳೆಯುತ್ತದೆ.

ಸ್ಥಳ ಪುರಾಣ: ನೊಳಂಬ ಅರಸು ಮನೆತನಕ್ಕೆ ಸೇರಿದ ಮಹಾನಾಡು ಪ್ರಭುಗಳು ಕೋರಾ ಗ್ರಾಮ ನಿರ್ಮಿಸಿ, ಅದನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದರು. ಶಿವನ ವಾಹನ ನಂದಿ ನೊಳಂಬ ಅರಸರ ಲಾಂಛನವಾಗಿತ್ತು. ಅವರು ನಿರ್ಮಸಿದ ಶಿವನ ದೇವಾಲಯಗಳಲ್ಲಿ ನಂದಿನ ಬೃಹತ್‌ ವಿಗ್ರಹ ಸ್ಥಾಪನೆಗೆ ಒತ್ತು ನೀಡಿದ್ದಾರೆ. ಅದೇ ರೀತಿ ಇಲ್ಲಿಯ ಸೋಮೇಶ್ವರ ದೇವಾಲಯದಲ್ಲೂ ನಂದಿ ವಿಗ್ರಹ ಗಮನ ಸೆಳೆಯುತ್ತದೆ.

ದೇವಾಲಯ ಮುಂಭಾಗದಲ್ಲಿ ತಳಪಾಯವಿಲ್ಲದ ಸಮತಳದ ಮೇಲೆ ನಿರ್ಮಿಸಿದ ಕಲ್ಲಿನ ಮಂಟಪವಿದೆ. ಅಲ್ಲಿ ಅರಸು ಮನೆತನವದವರು ವಿಜಯ ದಶಮಿ ದಿನ ಅಂಬು ಹಾಯುವ ಸಂಸ್ಕೃತಿ ರೂಢಿಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT