ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಅಕೌಂಟ್ ಸುರಕ್ಷತೆ

Last Updated 3 ಜುಲೈ 2018, 20:27 IST
ಅಕ್ಷರ ಗಾತ್ರ

ಜನಪ್ರಿಯ ಮಾಹಿತಿ ಹುಡುಕುತಾಣ ಗೂಗಲ್, ತನ್ನ ಬಳಕೆದಾರರ ಖಾತೆ ರಕ್ಷಣೆಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು ಇದರಿಂದ ಗೂಗಲ್ ಅಕೌಂಟ್‌ಗಳು ಹೆಚ್ಚು ಸುರಕ್ಷಿತವಾಗಿರಲಿವೆ.

ಈ ಹೊಸ ವೈಶಿಷ್ಟ್ಯವನ್ನು ಗೂಗಲ್ ಅಕೌಂಟ್ ಮೆನುವಿನಲ್ಲಿ ಸೇರಿಸಲಾಗಿದೆ. ಇದರಿಂದ ನೇವಿಗೇಷನ್ ಬಳಕೆ ಸುಲಭ ಮತ್ತು ಸರಳವಾಗಲಿದೆ. ಹಾಗೇ ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ಸಂರಕ್ಷಿತವಾಗಿರಲಿದೆ. ಮೊದಲು ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್‌ ಮಾದರಿಯಲ್ಲಿ ಮಾತ್ರ ಪರಿಚಯಿಸಲಾಗುತ್ತಿದ್ದು, ಇದರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಐಒಎಸ್ ಮಾದರಿಗೂ ವಿಸ್ತರಣೆ ಮಾಡಲಾಗುವುದು. ಬಳಕೆದಾರರು ಸೆಟ್ಟಿಂಗ್ಸ್ ಹೋಗಿ ಸೆಕ್ಯೂರಿಟಿ ಚೆಕ್ಅಪ್ ನಲ್ಲಿರುವವೈಯಕ್ತಿಕ ವಿಭಾಗವನ್ನು ಗಮನಿಸಿದರೆ ಈ ಹೊಸ ವೈಶಿಷ್ಟ್ಯವನ್ನು ಗಮನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT